Viral Video: ಪತಿಯ ತೊಡೆಯ ಮೇಲೆ ಮಲಗಿದ ಮಹಿಳೆಗೆ ಬಿತ್ತು ಭಾರೀ ದಂಡ; ಏನಿದು ವೈರಲ್ ವಿಡಿಯೊ?
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಮಹಿಳೆಯೊಬ್ಬಳು ಹೈಸ್ಪೀಡ್ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಾಯಕಾರಿ ಸ್ಟಂಟ್‍ಗಳನ್ನು ಮಾಡಿದ್ದು, ಇದು ಸೋಶಿಯ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ವಿಡಿಯೊ ನೋಡಿ ಆರ್‌ಟಿಒ ಅಧಿಕಾರಿಗಳು ಮಹಿಳೆಯ ವಿರುದ್ಧ 22,500 ರೂ.ಗಳ ದಂಡವನ್ನು ವಿಧಿಸಿದ್ದಾರೆ.


ನವದೆಹಲಿ: ರೀಲ್ಸ್ ಮಾಡುವುದು ಈಗ ಕ್ರೇಜ್ ಆಗಿದೆ. ವ್ಯೂವ್ಸ್ ಹಾಗೂ ಶೇರ್‌ಗಾಗಿ ಜನ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರೀಲ್ ಮಾಡುತ್ತಾರೆ. ಹೈವೇ ಮಧ್ಯೆ ಕುಳಿತುಕೊಳ್ಳುವುದು, ರೈಲಿನಲ್ಲಿ ಸ್ಟಂಟ್ ಮಾಡುವುದು ಹೀಗೆ ಒಂದಾ ...ಎರಡಾ... ಇದೀಗ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಮಹಿಳೆಯೊಬ್ಬಳು ಹೈಸ್ಪೀಡ್ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಾಯಕಾರಿ ಸ್ಟಂಟ್‍ಗಳನ್ನು ಒಳಗೊಂಡ ರೀಲ್‍ಗಳನ್ನು ಮಾಡಿದ್ದು, ಇದು ಸೋಶಿಯ್ ಮೀಡಿಯಾದಲ್ಲಿ ವೈರಲ್(Viral Video) ಆದ ನಂತರ ಭಾರೀ ದಂಡ ತೆತ್ತಿದ್ದಾಳಂತೆ. ವೈರಲ್ ಆದ ವಿಡಿಯೊದಲ್ಲಿ ಚಲಿಸುವ ಕಾರಿನ ಬಾನೆಟ್ ಮೇಲೆ ಕುಳಿತು ಹಾಗು ನಿಂತುಕೊಂಡು ಮಹಿಳೆ ಡ್ಯಾನ್ಸ್ ಮಾಡಿದ್ದಾಳೆ ಮತ್ತು ಇನ್ನೊಂದು ವಿಡಿಯೊದಲ್ಲಿ, ಅವಳು ತನ್ನ ಪತಿ ಡ್ರೈವಿಂಗ್ ಮಾಡುವಾಗ ಅವನ ತೊಡೆಯ ಮೇಲೆ ಮಲಗಿರುವುದು ಕೂಡ ರೆಕಾರ್ಡ್ ಆಗಿದೆ.
ಇದು ಶೀಘ್ರದಲ್ಲಿಯೇ ವೈರಲ್ ಆಗಿ ಕಾನ್ಪುರ ನಗರ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಗಮನವನ್ನು ಸೆಳೆದಿದೆ. ಅಧಿಕಾರಿಗಳು ವಿಡಿಯೊಗಳನ್ನು ಪರಿಶೀಲಿಸಿ ಇಂತಹ ನಡವಳಿಕೆಯನ್ನು ಕಾನೂನುಬಾಹಿರ ಮಾತ್ರವಲ್ಲದೆ ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯವೆಂದು ಪರಿಗಣಿಸಿದ್ದಾರೆ. ಹೀಗಾಗಿ ಸಾರ್ವಜನಿಕ ಹೆದ್ದಾರಿಯಲ್ಲಿ ಸ್ಟಂಟ್ ಮಾಡಿದ್ದಕ್ಕಾಗಿ ಇಲಾಖೆಯು ಮಹಿಳೆಯ ವಿರುದ್ಧ 22,500 ರೂ.ಗಳ ದಂಡವನ್ನು ವಿಧಿಸಿದೆ.
ವಿಡಿಯೊ ಇಲ್ಲಿದೆ ನೋಡಿ...
रील का नशा महिलाओं के सिर चढ़कर बोल रहा है।
— Manraj Meena (@ManrajM7) April 20, 2025
अब इस मोहतरमा को ही देख लो कार के बोनट पर बैठ कर रील बना रही है।
अब मैडम का 22500 का चालान काट दिया गया है। pic.twitter.com/nioeAsDSph
ಅಲ್ಲದೇ ಈ ಕಾರು ಔರೈಯಾದ ಬಾರಾಮೌಪುರದ ಉಪೇಂದ್ರ ಸಿಂಗ್ ಚೌಹಾಣ್ ಅವರ ಹೆಸರಿನಲ್ಲಿ ನೋಂದಣಿಯಾಗಿದೆ. ಹಾಗಾಗಿ ಅವರ ಮೇಲೆ ಕೂಡ ದಂಡ ವಿಧಿಸಲಾಗಿದೆ. ಸ್ಟಂಟ್‍ಗಳನ್ನು ಮಾಡಲು ಕಾರನ್ನು ನೀಡಿದ್ದಕ್ಕಾಗಿ ಆರ್‌ಟಿಒ ಅವರ ವಿರುದ್ಧ 5,000 ರೂ.ಗಳ ದಂಡವನ್ನು ವಿಧಿಸಿದೆ. ಕಾರಿನ ಬಾನೆಟ್ ಮೇಲೆ ಡ್ಯಾನ್ಸ್ ಮಾಡುವುದು ಸಾರ್ವಜನಿಕ ಸುರಕ್ಷತೆಗೆ ಅಪಾಯಕಾರಿಯಾದ ಕಾರಣ 5,000 ರೂ.ಗಳ ಹೆಚ್ಚುವರಿ ದಂಡವನ್ನು ಸೇರಿಸಲಾಗಿದೆ.
ಈ ವಿಡಿಯೊ ಶೀಘ್ರದಲ್ಲೇ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊ ನೋಡಿದ ನೆಟ್ಟಿಗರು ಮಹಿಳೆಯನ್ನು 'ರೀಲ್ ಭಾಬಿ' ಎಂದು ಕರೆದಿದ್ದಾರೆ. ಕೆಲವರು ಅವಳ ಧೈರ್ಯವನ್ನು ಹೊಗಳಿದರೆ, ಇತರರು ಅದರಿಂದಾಗಿವ ಅಪಾಯದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಆನೆ ಮರಿಗೂ ಬರ್ತ್ ಡೇ ಭಾಗ್ಯ! ಕ್ಯೂಟ್ ವಿಡಿಯೊ ನೋಡಿ ನೆಟ್ಟಿಗರು ಫುಲ್ ಫಿದಾ
ಚಲಿಸುತ್ತಿರುವ ಕಾರಿನಲ್ಲಿ ರೀಲ್!
ಚಲಿಸುತ್ತಿರುವ ಕಾರಿನಲ್ಲಿ ರೀಲ್ಸ್ ಮಾಡಿದ್ದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಚಲಿಸುತ್ತಿರುವ ಕಾರಿನ ಛಾವಣಿಯ ಮೇಲೆ ಯುವಕನೊಬ್ಬ ಸ್ಟಂಟ್ ಮಾಡಿದ ವಿಡಿಯೊವೊಂದು ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿತ್ತು. ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೊವನ್ನು ಗಮನಿಸಿದ ಪೊಲೀಸರು ತನಿಖೆ ಶುರುಮಾಡಿದ್ದರು. ವೈರಲ್ ಆದ ವಿಡಿಯೊದಲ್ಲಿ, ಬಿಳಿ ಮಾರುತಿ ಎರ್ಟಿಗಾದಲ್ಲಿ ಒಬ್ಬ ಯುವಕ ವೇಗವಾಗಿ ಚಲಿಸುವ ಕಾರಿನ ಮೇಲ್ಭಾಗದಲ್ಲಿ ನಿಂತಿದ್ದರೆ, ಇನ್ನೊಬ್ಬ ಕಿಟಕಿಯಿಂದ ಹೊರಗೆ ವಾಲುತ್ತಿರುವುದು ರೆಕಾರ್ಡ್ ಆಗಿದೆ. ಇಬ್ಬರು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡಿದ್ದರು. ಹಾಗೇ ಅವರು ಈ ಅಪಾಯಕಾರಿ ಸ್ಟಂಟ್ ಮಾಡುವಾಗ ಮೊಬೈಲ್ ಫೋನ್ ಅನ್ನು ಕೂಡ ಬಳಸಿದ್ದಾರಂತೆ. ಈ ಸ್ಟಂಟ್ ಅನ್ನು ನೋಡಿದವರಲ್ಲಿ ಒಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್ ಆಗಿ ಗ್ವಾಲಿಯರ್ ನಗರದ ಪೊಲೀಸರ ಗಮನ ಸೆಳೆದಿದೆ. ಹೀಗಾಗಿ ಪೊಲೀಸರು ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಕಾರನ್ನು ಗುರುತಿಸಿದ್ದಾರೆ ಮತ್ತು ಅವರ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಿದ್ದಾರೆ.