Airports closure: ಭಾರತ-ಪಾಕ್ ಉದ್ವಿಗ್ನತೆ- ದೇಶದಲ್ಲಿ 32 ಏರ್‌ಪೋರ್ಟ್‌ಗಳು ಬಂದ್!
India-Pakistan Tensions:ಜಮ್ಮುವಿನಾದ್ಯಂತ ಅನೇಕ ಸ್ಥಳಗಳು ಹಾಗೂ ಪಂಜಾಬ್ ಮತ್ತು ರಾಜಸ್ಥಾನದ ಕೆಲವು ಭಾಗಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಭಾರತದ ಮೇಲೆ ಸರಣಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಇದರ ಬೆನ್ನಲ್ಲೇ 32 ವಿಮಾನ ನಿಲ್ದಾಣಗಳು ಮೇ 14 ರವರೆಗೆ ನಾಗರಿಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.


ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ(India-Pakistan Tensions) ಹೆಚ್ಚಾದ ಹಿನ್ನೆಲೆಯಲ್ಲಿ, ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ ಕನಿಷ್ಠ 32 ವಿಮಾನ ನಿಲ್ದಾಣಗಳು ಮೇ 14 ರವರೆಗೆ ನಾಗರಿಕ ಕಾರ್ಯಾಚರಣೆಯನ್ನು ಸ್ಥಗಿತ(Airports In India Shut)ಗೊಳಿಸಿವೆ. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದ್ದು, ತಾತ್ಕಾಲಿಕ ಸ್ಥಗಿತವನ್ನು ಘೋಷಿಸಿದೆ.
ಬುಧವಾರ ಬೆಳಗ್ಗೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಸಶಸ್ತ್ರ ಪಡೆಗಳು ದಾಳಿ ನಡೆಸಿದ ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಏಪ್ರಿಲ್ 22 ರಂದು 25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯ ವ್ಯಕ್ತಿ ಸೇರಿದಂತೆ 26 ಜನರನ್ನು ಕೊಂದ ಭೀಕರ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲಾಯಿತು. ಇದರ ಬೆನ್ನಲ್ಲೇ ಗಡಿಯಲ್ಲಿ ಭಾರೀ ಪಕ್ಷುಬ್ದತೆ ಉಂಟಾಗಿದೆ. ಜಮ್ಮುವಿನಾದ್ಯಂತ ಅನೇಕ ಸ್ಥಳಗಳು ಹಾಗೂ ಪಂಜಾಬ್ ಮತ್ತು ರಾಜಸ್ಥಾನದ ಕೆಲವು ಭಾಗಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಭಾರತದ ಮೇಲೆ ಸರಣಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಇದರ ಬೆನ್ನಲ್ಲೇ ವಿಮಾನಯಾನ ಸಚಿವಾಲಯದ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Operation Sindoor Film: ತೆರೆ ಮೇಲೆ ಬರಲಿದೆ ʻಆಪರೇಷನ್ ಸಿಂದೂರ್ʼ-ಫಸ್ಟ್ ಪೋಸ್ಟರ್ ರಿಲೀಸ್
ಪಾಕಿಸ್ತಾನದ ಅಪ್ರಚೋದಿತ ದಾಳಿಯ ನಂತರ ಭಾರತದಲ್ಲಿ ಮುಚ್ಚಲಾದ ವಿಮಾನ ನಿಲ್ದಾಣಗಳ ಸಂಪೂರ್ಣ ಪಟ್ಟಿ:
- ಅಧಂಪುರ
- ಅಂಬಾಲ
- ಅಮೃತಸರ
- ಅವಂತಿಪುರ
- ಬಟಿಂಡಾ
- ಭುಜ್
- ಬಿಕಾನೇರ್
- ಚಂಡೀಗಢ
- ಹಲ್ವಾರ
- ಹಿಂಡನ್
- ಜೈಸಲ್ಮೇರ್
- ಜಮ್ಮು
- ಜಾಮ್‌ನಗರ
- ಜೋಧಪುರ
- ಕಾಂಡ್ಲಾ
- ಕಂಗ್ರಾ (ಗಗ್ಗಲ್)
- ಕೇಶೋದ್
- ಕಿಶನ್‌ಗಡ್
- ಕುಲು ಮನಾಲಿ (ಭುಂಟರ್)
- ಲೇಹ್
- ಲುಧಿಯಾನ
- ಮುಂದ್ರಾ
- ನಲಿಯಾ
- ಪಠಾಣ್‌ಕೋಟ್
- ಪಟಿಯಾಲ
- ಪೋರಬಂದರ್
- ರಾಜ್‌ಕೋಟ್ (ಹಿರಾಸರ್)
- ಸರಸವಾ
- ಶಿಮ್ಲಾ
- ಶ್ರೀನಗರ
- ಥೋಯಿಸ್
- ಉತ್ತರಲೈ