ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Danish Kaneria: ಜೈಪುರ ಕ್ರೀಡಾಂಗಣದಿಂದ ಪಾಕ್‌ ಕ್ರಿಕೆಟಿಗನ ಫೋಟೋ ತೆರವು!

ಭಾರತದ ಕನೇರಿಯಾ 11 ಟೆಸ್ಟ್ ಮತ್ತು ಎರಡು ಏಕದಿನ ಪಂದ್ಯಗಳನ್ನು ಆಡಿ ಒಟ್ಟು 44 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ 44 ವರ್ಷದ ಅವರು ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ವಿರುದ್ಧ ಸಾಕಷ್ಟು ಧ್ವನಿ ಎತ್ತಿದ್ದರು. ಆದಾಗ್ಯೂ, ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಿಂದ ಅವರ ಛಾಯಾಚಿತ್ರವನ್ನು ತೆಗೆದುಹಾಕಲಾಗಿದೆ.

ಜೈಪುರ ಕ್ರೀಡಾಂಗಣದಿಂದ ಪಾಕ್‌ ಕ್ರಿಕೆಟಿಗನ ಫೋಟೋ ತೆರವು!

Profile Abhilash BC May 19, 2025 5:42 PM

ಜೈಪುರ: ಆಪರೇಷನ್‌ ಸಿಂದೂರ ಮೂಲಕ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ವಿರುದ್ಧ ಭಾರತ ಪ್ರತೀಕಾರ ತೀರಿಸಿಕೊಂಡ ಬಳಿಕ ಉಭಯ ದೇಶಗಳ ಮಧ್ಯೆ ಉದ್ವಿಗ್ನತೆ ಹೆಚ್ಚಿದೆ. ಈಗಾಗಲೇ ಭಾರತ ಪಾಕ್‌(india pakistan tension) ವಿರುದ್ಧ ಬೃಹತ್‌ ರಾಜತಾಂತ್ರಿಕ ದಾಳಿಗೂ ಮುಂದಾಗಿದ್ದು ಈ ಮೂಲಕ ಪಾಕಿಸ್ತಾನದ ಉಗ್ರ ಮುಖವಾಡ ವಿಶ್ವಕ್ಕೆ ಬಯಲು ಮಾಡಲು ಹೊರಟಿದೆ. ಇದರ ಬೆನ್ನಲ್ಲೇ ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಿಂದ(Jaipur stadium) ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್‌ ಕನೇರಿಯಾ(Danish Kaneria) ಅವರ ಫೋಟೋವನ್ನು ತೆಗೆದುಹಾಕಲಾಗಿದೆ.

ಪಾಕಿಸ್ಥಾನವನ್ನು ಪ್ರತಿನಿಧಿಸಿದ ಕೇವಲ ಎರಡನೇ ಹಿಂದೂ ಕ್ರಿಕೆಟಿಗನಾಗಿರುವ ದಾನಿಶ್‌ ಕನೇರಿಯಾ ಪಾಕಿಸ್ತಾನ ಪರ ಮಣಿಕಟ್ಟಿನ ಸ್ಪಿನ್ನರ್ ಆಗಿದ್ದರು. ಅವರು 61 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 261 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 15 ಐದು ವಿಕೆಟ್ ಗೊಂಚಲು ಮತ್ತು ಎರಡು ಹತ್ತು ವಿಕೆಟ್ ಗೊಂಚಲುಗಳು ಸೇರಿವೆ. 2012ರಲ್ಲಿ ಫಿಕ್ಸಿಂಗ್‌ ಕಾರಣದಿಂದ ಕ್ರಿಕೆಟ್‌ನಿಂದ ಅಮಾನತಾಗಿದ್ದರು.