ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅರ್ಜೆಂಟೀನ ಅಧ್ಯಕ್ಷರ ಮುಖಕ್ಕೆ ಮೈಕ್‌ನಿಂದ ಹಲ್ಲೆ? ವೈರಲ್‌ ಆದ ವಿಡಿಯೋದಲ್ಲೇನಿದೆ?

ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೀ ಅವರ ಮುಖಕ್ಕೆ ಉದ್ದೇಶಪೂರ್ವಕವಾಗಿ ಮೈಕ್ರೊಫೋನ್‌ನಿಂದ ಹೊಡೆದಿದ್ದಾರೆ ಎಂದು ಆರೋಪಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿದೆ. ವೈರಲ್ ಆಗಿರುವ ಈ ವೀಡಿಯೊದಲ್ಲಿ, ಅರ್ಜೆಂಟೀನಾದ ಅಧ್ಯಕ್ಷರು ಮತಗಟ್ಟೆಯಿಂದ ಹೊರಡುವಾಗ ಮಾಧ್ಯಮ ಸಿಬ್ಬಂದಿ ಸುತ್ತುವರಿದಿದ್ದಾರೆ.

ಅರ್ಜೆಂಟಿನ ಅಧ್ಯಕ್ಷರ ಮುಖಕ್ಕೆ ಮೈಕ್‌ನಿಂದ ಹಲ್ಲೆ?

Profile Vishakha Bhat May 19, 2025 5:09 PM

ಬ್ಯೂನೆಸ್ ಐರಿಸ್: ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೀ ಅವರ ಮುಖಕ್ಕೆ ಉದ್ದೇಶಪೂರ್ವಕವಾಗಿ ಮೈಕ್ರೊಫೋನ್‌ನಿಂದ ಹೊಡೆದಿದ್ದಾರೆ ಎಂದು ಆರೋಪಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿದೆ. ವೈರಲ್ ಆಗಿರುವ ಈ ವೀಡಿಯೊದಲ್ಲಿ, ಅರ್ಜೆಂಟೀನಾದ ಅಧ್ಯಕ್ಷರು ಮತಗಟ್ಟೆಯಿಂದ ಹೊರಡುವಾಗ ಮಾಧ್ಯಮ (Viral Video) ಸಿಬ್ಬಂದಿ ಮತ್ತು ಅಧಿಕಾರಿಗಳೊಂದಿಗೆ ಸುತ್ತುವರೆದಿದ್ದು, ಮೈಕ್ರೊಫೋನ್ ಮುಖಕ್ಕೆ ಹೊಡೆದಾಡುವುದನ್ನು ತೋರಿಸುತ್ತದೆ. ಮೈಕ್ರೋಫೋನ್‌ನ ಸ್ಪಂಜಿನಿಂದ ಮುಚ್ಚಿದ ಭಾಗ ಮಾತ್ರ ತಾಗಿದ ಕಾರಣ ಅವರಿಗೆ ಸಣ್ಣ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಈ ಹೊಡೆತದಿಂದ ದಿಗ್ಭ್ರಮೆಗೊಂಡ ಜೇವಿಯರ್ ಮಿಲೀ, ಅರ್ಜೆಂಟೀನಾದ C5N ಟಿವಿ ಚಾನೆಲ್‌ನ ಪತ್ರಕರ್ತನ ಮೇಲೆ ವಾಗ್ದಾಳಿ ನಡೆಸಿ, ಉದ್ದೇಶಪೂರ್ವಕವಾಗಿಯೇ ಹೊಡೆದಿದ್ದಾರೆ ಎಂದು ಆರೋಪಿಸಿದರು. "ನೀವು ಉದ್ದೇಶಪೂರ್ವಕವಾಗಿಯೇ ನನಗೆ ಹೊಡೆದಿದ್ದೀರಾ?" ಎಂದು ಅವರು ಕೋಪಗೊಂಡರು. ವರದಿಗಳ ಪ್ರಕಾರ, ಅಧ್ಯಕ್ಷರಿಗೆ ಮೈಕ್ರೊಫೋನ್‌ನ ಸ್ಪಾಂಜ್‌ನಿಂದ ಮುಚ್ಚಿದ ಭಾಗ ತಗುಲಿದ ಕಾರಣ ಅವರಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ. ರಷ್ಯಾನ್ ಸುದ್ದಿ ಸಂಸ್ಥೆ ಟಾಸ್‌ನ ಪ್ರಕಾರ, ಅಧ್ಯಕ್ಷ ಮೈಲೆ ಪತ್ರಕರ್ತರ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿದ್ದು, ಮಾಧ್ಯಮವನ್ನು ಸರ್ಕಾರ ವಿರೋಧಿಯಾಗಿ ನೋಡುತ್ತಾರೆ. ಅವರು ತಮ್ಮ ಗೌಪ್ಯತೆಯನ್ನು ಪತ್ರಕರ್ತರು ಉಲ್ಲಂಘಿಸುತ್ತಾರೆ ಎಂಬ ಆರೋಪವನ್ನು ಮಾಡಿದ್ದಾರೆ. ಜೊತೆಗೆ, ಅವರು ಫೋಟೋಸೆನ್ಸಿಟಿವ್ (ಅತ್ಯಧಿಕ ಬೆಳಕಿಗೆ ಪ್ರತಿಕ್ರಿಯಿಸುವ) ಕಾರಣದಿಂದ ಪತ್ರಕರ್ತರು ಜಾಣ್ಮೆಯಿಂದ ಫ್ಲಾಶ್ ಲೈಟ್ ಬಳಸಿ ಕಿರುಕುಳ ನೀಡುತ್ತಾರೆ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಮೈಲೆ ಅವರು ಬುಯನಸ್ ಆಯರಸ್‌ನಲ್ಲಿ ನಡೆದ ಶಾಸಕೀಯ ಚುನಾವಣೆಗಳಲ್ಲಿ ತಮ್ಮ ಮತವನ್ನು ಚಲಾಯಿಸಿದರು. ಮತಗಟ್ಟೆಯಲ್ಲಿ ಆಯೋಗದ ಸದಸ್ಯರು ಅಧ್ಯಕ್ಷರ ಜೊತೆ ಕೈ ಕುಲಿಕಿಸಲು ಕೂಡ ನಿರಾಕರಿಸಿದ ಮತ್ತೊಂದು ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.