Samantha Dating Rumours: ಸಮಂತಾ ಜತೆ ಡೇಟಿಂಗ್ ವದಂತಿ; ನಿರ್ದೇಶಕ ರಾಜ್ ನಿಡಿಮೋರು ಮಾಜಿ ಪತ್ನಿಯ ಫಸ್ಟ್ ರಿಯಾಕ್ಷನ್ ಏನು?
ಭಾರತೀಯ ಸಿನಿಮಾ ರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ನಾಗ ಚೈತನ್ಯ ಅವರೊಂದಿಗಿನ ದಾಂಪತ್ಯ ಜೀವನದಿಂದ ದೂರಾಗಿ ವಿಚ್ಛೇದನ ಪಡೆದ ಬಳಿಕ ತನ್ನ ಸಿನಿ ಕೆರಿಯರ್ ಬಗ್ಗೆ ನಟಿ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಈ ನಡುವೆ ನಟಿ ಸಮಂತಾ ಪ್ರಸಿದ್ಧ ನಿರ್ದೇಶಕ ರಾಜ್ ನಿಡಿಮೋರು ಅವ ರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಈ ಬಗ್ಗೆ ನಿರ್ದೇಶಕ ರಾಜ್ ಅವರ ಮಾಜಿ ಪತ್ನಿ ಪ್ರತಿಕ್ರಿಯೆ ನೀಡಿ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

Samantha Dating Rumours


ನಟಿ ಸಮಂತಾ ಪ್ರಸಿದ್ಧ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಸ್ಟೋರಿ ಒಂದನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ನಟಿ ಸಮಂತಾ ರುತ್ ಪ್ರಭು ಅವರು ರಾಜ್ ನಿಡಿಮೋರು ಅವರೊಂದಿಗೆ ಸೆಲ್ಫಿಯನ್ನು ತೆಗೆದುಕೊಂಡಿದ್ದು ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಹೀಗಾಗಿ ಇವರಿಬ್ಬರು ಡೇಟಿಂಗ್ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ಪ್ರೀತಿ ಮತ್ತು ಆಶೀರ್ವಾದಗಳ ಬಗ್ಗೆ ಸಕಾರಾತ್ಮಕ ಸಂದೇಶದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪೋಸ್ಟ್ನಲ್ಲಿ ನನ್ನ ಬಗ್ಗೆ ಯೋಚಿಸುವ, ನೋಡುವ, ನನ್ನ ಬಗ್ಗೆ ಕೇಳುವ, ನನ್ನೊಂದಿಗೆ ಮಾತನಾಡುವ ಮತ್ತು ನನ್ನನ್ನು ಭೇಟಿಯಾಗುವ ಪ್ರತಿಯೊಬ್ಬರಿಗೂ ದೇವರು ಪ್ರೀತಿ ತುಂಬಿದ ಆಶೀರ್ವಾದ ಕರುಣಿಸಲೆಂದು ಬೇಡಿಕೊಳ್ಳುವುದಾಗಿ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಇದು ನಟಿ ಸಮಂತಾ ಮತ್ತು ನಿರ್ದೇಶಕ ರಾಜ್ ಅವರಿಗೆ ಹಾಕಿದ್ದ ಸ್ಟೋರಿ ಆಗಿರಬಹುದಾ ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಸಮಂತಾ ಮತ್ತು ರಾಜ್ ನಿಡಿಮೋರು ಅವರು 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅಂದಿನಿಂದಲೂ ಅವರಿಬ್ಬರ ನಡುವೆ ಉತ್ತಮ ಸ್ನೇಹ ಇತ್ತು. ಇದಾದ ಬಳಿಕ ರಾಜ್ ಮತ್ತು ಸಮಂತಾ ಅವರು ʼಸಿಟಾಡೆಲ್ʼ ಸರಣಿಯಲ್ಲಿಯೂ ಜತೆಯಾಗಿ ಕೆಲಸ ಮಾಡಿದ್ದಾರೆ. ಈ ನಡುವೆ ನಟಿ ರಾಜ್ ನಿಡಿಮೋರು ಜತೆ ಸೆಲ್ಫಿ ಹಂಚಿಕೊಂಡ ಬೆನ್ನಲ್ಲೇ ಇವರಿಬ್ಬರ ನಡುವೆ ಸಂಬಂಧ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.

ರಾಜ್ ಅವರ ವೈಯಕ್ತಿಕ ಜೀವನದ ಅನೇಕ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ನಿರ್ದೇಶಕ ರಾಜ್ ಮತ್ತು ಶ್ಯಾಮಲಿ 2015 ರಲ್ಲಿ ವಿವಾಹವಾಗಿದ್ದಾರೆ. ಶ್ಯಾಮಲಿ ದೇ ಮನೋವಿಜ್ಞಾನ ಪದವೀಧರೆಯಾಗಿದ್ದು, ರಾಕೇಶ್ ಓಂ ಪ್ರಕಾಶ್ ಮೆಹ್ರಾ ಮತ್ತು ವಿಶಾಲ್ ಭಾರದ್ವಾಜ್ ಅವರೊಂದಿಗೆ ಸಹಾಯಕ ನಿರ್ದೇಶಕಿಯಾಗಿ ಕೂಡ ಕೆಲಸ ಮಾಡಿದ್ದಾರೆ. ಇವರಿಬ್ಬರು ಅನೇಕ ವರ್ಷ ಜತೆಯಲ್ಲಿ ಇದ್ದು, ಬಳಿಕ ವೈಮನಸ್ಸು ಮೂಡಿ ಇಬ್ಬರು 2022ರಲ್ಲಿ ದೂರವಾಗಿದ್ದಾರೆ. ಈ ಬೆನ್ನಲ್ಲೇ ಇದೀಗ ನಟಿ ಸಮಂತಾ ಜೊತೆ ಡೇಟಿಂಗ್ ವದಂತಿ ಕೇಳಿಬರುತ್ತಿದೆ.