ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Board Exam: ಕ್ಯಾನ್ಸರ್‌ನೊಂದಿಗೆ ಹೋರಾಡಿದ ಬಾಲಕಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್‌

ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ 17 ವರ್ಷದ ಇಶಿಕಾ ಬಾಲಾ ಶೇ. 99.17 ಅಂಕಗಳೊಂದಿಗೆ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಾವೋವಾದಿ ಪೀಡಿತ ಪ್ರದೇಶವಾದ ಕಂಕೇರ್‌ನ ಪಖಂಜೋರ್ ಪ್ರದೇಶದ ನಿವಾಸಿ ಇಶಿಕಾ ಬಾಲಾಳಿಗೆ ಕಳೆದ ವರ್ಷ ಅನಾರೋಗ್ಯ ಕಾರಣದಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ.

ಕ್ಯಾನ್ಸರ್ ಗೆದ್ದ ಬಾಲಕಿ ಎಸ್ಎಸ್ಎಲ್‌ಸಿಯಲ್ಲಿ  ಟಾಪರ್

ರಾಯ್‌ಪುರ: ರಕ್ತ ಕ್ಯಾನ್ಸರ್ (Blood cancer) ವಿರುದ್ಧ ಹೋರಾಡುತ್ತಿರುವ ಬಾಲಕಿ ಇದೀಗ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ (Board Exam) ಟಾಪರ್‌ ಆಗಿ ಹೊರ ಹೊಮ್ಮಿದ್ದಾಳೆ. ಛತ್ತೀಸ್‌ಗಢದ (Chhattisgarh ) ಕಂಕೇರ್ ಜಿಲ್ಲೆಯ 17 ವರ್ಷದ ಇಶಿಕಾ ಬಾಲಾ ಶೇ. 99.17 ಅಂಕಗಳೊಂದಿಗೆ ಎಸ್ಎಸ್ಎಲ್‌ಸಿ (SSLC Exam) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಾವೋವಾದಿ ಪೀಡಿತ ಪ್ರದೇಶವಾದ ಕಂಕೇರ್‌ನ ಪಖಂಜೋರ್ ಪ್ರದೇಶದ ಹಳ್ಳಿಯ ನಿವಾಸಿ ಇಶಿಕಾ ಬಾಲಾಳಿಗೆ ಕಳೆದ ವರ್ಷ ಅನಾರೋಗ್ಯ ಕಾರಣದಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಕ್ಯಾನ್ಸರ್‌ಗೆ ಸೋಲದೆ ಪರೀಕ್ಷೆ ಬರೆದು ಬಹುತೇಕ ಪೂರ್ಣ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾಳೆ.

ಕಂಕೇರ್ ಜಿಲ್ಲೆಯ ಗುಂಡಾಹೂರ್ ಗ್ರಾಮದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಇಶಿಕಾ ಬಾಲಾ ಛತ್ತೀಸ್‌ಗಢ ಪ್ರೌಢ ಶಿಕ್ಷಣ ಮಂಡಳಿ (CGBSE) ನಡೆಸಿದ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 99.17 ಅಂಕಗಳನ್ನು ಗಳಿಸಿದ್ದಾಳೆ. 3.28 ಲಕ್ಷ ವಿದ್ಯಾರ್ಥಿಗಳು ಬರೆದಿರುವ ರಾಜ್ಯ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಜಶ್‌ಪುರ ಜಿಲ್ಲೆಯ ಸ್ವಾಮಿ ಆತ್ಮಾನಂದ ಸರ್ಕಾರಿ ಉನ್ನತ ಇಂಗ್ಲಿಷ್ ಮಾಧ್ಯಮ ಶಾಲೆಯ ನಮನ್ ಕುಮಾರ್ ಖುಂಟಿಯಾ ಹಾಗೂ ಇಶಿಕಾ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಇಶಿಕಾ, ಕೆಲವೊಮ್ಮೆ ನಾನು ಮುಂದೆ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿದೆ. ಆದರೂ ಬಿಟ್ಟುಕೊಡಲಿಲ್ಲ. ನನ್ನ ಬಗ್ಗೆ ನಾನು ವಿಶ್ವಾಸ ಹೊಂದಿರುವುದು ಮುಖ್ಯ ಎಂದು ಹೇಳಿದ್ದಾರೆ.

ನಾನು ಎಂಜಿನಿಯರಿಂಗ್ ಮಾಡಲು ಬಯಸುತ್ತೇನೆ. ಪಿಯುಸಿಯಲ್ಲಿ ಗಣಿತವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನನ್ನ ಅಂತಿಮ ಗುರಿ ಐಎಎಸ್ ಅಧಿಕಾರಿಯಾಗುವುದು ಎಂದು ಇಶಿಕಾ ದೃಢ ವಿಶ್ವಾಸದಿಂದ ಹೇಳುತ್ತಾರೆ.

ಒಂದು ವರ್ಷಕ್ಕೂ ಹೆಚ್ಚು ಕಾಲ ನಿರಂತರ ನಡುಕ ಮತ್ತು ಆಗಾಗ್ಗೆ ಮೂಗಿನ ರಕ್ತಸ್ರಾವದಿಂದ ತೀವ್ರ ಆಯಾಸ ಮತ್ತು ಅಗಾಧ ಒತ್ತಡವನ್ನು ಸಹಿಸಿಕೊಂಡ ಇಶಿಕಾಗೆ 2023ರ ನವೆಂಬರ್‌ನಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ರಕ್ತ ಕ್ಯಾನ್ಸರ್ ಇರುವುದು ತಿಳಿಯಿತು. ಹೀಗಾಗಿ ಕಳೆದ ವರ್ಷ ಆಕೆಗೆ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ರಾಯ್‌ಪುರದ ಬಾಲ್ಕೊ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಅವಳು ತನ್ನ ಇಚ್ಛಾಶಕ್ತಿ ಮತ್ತು ಧೈರ್ಯದಿಂದ ಕ್ಯಾನ್ಸರ್ ಅನ್ನು ಸೋಲಿಸಿದಳು ಎಂದು ಇಶಿಕಾ ತಂದೆ, ರೈತ ಶಂಕರ್ ಬಾಲಾ ಹೇಳಿದ್ದಾರೆ.

ಕ್ಯಾನ್ಸರ್ ಗುಣಮುಖವಾಗಿದ್ದರೂ ಮುಂದಿನ 2-3 ವರ್ಷಗಳ ಕಾಲ ಆಕೆಯನ್ನು ನಿರಂತರ ತಪಾಸಣೆ ನಡೆಸಬೇಕಾಗುತ್ತದೆ. ಇದಕ್ಕಾಗಿ ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ಆಸ್ಪತ್ರೆಗೆ ಹೋಗಿ ತಪಾಸಣೆಗಳನ್ನು ಮಾಡಿಸಬೇಕು ಎನ್ನುತ್ತಾರೆ ಶಂಕರ್ ಬಾಲಾ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ಇಶಿಕಾ ಆರು ಗಂಟೆಗಳ ಅಧ್ಯಯನ ದಿನಚರಿ ಪಾಲಿಸಲು ಪ್ರಯತ್ನಿಸುತ್ತಿದ್ದಳು. ಆದರೆ ಆಕೆಯ ದೈಹಿಕ ಸ್ಥಿತಿ ಇದಕ್ಕೆ ಅವಕಾಶ ನೀಡಲಿಲ್ಲ. ದೇಹದ ತೂಕ ಹೆಚ್ಚಾಯಿತು, ಬಿಳಿ ರಕ್ತ ಕಣ ಮತ್ತು ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಾಯಿತು. ರಕ್ತ ಹೆಪ್ಪುಗಟ್ಟುವಿಕೆ ಉಂಟಾಯಿತು. ಒಂದು ಹಂತದಲ್ಲಿ ನೀರು ಮುಟ್ಟುವುದು ಕೂಡ ನಡುಕವನ್ನು ಉಂಟು ಮಾಡುತ್ತಿತ್ತು. ಮಾನಸಿಕ ಒತ್ತಡ ಹೆಚ್ಚಾಗಿತ್ತು. ಅವಳಿಗೆ ಅದೆಲ್ಲ ಅಸಹನೀಯವಾಗಿತ್ತು ಎನ್ನುತ್ತಾರೆ ಇಶಿಕಾಳ ತಂದೆ ಶಂಕರ್.

ಇದನ್ನೂ ಓದಿ: Beggar-Free City: ಇದು ದೇಶದ ಮೊದಲ ಭಿಕ್ಷಾಟನೆ ಮುಕ್ತ ನಗರ! ಆ ಸಿಟಿ ಎಲ್ಲಿದೆ ಗೊತ್ತಾ?

ಮಗಳ ಶಿಕ್ಷಣ, ಅನಾರೋಗ್ಯದ ಜತೆಗೆ ಉಳಿದ ನಾಲ್ಕು ಮಕ್ಕಳ ಪೋಷಣೆ ಕುಟುಂಬಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ತಂದೆ ರೈತನಾಗಿದ್ದು ತಮ್ಮ ಕುಟುಂಬವನ್ನು ಪೋಷಿಸಲು 1.7 ಎಕರೆ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಮಗಳ ಚಿಕಿತ್ಸೆಗಾಗಿ ಕೂಡಿಟ್ಟಿದ್ದ ಎಲ್ಲ ಹಣ ಸೇರಿ 15 ಲಕ್ಷ ರೂ. ಖರ್ಚು ಮಾಡಿದೆ. ಸಾಕಷ್ಟು ಸಾಲವನ್ನು ಪಡೆದುಕೊಂಡಿದ್ದಾರೆ.

ಶಂಕರ್ ಬಾಲಾ ಅವರ ಕುಟುಂಬವು ಬಾಂಗ್ಲಾದೇಶದಿಂದ ಮಧ್ಯಪ್ರದೇಶಕ್ಕೆ ವಲಸೆ ಬಂದ ಹಿಂದೂ ಬಂಗಾಳಿ ನಿರಾಶ್ರಿತರಲ್ಲಿ ಒಬ್ಬರಾಗಿದ್ದಾರೆ. ಇವರಿಗೆ ಪಖಂಜೋರ್ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.