Pak Army: ಫಿಟ್ನೆಸ್ ಕಾಯ್ದುಕೊಂಡಿಲ್ಲ, ಆರೋಗ್ಯ ಸರಿಯಾಗಿಲ್ಲ.. ಇದು ಪಾಕ್ ಸೇನೆಯ ದುಸ್ಥಿತಿ!
ಪಾಕಿಸ್ತಾನದ ಸೇನೆಯಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿದೆ. ಯಾಕೆಂದರೆ ಪಾಕಿಸ್ತಾನ ಸರ್ಕಾರವು ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಸುಧಾರಿಸುವ ಪ್ರಯತ್ನ ನಡೆಸಿದಾಗ ಸೇನೆಯು ಏನಾದರೊಂದು ಸಂಚು ರೂಪಿಸಿ ಅದನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತದೆ. ಪಾಕಿಸ್ತಾನ ಸೇನೆಯ ದೌರ್ಬಲ್ಯಗಳ ಲೆಕ್ಕಾಚಾರ ಮಾಡಿದಾಗ ಆರು ಪ್ರಮುಖ ಅಂಶಗಳು ಬೆಳಕಿಗೆ ಬರುತ್ತವೆ.


ನವದೆಹಲಿ: ಕಾಶ್ಮೀರದ (kashmir) ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ (pahalgam terrist attack) ನಡೆಸಿದ ಬಳಿಕ ಪಾಕಿಸ್ತಾನದ (pakistan) ವಿರುದ್ಧ ರಾಜತಾಂತ್ರಿಕ ಕ್ರಮಗಳನ್ನು ಭಾರತ ಸರ್ಕಾರ ಕೈಗೊಂಡ ಬಳಿಕ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಒಂದು ರೀತಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಎರಡು ರಾಷ್ಟ್ರಗಳ ನಡುವೆ ಇರುವ ಸೈನ್ಯ (Pak army ) ಬಲದ ಚರ್ಚೆಯೂ ಜೋರಾಗಿದೆ. ಭಾರತದ ಸೇನೆಯು ಪಾಕಿಸ್ತಾನದ ವಿರುದ್ಧ ಹೋರಾಡಲು ಸಂಪೂರ್ಣ ಸಾಮರ್ಥ್ಯ ಹೊಂದಿದ್ದರೂ ವಿರೋಧಿ ಸೇನೆಯ ದೌರ್ಬಲ್ಯಗಳು ಏನು ಎನ್ನುವ ಕುತೂಹಲವೂ ಇದೆ.
ಸರ್ವಾಧಿಕಾರದ ಧೋರಣೆ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡಿ ಈಗಾಗಲೇ ವಿಶ್ವದ ಎದುರು ಬೆತ್ತಲಾಗಿರುವ ಪಾಕಿಸ್ತಾನ ಸೇನೆಯು ಇನ್ನು ಹಲವು ವಿವಾದಾತ್ಮಕ ವಿಷಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತದೆ. ಭಾರತದಲ್ಲಿ ಅಸ್ಥಿರತೆಯನ್ನು ಉಂಟು ಮಾಡುವ ಇದರ ಹಲವು ದಶಕಗಳ ಪ್ರಯತ್ನಕ್ಕೆ ಭಾರತೀಯ ಸೇನೆ ತಕ್ಕ ಉತ್ತರವನ್ನೂ ನೀಡಿದರೂ ಇನ್ನೂ ಇದು ಪಾಠ ಕಲಿತಿಲ್ಲ.
ಪಾಕಿಸ್ತಾನದಲ್ಲಿ ಸೇನೆಯು ಸರ್ಕಾರದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಪಾಕಿಸ್ತಾನದ ಬಜೆಟ್‌ನ ಶೇಕಡಾ 20 ಕ್ಕಿಂತ ಹೆಚ್ಚಿನ ಪಾಲನ್ನು ಸೇನೆಯೇ ಪಡೆಯುತ್ತಿದೆ. ಇದರಿಂದ ಈ ದೇಶದಲ್ಲಿ ಬಡತನ ಇನ್ನೂ ಮುಂದುವರಿದಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.
ಪಾಕಿಸ್ತಾನದ ಸೇನೆಯಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿದೆ ಎನ್ನಲಾಗುತ್ತದೆ. ಯಾಕೆಂದರೆ ಪಾಕಿಸ್ತಾನ ಸರ್ಕಾರವು ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಸುಧಾರಿಸುವ ಪ್ರಯತ್ನ ನಡೆಸಿದಾಗ ಸೇನೆಯು ಏನಾದರೊಂದು ಸಂಚು ರೂಪಿಸಿ ಅದನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತದೆ.
ಪಾಕಿಸ್ತಾನ ಸೇನೆಯ ದೌರ್ಬಲ್ಯಗಳ ಲೆಕ್ಕಾಚಾರ ಮಾಡಿದಾಗ ಆರು ಪ್ರಮುಖ ಅಂಶಗಳು ಬೆಳಕಿಗೆ ಬರುತ್ತವೆ.
- ಪಾಕಿಸ್ತಾನ ಸೇನೆಯೊಳಗೆ ಆಂತರಿಕ ಭಿನ್ನಾಭಿಪ್ರಾಯಗಳಿವೆ. ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ವಿರುದ್ಧ ಕೆಳ ಮತ್ತು ಮಧ್ಯಮ ವರ್ಗದ ಅಧಿಕಾರಿಗಳು ಭ್ರಷ್ಟಾಚಾರ, ರಾಜಕೀಯ ಕಿರುಕುಳದ ಆರೋಪ ಮಾಡಿದ್ದಾರೆ. ಅಲ್ಲದೇ ದಂಗೆ ಏಳುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಇದು ಸೇನೆಯ ಏಕತೆ ಮತ್ತು ಶಿಸ್ತಿನ ಬಗ್ಗೆ ಆತಂಕವನ್ನು ಉಂಟು ಮಾಡಿದೆ.
- ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪಾಕಿಸ್ತಾನ ಸೇನೆ ಮೃದು ಧೋರಣೆ ತಾಳುತ್ತಿದೆ. ಭಯೋತ್ಪಾದಕರನ್ನು ಪೋಷಿಸುವಲ್ಲಿ ಅದರ ಪಾತ್ರದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಿಮಾರಿಯನ್ನು ಎದುರಿಸಿದೆ.
- ಸೇನೆಯು ಕೇವಲ ಮಿಲಿಟರಿ ಕಾರ್ಯವನ್ನು ಮಾತ್ರ ನಡೆಸುತ್ತಿಲ್ಲ. ರಾಜಕೀಯ, ರಿಯಲ್ ಎಸ್ಟೇಟ್, ಆಹಾರ ವಹಿವಾಟು, ಟಿವಿ ನಾಟಕ ನಿರ್ಮಾಣ ಸೇರಿದಂತೆ ವಿವಿಧ ಕೈಗಾರಿಕೆಗಳ ಮೇಲೂ ಹಸ್ತಕ್ಷೇಪ ನಡೆಸುತ್ತಿದೆ.
ಇದನ್ನೂ ಓದಿ: Kudupu Murder: ಮಂಗಳೂರಿನಲ್ಲಿ ಗುಂಪು ಹತ್ಯೆ: ಗೋಕಾಕದಲ್ಲಿ ಮತ್ತೊಬ್ಬ ಆರೋಪಿ ಬಂಧನ
- ಪಾಕಿಸ್ತಾನದ ಹಿರಿಯ ಸೇನಾ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಿವೆ. ಇಲ್ಲಿನ ಹಲವು ಜನರಲ್‌ಗಳು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಲಕ್ಷಾಂತರ ಡಾಲರ್‌ಗಳನ್ನು ಹೊಂದಿರುವುದನ್ನು ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ ತನಿಖೆಗಳಿಂದ ಬಹಿರಂಗವಾಗಿದೆ. ಇದು ಸೇನೆಯ ಮೇಲೆ ಜನರ ವಿಶ್ವಾಸಾರ್ಹತೆಯನ್ನು ಕುಗ್ಗಿಸಿದೆ. ಸೈನಿಕರ ತರಬೇತಿ, ಆಹಾರದ ಗುಣಮಟ್ಟ ಕುಸಿದಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದು, ಇದು ಅವರ ಫಿಟ್‌ನೆಸ್ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
- ಆಂತರಿಕ ಸಮಸ್ಯೆಗಳಿಂದ ಜಗತ್ತಿನ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನಿ ಸೇನೆಯು ಕಾಶ್ಮೀರ ಮತ್ತು ಭಾರತ ವಿರೋಧಿ ಭಾವನೆಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತದೆ ಎನ್ನುತ್ತಾರೆ ರಾಜಕೀಯ ವಿಮರ್ಶಕರು.
- ಪಾಕಿಸ್ತಾನಿ ಸೈನಿಕರ ಉತ್ಸಾಹ ಮತ್ತು ಫಿಟ್ನೆಸ್ ಮಟ್ಟಗಳು ಕ್ಷೀಣಿಸುತ್ತಿವೆ. ಅದರಲ್ಲೂ ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುನ್ ಕುವಾದಂತಹ ಪ್ರದೇಶಗಳಲ್ಲಿ ಸೈನಿಕರ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷೀಣಿಸಿದೆ ಎನ್ನುತ್ತದೆ ಕೆಲವು ಮಾಧ್ಯಮ ವರದಿಗಳು.