Muhammad Yunus: "ಭಾರತ ಪಾಕ್ ಮೇಲೆ ದಾಳಿ ನಡೆಸಿದರೆ, ಈಶಾನ್ಯ ರಾಜ್ಯವನ್ನು ನಾವು ವಶಪಡಿಸಿಕೊಳ್ಳಬೇಕು" ; ಮುಹಮ್ಮದ್ ಯೂನಸ್ ಸಲಹೆಗಾರನಿಂದ ವಿವಾದ
ಭಾರತ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಡುವೆ ಏರ್ಪಟ್ಟಿದೆ. ಈ ಸಮಯದಲ್ಲಿ ಬಾಂಗ್ಲಾದೇಶ ಉದ್ಧಟನ ಮೆರೆದಿದೆ. ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದ ಪ್ರಸ್ತುತ ಮಧ್ಯಂತರ ಸರ್ಕಾರದೊಂದಿಗೆ ನಿಕಟ ಸಂಬಂಧ ಹೊಂದಿರುವ ನಿವೃತ್ತ ಬಾಂಗ್ಲಾದೇಶದ ಸೇನಾ ಅಧಿಕಾರಿಯೊಬ್ಬರು ವಿವಾದವನ್ನು ಹುಟ್ಟುಹಾಕಿದ್ದಾರೆ.


ಢಾಕಾ: ಭಾರತ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಡುವೆ ಏರ್ಪಟ್ಟಿದೆ. ಈ ಸಮಯದಲ್ಲಿ ಬಾಂಗ್ಲಾದೇಶ ಉದ್ಧಟನ ಮೆರೆದಿದೆ. ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ (Muhammad Yunus) ನೇತೃತ್ವದ ಪ್ರಸ್ತುತ ಮಧ್ಯಂತರ ಸರ್ಕಾರದೊಂದಿಗೆ ನಿಕಟ ಸಂಬಂಧ ಹೊಂದಿರುವ ನಿವೃತ್ತ ಬಾಂಗ್ಲಾದೇಶದ ಸೇನಾ ಅಧಿಕಾರಿಯೊಬ್ಬರು ವಿವಾದವನ್ನು ಹುಟ್ಟುಹಾಕಿದ್ದಾರೆ. ಅವರು ಭಾರತ ಪಾಕ್ ಮೇಲೆ ಆಕ್ರಮಣ ಮಾಡಿದರೆ ಭಾರತದ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶ ವಶಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಬಾಂಗ್ಲಾದೇಶ ರೈಫಲ್ಸ್ (ಈಗ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ) ನ ಮಾಜಿ ಮುಖ್ಯಸ್ಥ ಮೇಜರ್ ಜನರಲ್ (ನಿವೃತ್ತ) ಎಎಲ್ಎಂ ಫಜ್ಲುರ್ ರೆಹಮಾನ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಎಎಲ್ಎಂ ಫಜ್ಲುರ್ ರೆಹಮಾನ್ ಭಾರತ ವಿರುದ್ಧ ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಜಂಟಿ ಮಿಲಿಟರಿ ವ್ಯವಸ್ಥೆಗಾಗಿ ಬಾಂಗ್ಲಾದೇಶ ಚೀನಾದೊಂದಿಗೆ ಮಾತುಕತೆ ಪ್ರಾರಂಭಿಸಬೇಕು ಎಂದು ಅವರು ಹೇಳಿದ್ದಾರೆ. "ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಬಾಂಗ್ಲಾದೇಶ ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ, ಚೀನಾದೊಂದಿಗೆ ಜಂಟಿ ಮಿಲಿಟರಿ ವ್ಯವಸ್ಥೆಯ ಕುರಿತು ಚರ್ಚೆಯನ್ನು ಪ್ರಾರಂಭಿಸುವುದು ಅಗತ್ಯ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಬಂಗಾಳಿಯಲ್ಲಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ALM ಫಜ್ಲುರ್ ರೆಹಮಾನ್ 2009 ರ ಬಾಂಗ್ಲಾದೇಶ ರೈಫಲ್ಸ್ (BDR) ಹತ್ಯಾಕಾಂಡವನ್ನು ತನಿಖೆ ಮಾಡುವ ರಾಷ್ಟ್ರೀಯ ಸ್ವತಂತ್ರ ತನಿಖಾ ಆಯೋಗದ ಅಧ್ಯಕ್ಷರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: Sonu Nigam: ಕನ್ನಡ ಹಾಡಿಗೂ ಪಹಲ್ಗಾಂ ದಾಳಿಗೂ ಏನು ಸಂಬಂಧ? ಸೋನು ನಿಗಮ್ ಮಾತಿಗೆ ರೊಚ್ಚಿಗೆದ್ದ ಕನ್ನಡಿಗರು
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿರುವ ಸಮಯದಲ್ಲಿ ಅವರ ಹೇಳಿಕೆ ಬಂದಿದೆ. ಬಿಡಿಆರ್ ಆಯೋಗದ ಮುಖ್ಯಸ್ಥ ಎಎಲ್ಎಂ ಫಜ್ಲುರ್ ರೆಹಮಾನ್ ಮಾಡಿದ ವಿವಾದಾತ್ಮಕ ಹೇಳಿಕೆಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಾಂಗ್ಲಾದೇಶದ ಮುಖ್ಯ ಸಲಹೆಗಾರರ ಕಚೇರಿಯ ಪತ್ರಿಕಾ ಕಾರ್ಯದರ್ಶಿ ಶಫಿಕುಲ್ ಆಲಂ ಈ ಕುರಿತು ಪ್ರತಿಕ್ರಿಯೆ ನೀಡಿ, ರೆಹಮಾನ್ ಹೇಳಿರುವುದು ಅವರ ವಯಕ್ತಿಕ ಅಭಿಪ್ರಾಯ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ., "ಬಾಂಗ್ಲಾದೇಶವು ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಮತ್ತು ಇತರರಿಂದಲೂ ಅದೇ ರೀತಿ ನಿರೀಕ್ಷಿಸುತ್ತದೆ. ಮೇಜರ್ ಜನರಲ್ ಫಜ್ಲುರ್ ರೆಹಮಾನ್ ಅವರ ವೈಯಕ್ತಿಕ ಹೇಳಿಕೆಗಳನ್ನು ಉಲ್ಲೇಖಿಸಿ ಬಾಂಗ್ಲಾದೇಶ ಸರ್ಕಾರವನ್ನು ಎಳೆದುತರಬೇಡಿ ಎಂದು ನಾವು ಎಲ್ಲರನ್ನೂ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.