Viral News: ಹಿಂದೂ ಎಂದು ನಂಬಿಸಿ ಮದ್ವೆ... ಎರಡು ಮಕ್ಕಳಾದ ಮೇಲೆ ಬಯಲಾಯ್ತು ಕಿಡಿಗೇಡಿ ಪತಿಯ ಅಸಲಿ ಮುಖ!
ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಮಹಿಳೆಯನ್ನು ಯಮಾರಿಸಿ ಮದುವೆಯಾಗಿ ನಂತರ ಆಕೆಗೆ ಮಕ್ಕಳಾದ ಬಳಿಕ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾನಂತೆ. ಹೀಗಾಗಿ ಮಹಿಳೆ ತನಗೆ ನ್ಯಾಯ ಸಿಗದಿದ್ದರೆ ಮುಖ್ಯಮಂತ್ರಿಗಳ ಜನತಾ ದರ್ಬಾರ್‌ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.


ಲಖನೌ: ಲವ್‍ಜಿಹಾದ್ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತದೆ. ಈ ಹಿಂದೆ ಹಲವು ಲವ್‍ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದೀಗ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಲವ್‍ಜಿಹಾದ್ ಪ್ರಕರಣವೊಂದು ನಡೆದಿದೆ. ಹಿಂದೂ ಎಂದು ಹೇಳಿಕೊಂಡು ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಮಹಿಳೆಯನ್ನು ಮದುವೆಯಾಗಿ ನಂತರ ಆಕೆಗೆ ಮಕ್ಕಳಾದ ಬಳಿಕ ತಾನು ಮುಸ್ಲಿಂ ಎಂಬ ಸತ್ಯ ಹೇಳಿ ತನ್ನ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹಾಕುತ್ತಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಬೇಸತ್ತ ಮಹಿಳೆ ತನಗೆ ನ್ಯಾಯ ಸಿಗದಿದ್ದರೆ ಮುಖ್ಯಮಂತ್ರಿಗಳ ಜನತಾ ದರ್ಬಾರ್‌ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.ಈ ಸುದ್ದಿ ಈಗ ವೈರಲ್(Viral News) ಆಗಿದೆ.
ತನ್ನನ್ನು ಮದುವೆಯಾದ ಪತಿ ಬೇರೆ ಧರ್ಮಕ್ಕೆ ಸೇರಿದವನಾಗಿದ್ದು, ಈಗ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ ಆಘಾತಕಾರಿ ಪ್ರಕರಣ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ರಾಮ್ ನಗರ ರೈಲ್ವೆ ಕಾಲೋನಿ ನಿವಾಸಿ ಆರತಿ ಚೌಹಾಣ್ ತನ್ನ ಪತಿ ಖುರ್ಷಿದ್ ಆಲಂ ಅಲಿಯಾಸ್ ಸನ್ನಿ ಮತ್ತು ಅವನ ಸಹಚರರ ವಿರುದ್ಧ ಈ ಆರೋಪಗಳನ್ನು ಮಾಡಿದ್ದಾಳೆ. ಅಯೋಧ್ಯೆಯ ಪ್ರಸಿದ್ಧ ಬಡಿ ದೇವಕಾಳಿ ದೇವಸ್ಥಾನದಲ್ಲಿ ಮದುವೆ ನಡೆಯಿತು. ಮದುವೆಯಾದ ಕೆಲವು ವರ್ಷಗಳ ನಂತರ ಅಂದರೆ ಇಬ್ಬರು ಮಕ್ಕಳನ್ನು ಆದ ನಂತರ ತನ್ನ ಗಂಡನ ಧರ್ಮದ ಬಗ್ಗೆ ತಿಳಿಯಿತು ಎಂದು ಆರತಿ ಹೇಳಿದ್ದಾಳೆ.
ಈ ಪಿತೂರಿಯಲ್ಲಿ ತನ್ನ ನೆರೆಹೊರೆಯವರಾದ ಸಫಿಕ್ ಮತ್ತು ಅವನ ಪತ್ನಿ ಸಿಮ್ರಾನ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರತಿ ಹೇಳಿದ್ದಾಳೆ. ಆರತಿ ತನ್ನ ಮನೆಯಲ್ಲಿ ಗಣೇಶ ವಿಗ್ರಹವನ್ನು ಸ್ಥಾಪಿಸಿ ಹಿಂದೂ ಹಬ್ಬಗಳನ್ನು ಆಚರಿಸಲು ಪ್ರಯತ್ನಿಸಿದಾಗ, ಆಕೆಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಸಫಿಕ್, ಸಿಮ್ರಾನ್ ಮತ್ತು ಇತರ 13 ಜನರು ತನ್ನನ್ನು ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ ಮತ್ತು ಬೆದರಿಸುತ್ತಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ.
ಅಲ್ಲದೇ ತನ್ನ ಪತಿ ತನಗೆ ಮಾದಕ ದ್ರವ್ಯವನ್ನು ನೀಡಿ, ಅಶ್ಲೀಲ ಕೃತ್ಯಗಳಲ್ಲಿ ತೊಡಗುವಂತೆ ಒತ್ತಾಯಿಸಿದ್ದಾನೆ ಎಂದು ಆರತಿ ಆರೋಪಿಸಿದ್ದಾಳೆ. ಸಿಮ್ರಾನ್ ಅವಳ ಸಹೋದರ ಕೂಡ ಬೆದರಿಕೆಗಳನ್ನು ಹಾಕಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ:Viral Video: ಅಗ್ನಿ ಅವಘಡ; ಜೀವ ಉಳಿಸಿಕೊಳ್ಳಲು 5ನೇ ಮಹಡಿಯಿಂದ ಜಿಗಿದ ಯುವತಿ; ವಿಡಿಯೊ ವೈರಲ್!
ತಾನು ಮತ್ತು ತನ್ನ ಮಕ್ಕಳು ಭಯದಲ್ಲಿ ವಾಸಿಸುತ್ತಿದ್ದೇವೆ ಮತ್ತು ಯಾವುದೇ ಪೊಲೀಸ್ ರಕ್ಷಣೆ ನಮಗೆ ಸಿಕ್ಕಿಲ್ಲ. ಪೊಲೀಸರು ಮತ್ತು ಆಡಳಿತಕ್ಕೆ ಅನೇಕ ಬಾರಿ ಮನವಿ ಮಾಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕೆ ತಿಳಿಸಿದ್ದಾಳೆ. ಒಂದು ವೇಳೆ ತನಗೆ ನ್ಯಾಯ ಸಿಗದಿದ್ದರೆ ಮುಖ್ಯಮಂತ್ರಿಗಳ ಜನತಾ ದರ್ಬಾರ್‌ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆರತಿ ಬೆದರಿಕೆ ಹಾಕಿದ್ದಾಳೆ ಎಂದು ವರದಿಯಾಗಿದೆ.