ಹೊಸ ಆಟೊಮ್ಯಾಟಿಕ್ಸ್ ಕಲೆಕ್ಷನ್ ನೆರವಿನಿಂದ ಆಕರ್ಷಕ ಶೈಲಿ ಉನ್ನತೀಕರಿಸಿದ ಟೈಟನ್ ವಾಚಸ್
ಸಂಯೋಜಿತ ಬಳೆಗಳಿಂದ ಹಿಡಿದು ಡ್ಯುಯಲ್-ಫಿನಿಶ್ನ ಸದೃಢ ಸಂಪರ್ಕ ಪಟ್ಟಿಗಳವರೆಗೆ, ಪ್ರತಿ ಯೊಂದು ವಿನ್ಯಾಸವನ್ನು ವೈವಿಧ್ಯಮಯ ವ್ಯಕ್ತಿತ್ವವನ್ನು ಅಭಿವ್ಯಕ್ತಪಡಿಸುವ ರೀತಿಯಲ್ಲಿ ಮುತುವರ್ಜಿಯಿಂದ ತಯಾರಿಸಲಾಗಿದೆ. 21 ಜ್ಯುವೆಲ್ ಬೇರಿಂಗ್ಗಳು, ಗಂಟೆಗೆ 21,600 ಬೀಟ್ಗಳ ಕಂಪನ ಆವರ್ತನ ಮತ್ತು ಗಮನಾರ್ಹ ಎನ್ನಬಹುದಾದ 42-ಗಂಟೆಗಳ ಬ್ಯಾಟರಿ ಮೀಸಲು ಸೌಲಭ್ಯ ಹೊಂದಿರುವ ಈ ಸಂಗ್ರಹವು ನಿಖರತೆ, ಕರಕುಶಲತೆ ಮತ್ತು ಕಾರ್ಯಕ್ಷಮತೆಗೆ ನಿದರ್ಶನವಾಗಿದೆ.


ಗಾಢ ಮತ್ತು ನಿಖರ ಶೈಲಿಯ ಮೂಲಕ ಸ್ವಯಂ ಅಭಿವ್ಯಕ್ತಿ ಬಯಸುವ ಪುರುಷರ ಬಳಕೆಗೆಂದೇ ಈ ಕೈಗಡಿಯಾರಗಳ ವಿನ್ಯಾಸ ರೂಪಿಸಲಾಗಿದೆ
ಬೆಂಗಳೂರು: ಯಾಂತ್ರಿಕ ಜಗತ್ತಿನ ಸ್ವರೂಪ ತಿಳಿದುಕೊಳ್ಳುವ ಬಗೆಗಿನ ಮಾನವನ ಅದಮ್ಯ ಕುತೂಹಲ ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಟೈಟನ್ ವಾಚಸ್ (Titan Watches) ತನ್ನ ಇತ್ತೀಚಿನ ಆಟೊಮ್ಯಾಟಿಕ್ಸ್ ಕಲೆಕ್ಷನ್ (Automatics Collection) ಅನ್ನು ಮಾರುಕಟ್ಟೆಗೆ ಪರಿಚಯಿ ಸುವುದರ ಮೂಲಕ ಬದುಕಿನ ಮೋಹಕ ಸೌಂದರ್ಯದಲ್ಲಿ ತನ್ಮಯವಾಗುವಂತಹ ಅನುಭವ ನೀಡಲಿದೆ. ಕೈಗಡಿಯಾರಗಳ ಈ ಹೊಸ ಸಂಗ್ರಹವು ಯಾಂತ್ರಿಕ ಕೈಗಡಿಯಾರ ತಯಾರಿಕೆಯ ಸಂಕೀರ್ಣ ಸ್ವರೂಪದ ಸೌಂದರ್ಯವನ್ನು ಎತ್ತಿ ತೋರಿಸುವ ಮೂಲಕ ಕಣ್ಣಿಗೆ ಕಾಣುವ ಯಂತ್ರ ಶಾಸ್ತ್ರದ ಸೊಬಗಿನ ಸಂಭ್ರಮಾಚರಿಸುತ್ತಿದೆ.
ಈ ಸಂಗ್ರಹದ ಪ್ರತಿಯೊಂದು ಉತ್ಪನ್ನವು, ಕೈಗಡಿಯಾರ ಚಲನೆ ಪ್ರದರ್ಶಿಸುವ ಆಕರ್ಷಕ ಡಯಲ್ಗಳನ್ನು ಒಳಗೊಂಡಿದೆ. ಸುಲಭವಾಗಿ ವಿಶ್ಲೇಷಿಸಲಾಗದ, ಸಂಕೀರ್ಣಮಯ, ಪರಸ್ಪರ ಸಂಪರ್ಕಿತ ಬಿಡಿಭಾಗಗಳ ಜಟಿಲ ರಚನೆ ಹೊಂದಿರುವುದು ಆಕರ್ಷಕ ಶೈಲಿಯ ಅತ್ಯಂತ ಮಹತ್ವದ ಭಾಗವಾಗಿದೆ.
ಸಂಯೋಜಿತ ಬಳೆಗಳಿಂದ ಹಿಡಿದು ಡ್ಯುಯಲ್-ಫಿನಿಶ್ನ ಸದೃಢ ಸಂಪರ್ಕ ಪಟ್ಟಿಗಳವರೆಗೆ, ಪ್ರತಿ ಯೊಂದು ವಿನ್ಯಾಸವನ್ನು ವೈವಿಧ್ಯಮಯ ವ್ಯಕ್ತಿತ್ವವನ್ನು ಅಭಿವ್ಯಕ್ತಪಡಿಸುವ ರೀತಿಯಲ್ಲಿ ಮುತುವರ್ಜಿಯಿಂದ ತಯಾರಿಸಲಾಗಿದೆ. 21 ಜ್ಯುವೆಲ್ ಬೇರಿಂಗ್ಗಳು, ಗಂಟೆಗೆ 21,600 ಬೀಟ್ಗಳ ಕಂಪನ ಆವರ್ತನ ಮತ್ತು ಗಮನಾರ್ಹ ಎನ್ನಬಹುದಾದ 42-ಗಂಟೆಗಳ ಬ್ಯಾಟರಿ ಮೀಸಲು ಸೌಲಭ್ಯ ಹೊಂದಿರುವ ಈ ಸಂಗ್ರಹವು ನಿಖರತೆ, ಕರಕುಶಲತೆ ಮತ್ತು ಕಾರ್ಯಕ್ಷಮತೆಗೆ ನಿದರ್ಶನವಾಗಿದೆ. ಚಲನೆಯಲ್ಲಿನ ಪ್ರತಿಯೊಂದು ಟಿಕ್ ಅನ್ನು ಮೆಚ್ಚುವ ಸೌಂದರ್ಯದ ಆರಾಧಕರಿಗಾಗಿ ಈ ಸಂಗ್ರಹವನ್ನು ವಿಶೇಷವಾಗಿ ತಯಾರಿಸಲಾಗಿದೆ.
ಇದನ್ನೂ ಓದಿ: Bangalore News: ಎಪಿಎಸ್ ಎಜುಕೇಷನಲ್ ಟ್ರಸ್ಟ್ ನಿಂದ ಮೇ 3 ರಂದು ರಾಷ್ಟ್ರಮಟ್ಟದ ಶಿಕ್ಷಣ ಪ್ರದರ್ಶನ ಮತ್ತು ಉದ್ಯೋಗ ಮೇಳ
ಟೈಟನ್ ಆಟೊಮ್ಯಾಟಿಕ್ಸ್ ಸಂಗ್ರಹವು ನಾಲ್ಕು ವಿಶಿಷ್ಟ ಕೈಗಡಿಯಾರ ಶ್ರೇಣಿಗಳಲ್ಲಿ ಲಭ್ಯ ಇರಲಿದೆ. ಪ್ರತಿಯೊಂದೂ ಕೈಗಡಿಯಾರವನ್ನು ಪ್ರತಿಯೊಬ್ಬರ ವಿಶಿಷ್ಟ ವ್ಯಕ್ತಿತ್ವವನ್ನು ಪ್ರತಿಬಿಂಬಿಸಲು ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಈ ಅಸಾಧಾರಣ ಸಂಗ್ರಹದಲ್ಲಿ ಯಿನ್ ಯಾಂಗ್ ಸ್ಕೆಲೆಟಲ್ ಆಟೊಮ್ಯಾಟಿಕ್ -ಕೈ ಗಡಿಯಾರವು ಹೆಚ್ಚು ಗಮನ ಸೆಳೆಯುತ್ತದೆ. ಇದನ್ನು ಸಮತೋಲನದ ಕಲಾತ್ಮಕ ಸಂಭ್ರಮಾಚರಣೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಅಸಾಧಾರಣ ಯಿನ್-ಯಾಂಗ್ ಸ್ಕೆಲೆಟಲ್ ಡಯಲ್ ವಿನ್ಯಾಸವನ್ನು ಸಂಸ್ಕರಿಸಿದ ಪ್ರೆಸ್-ಪ್ಯಾಟರ್ನ್ ವಿವರಗಳನ್ನು ಒಳಗೊಂಡಿದೆ. ನಯ ಹೊಳಪಿನ ಸ್ಟೇನ್ಲೆಸ್ ಸ್ಟೀಲ್ ಮತ್ತು ಸೊಗಸಾದ ಗುಲಾಬಿ ಚಿನ್ನದ ಸಂಯೋಜನೆಗಳಲ್ಲಿ ಇದು ಲಭ್ಯವಿದೆ. ಈ ಶ್ರೇಣಿಯ ಕೈಗಡಿ ಯಾರಗಳು ಖಂಡಿತವಾಗಿಯೂ ಬಳಕೆದಾರರ ಗಮನ ಸೆಳೆಯುತ್ತವೆ.
ಫೀನಿಕ್ಸ್ ಸ್ಕೆಲೆಟಲ್ ಆಟೊಮ್ಯಾಟಿಕ್ - ಕೈಗಡಿಯಾರವು ಪೌರಾಣಿಕ ದಂತಕಥೆ ಫೀನಿಕ್ಸ್ ಪಕ್ಷಿಯಿಂದ ಸ್ಫೂರ್ತಿ ಪಡೆದಿದೆ. ಇದು ಸಾಮರ್ಥ್ಯ ಮತ್ತು ಪುನರ್ಜನ್ಮವನ್ನು ಸಂಕೇತಿಸುತ್ತದೆ. ಫೀನಿಕ್ಸ್ ಪಕ್ಷಿಯ ರೆಕ್ಕೆಗಳನ್ನು ಹೋಲುವಂತೆ ಸಂಕೀರ್ಣವಾಗಿ ವಿನ್ಯಾಸಗೊಳಿಸಲಾದ ಸದೃಢ ಸ್ಕೆಲೆಟಲ್ ಡಯಲ್ಗಳನ್ನು ಇದು ಒಳಗೊಂಡಿದೆ. ಇದರ ನುಣುಪಾದ ಗುಬುಟವು ಈ ಕೈಗಡಿಯಾರದ ಅತ್ಯಾಧು ನಿಕ ವಿನ್ಯಾಸದ ಮೆರುಗು ಹೆಚ್ಚಿಸುತ್ತದೆ. ಏಕವರ್ಣದ ಎಕ್ಲಿಪ್ಸ್ ಬ್ಲ್ಯಾಕ್ ಮತ್ತು ಭವ್ಯವಾದ ಎಂಬರ್ ರೋಸ್ ಗೋಲ್ಡ್ ಮಾದರಿಗಳಲ್ಲಿ ಲಭ್ಯವಿದೆ. ಇದರ ಶಕ್ತಿಯುತ ವಿನ್ಯಾಸ ಮತ್ತು ಆಕರ್ಷಕ ನೋಟವು ಸಂಜೆಯ ಉಡುಗೆ ಮತ್ತು ಸಮಾರಂಭಗಳಂತಹ ಸಂದರ್ಭಗಳಿಗೆ ಹೆಚ್ಚು ಸೂಕ್ತವಾಗಿದೆ.
ನೆಕ್ಸಸ್ ಸ್ಕೆಲೆಟಲ್ ಆಟೊಮ್ಯಾಟಿಕ್ - ಈ ಕೈಗಡಿಯಾರವು ಸಮಕಾಲೀನ ಸೌಂದರ್ಯವನ್ನು ಕಾಲಾತೀತ ಸಂಕೇತದ ಜೊತೆಗೆ ಸಂಯೋಜಿಸುತ್ತದೆ. ಹಡಗಿನ ಚುಕ್ಕಾಣಿನಿಂದ ಸ್ಫೂರ್ತಿ ಪಡೆದ ಅದರ ವಿಶಿಷ್ಟ ಸ್ಕೆಲೆಟಲ್ ಡಯಲ್ ಚಲನೆ ಮತ್ತು ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಸಂಕೀರ್ಣ ವಾದ ಸ್ವಯಂಚಾಲಿತ ಚಲನೆಯ ವಿಶಿಷ್ಟ ನೋಟವನ್ನು ನೀಡುತ್ತದೆ. ಕಾಫಿ ಬ್ರೌನ್, ಗನ್ಮೆಟಲ್ ಮತ್ತು ಮಿಡ್ನೈಟ್ ಬ್ಲೂ ಬಣ್ಣಗಳ ಆಕರ್ಷಕ ಡಯಲ್ ಛಾಯೆಗಳಲ್ಲಿ ಲಭ್ಯವಿದೆ. ಇದರ ಆಕರ್ಷಕ, ಸಂಯೋಜಿತ ಬ್ರೇಸ್ಲೆಟ್, ಚುರುಕಿನ ಸಹಜ ನೋಟ ಮತ್ತು ದೈನಂದಿನ ಅತ್ಯಾಧುನಿಕತೆಗೆ ಬಹುಮುಖ ರೀತಿಯಲ್ಲಿ ಹೊಂದಿಕೊಂಡು ಕಾರ್ಯನಿರ್ವಹಿಸುತ್ತದೆ.
ಗೋಲ್ಡನ್ ಹಾರ್ಟ್ ಸ್ಕೆಲೆಟಲ್ ಆಟೊಮ್ಯಾಟಿಕ್ – ಈ ಕೈಗಡಿಯಾರವನ್ನು ಆಕರ್ಷಣೆಯ ಹೆಚ್ಚುವರಿ ಸೌಲಭ್ಯ ಇಷ್ಟಪಡುವವರಿಗಾಗಿ ತಯಾರಿಸಲಾಗಿದೆ. ಮಿಶ್ರ ಲೋಹ ಮತ್ತು ಪೂರ್ಣ ಚಿನ್ನದ ಮಾದರಿಗಳಲ್ಲಿ ಲಭ್ಯವಿದೆ. ಕೈಗಡಿಯಾರದ ಒಳರಚನೆಯು ಸ್ಪಷ್ಟವಾಗಿ ಕಾಣುವ ಡಯಲ್ ಒಳಗೊಂಡಿದೆ. ಈ ಗಮನ ಸೆಳೆಯುವ ಕೈಗಡಿಯಾರವು ವಿಲಾಸಿ ಔತಣಕೂಟ, ಮದುವೆ ಮತ್ತಿತರ ಸಮಾರಂಭಗಳು, ಸಂಭ್ರಮಾಚರಣೆಗಳಿಗೆ ಹೆಚ್ಚು ಸೂಕ್ತವಾಗಿರಲಿದೆ.
ಹೊಸ ʼಆಟೊಮ್ಯಾಟಿಕ್ ಕಲೆಕ್ಷನ್ʼ ಕೈಗಡಿಯಾರಗಳನ್ನು ಮಾರುಕಟ್ಟೆಗೆ ಪರಿಚಯಿಸಿರುವ ಕುರಿತು ಪ್ರತಿಕ್ರಿಯಿಸಿರುವ ಟೈಟನ್ ವಾಚಸ್ನ ಮಾರಾಟ ವಿಭಾಗದ ಮುಖ್ಯಸ್ಥೆ ಅಪರ್ಣ ರವಿ ಅವರು, "ಟೈಟನ್ ಆಟೊಮ್ಯಾಟಿಕ್ಸ್ ಕಲೆಕ್ಷನ್ ನಮ್ಮ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸು ತ್ತದೆ.
ಇದು ಸೌಂದರ್ಯ ಮತ್ತು ಸಮತೋಲನದ ಪ್ರಜ್ಞೆ ಜೊತೆ ಅತ್ಯಾಧುನಿಕ ತಂತ್ರಜ್ಞಾನ ಸಂಯೋಜಿ ಸುವ ಚಿಂತನೆ, ಕೈಗಡಿಯಾರ ತಯಾರಿಕೆಯ ಉತ್ಕೃಷ್ಟ ಕಲೆ ಮತ್ತು ಸಮಕಾಲೀನ ಶೈಲಿಯ ಕೈಗಡಿಯಾರ ತಯಾರಿಸುವ ನಾವೀನ್ಯತೆ ಬಗೆಗಿನ ಟೈಟನ್ನ ಬದ್ಧತೆಯನ್ನು ಪುನರು ಚ್ಚರಿಸುತ್ತದೆ. ಸೂಕ್ಷ್ಮ ಪ್ರವೃತ್ತಿಯ ವಿವೇಚನಾಶೀಲ, ಆಕರ್ಷಕ ಶೈಲಿಯ ಪ್ರಜ್ಞೆ ಹೊಂದಿರುವ ವ್ಯಕ್ತಿಗಳಿಗಾಗಿ ಈ ಕೈಗಡಿಯಾರಗಳನ್ನು ತಯಾರಿಸಲಾಗಿದೆ. ತನ್ನ ಕೈಗಡಿಯಾರವನ್ನು ಸ್ವಯಂ ಅಭಿವ್ಯಕ್ತಿ ಮತ್ತು ಕರಕುಶಲತೆಯ ಪ್ರತಿಬಿಂಬವಾಗಿ ನೋಡುವ ವಿವೇಚನಾಶೀಲ ವ್ಯಕ್ತಿತ್ವದವರನ್ನು ಗುರಿಯಾಗಿರಿಸಿ ಕೊಂಡು, ಈ ಕೈಗಡಿಯಾರಗಳು ನೀವು ಹೇಳುವುದಕ್ಕಿಂತ ಮುಂಚೆಯೇ ನಿಮ್ಮ ವ್ಯಕ್ತಿತ್ವ ವಿವರಿಸುತ್ತವೆʼ ಎಂದು ಹೇಳಿದ್ದಾರೆ.
ಪ್ರತಿಯೊಂದು ಕೈಗಡಿಯಾರವು ಧರಿಸುವವರ ಪ್ರಕಾಶಮಾನವಾದ ಕೈಗಳಲ್ಲಿ ಆಕರ್ಷಕವಾಗಿ ಕಾಣಿಸುತ್ತವೆ. ಸ್ಪಷ್ಟವಾಗಿ ಅನ್ವಯಿಸಲಾದ ಸೂಚ್ಯಂಕಗಳು ಮತ್ತು ಡ್ಯುಯಲ್-ಫಿನಿಶ್ಡ್ ಸದೃಢ ಸ್ಟೇನ್ಲೆಸ್ ಸ್ಟೀಲ್ ಪಟ್ಟಿಗಳಿಂದ ಅಲಂಕೃತಗೊಂಡಿವೆ. ಇದು ಹಗಲಿನಿಂದ ರಾತ್ರಿಗೆ ಸರಾಗವಾಗಿ ಪರಿವರ್ತನೆಗೊಳ್ಳುವ ಪ್ರೀಮಿಯಂ ಭಾವನೆಯನ್ನು ನೀಡುತ್ತದೆ.
ಈ ಟೈಟನ್ ಆಟೊಮ್ಯಾಟಿಕ್ಸ್ ಕಲೆಕ್ಷನ್ ಕೈಗಡಿಯಾರಗಳು ₹18,325 ರಿಂದ ₹22,150 ರವರೆಗಿನ ಬೆಲೆಯಲ್ಲಿ, ಈಗ ಟೈಟನ್ ಮಳಿಗೆಗಳಲ್ಲಿ ಮತ್ತು ಕಂಪನಿಯ ಅಂತರ್ಜಾಲ ತಾಣ www.titan.co.in ದಲ್ಲಿ ಖರೀದಿಗೆ ಲಭ್ಯ ಇವೆ.