ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bharath Kumar: ಮೇಲೊಬ್ಬ ಮಾಯಾವಿ ಚಿತ್ರದ ನಿರ್ಮಾಪಕ ಭರತ್ ಕುಮಾರ್‌ ನಿಧನ

Bharath Kumar: `ಮೇಲೊಬ್ಬ ಮಾಯಾವಿ' ಎಂಬ ಸಿನಿಮಾವನ್ನು ನಿರ್ಮಾಣ ಮಾಡಿ `ಪುತ್ತೂರು ಭರತ್' ಎಂದೇ ಜನಪ್ರಿಯರಾಗಿದ್ದ ಭರತ್ ಕುಮಾರ್ ಅವರು ಮೇ 1ರಂದು ಗುರುವಾರ ರಾತ್ರಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಭರತ್ ಅವರಿಗೆ 43 ವರ್ಷ ವಯಸ್ಸಾಗಿತ್ತು.

ಮೇಲೊಬ್ಬ ಮಾಯಾವಿ ಚಿತ್ರದ ನಿರ್ಮಾಪಕ ಭರತ್ ಕುಮಾರ್‌ ನಿಧನ

Profile Siddalinga Swamy May 2, 2025 6:50 PM

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ `ಮೇಲೊಬ್ಬ ಮಾಯಾವಿ' ಎಂಬ ಸಿನಿಮಾವನ್ನು ನಿರ್ಮಾಣ ಮಾಡಿ `ಪುತ್ತೂರು ಭರತ್' ಎಂದೇ ಜನಪ್ರಿಯರಾಗಿದ್ದ ಭರತ್ ಕುಮಾರ್ (Bharath Kumar) ಅವರು ಮೇ 1ರಂದು ಗುರುವಾರ ರಾತ್ರಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಪುತ್ತೂರಿನ ಪಡ್ನೂರು ಗ್ರಾಮದ ಮತಾವು ಮನೆಯ ದಿ. ಹರೀಶ ಗೌಡ ಮತ್ತು ಜಯಂತಿ ದಂಪತಿಯ ಹಿರಿಯ ಪುತ್ರರಾಗಿದ್ದರು. ಭರತ್ ಅವರಿಗೆ 43 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿ ಸಿವಿಲ್ ಬಿಲ್ಡರ್ ಕೂಡ ಆಗಿದ್ದರು.

ಭರತ್ ಅವರು ಬೆಂಗಳೂರು ಮತ್ತು ಪುತ್ತೂರು ಕಂಬಳ ಕೂಟಗಳ ಸದಸ್ಯರೂ ಆಗಿದ್ದರು. ಮೃತ ಭರತ್ ಅವರು ತಾಯಿ, ಪತ್ನಿ ರವಿಕಲಾ, ಮಗ ನಿಹಾರ್ ಮತ್ತು ಮಗಳು ಹಂಸಿಕಾ ಅವರನ್ನು ಅಗಲಿದ್ದಾರೆ. ಸಹೋದರ ಆದರ್ಶ, ಸಹೋದರಿ ಸೌಮ್ಯ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಭರತ್ ಅವರು ಸಿನಿಮಾ ರಂಗದಲ್ಲಿ ಇನ್ನಷ್ಟು ಸಾಧಿಸುವ ಕನಸು ಹೊಂದಿದ್ದರು. ಭರತ್ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

ಈ ಸುದ್ದಿಯನ್ನೂ ಓದಿ | Delhi Rain: ದಿಲ್ಲಿಯಲ್ಲಿ ಭಾರೀ ಮಳೆ ಛಾವಣಿ ಕುಸಿತ- ಮಹಿಳೆ ಮತ್ತು ಮೂರು ಮಕ್ಕಳ ದುರ್ಮರಣ