ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pakistan SC: ಮಿಲಿಟರಿಗೆ ನಾಗರಿಕರ ವಿಚಾರಣೆ ಅಧಿಕಾರ ನೀಡಿದ ಪಾಕ್‌ನ ಸುಪ್ರೀಂ ಕೋರ್ಟ್

ಪಾಕಿಸ್ತಾನ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅಮೀನುದ್ದೀನ್ ಅವರು 2023ರ ಮೇ 9ರಂದು ನಡೆದ ದಾಳಿಗೆ ಸಂಬಂಧಿಸಿ ನಾಗರಿಕರ ವಿಚಾರಣೆಯನ್ನು ಮಿಲಿಟರಿ ವ್ಯಾಪ್ತಿಯಲ್ಲಿ ನಡೆಸಲು ಅನುಮತಿಯನ್ನು ನೀಡಿದ್ದಾರೆ. ಈ ಮೂಲಕ 2023ರ ಮೇ 9ರಂದು ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಬೆಂಬಲಿಗರ ವಿಚಾರಣೆ ನಡೆಸಲು ಮಿಲಿಟರಿಗೆ ಅವಕಾಶ ಸಿಕ್ಕಿದೆ.

ನಾಗರಿಕರ ವಿಚಾರಣೆಗೆ ಮಿಲಿಟರಿಗೆ ಅವಕಾಶ; ಪಾಕ್ ಸುಪ್ರೀಂ ಕೋರ್ಟ್

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಬಂಧನದ ಬಳಿಕ ಉಂಟಾಗಿರುವ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ (military trials for civilians) ಕೈಗೊಳ್ಳುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ (Pakistan’s Supreme Court) ಮಿಲಿಟರಿಗೆ ಸೂಚಿಸಿದೆ. ಈ ಮೂಲಕ 2023ರ ಮೇ 9ರಂದು ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (Pakistan Tehreek-e-Insaf) ಬೆಂಬಲಿಗರ ವಿಚಾರಣೆ ನಡೆಸಲು ಮಿಲಿಟರಿಗೆ ಅವಕಾಶ ನೀಡಿದೆ. ಈ ಮೂಲಕ ಪಾಕಿಸ್ತಾನ ಸುಪ್ರೀಂ ಕೋರ್ಟ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಹೆಚ್ಚಿನ ಅಧಿಕಾರ ನೀಡಿದೆ.

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಬಳಿಕ 2023ರ ಮೇ 9ರಂದು ಪಿಟಿಐ ಬೆಂಬಲಿಗರು ನಡೆಸಿದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಇದರ ಪರಿಣಾಮವಾಗಿ 100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಿಚಾರಣೆಗಾಗಿ ಮಿಲಿಟರಿ ಕಸ್ಟಡಿಗೆ ವರ್ಗಾಯಿಸಲಾಯಿತು. ಇಮ್ರಾನ್ ಖಾನ್ ಬಂಧನದ ಬಳಿಕ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿಗರು ಆಕ್ರಮಣಕಾರಿ ಪ್ರದರ್ಶನಗಳನ್ನು ನಡೆಸಿದ್ದಾರೆ ಮತ್ತು ಅಶಾಂತಿಯ ಸಮಯದಲ್ಲಿ ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ನ್ಯಾಯಮೂರ್ತಿ ಅಮೀನುದ್ದೀನ್ ಖಾನ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಸಾಂವಿಧಾನಿಕ ಪೀಠವು 2023ರ ಅಕ್ಟೋಬರ್ ನಲ್ಲಿ ನಾಗರಿಕರ ಮೇಲಿನ ಮಿಲಿಟರಿ ವಿಚಾರಣೆಯನ್ನು ನಿಷೇಧಿಸಿದ ನ್ಯಾಯಾಲಯದ ಹಿಂದಿನ ತೀರ್ಪನ್ನು ಪ್ರಶ್ನಿಸಿ ಬಹು ನ್ಯಾಯಾಲಯದ ಮೇಲ್ಮನವಿಗಳನ್ನು ಆಲಿಸಲು ಸಭೆ ನಡೆಸಿತ್ತು.

ಮಿಲಿಟರಿ ನ್ಯಾಯಾಲಯಗಳು ಮಿಲಿಟರಿ ಕಾನೂನುಗಳ ಅಡಿಯಲ್ಲಿ ನಾಗರಿಕರನ್ನು ವಿಚಾರಣೆ ಮಾಡುವುದನ್ನು ನಿರ್ಬಂಧಿಸುವ ತೀರ್ಪನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದ್ದರು. ವಿಚಾರಣೆಗಳನ್ನು ಮುಕ್ತಾಯಗೊಳಿಸಿದ ನ್ಯಾಯಾಲಯವು ಸೋಮವಾರಕ್ಕೆ ಈ ತೀರ್ಪನ್ನು ಕಾಯ್ದಿರಿಸಿತ್ತು.

ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಅಮೀನುದ್ದೀನ್ ಅವರು 10 ಪುಟಗಳ ಕಿರು ಆದೇಶವನ್ನು ಹೊರಡಿಸಿದ್ದಾರೆ ಮತ್ತು ಮೇಲ್ಮನವಿಗಳನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ 2023ರ ಮೇ 9ರಂದು ನಡೆದ ದಾಳಿಗೆ ಸಂಬಂಧಿಸಿ ನಾಗರಿಕರ ವಿಚಾರಣೆಯನ್ನು ಮಿಲಿಟರಿ ವ್ಯಾಪ್ತಿಯಲ್ಲಿ ನಡೆಸಲು ಅನುಮತಿಯನ್ನು ನೀಡಿದ್ದಾರೆ.

ಮಿಲಿಟರಿ ನ್ಯಾಯಾಲಯಗಳಿಂದ ಶಿಕ್ಷೆಗೊಳಗಾದವರಿಗೆ ಹೈಕೋರ್ಟ್ ಮುಂದೆ ತಮ್ಮ ಶಿಕ್ಷೆಯ ಕುರಿತು ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಒದಗಿಸಲು 45 ದಿನಗಳಲ್ಲಿ ಸೇನಾ ಕಾಯ್ದೆಯನ್ನು ತಿದ್ದುಪಡಿ ಮಾಡುವಂತೆ ಅವರು ಸರ್ಕಾರಕ್ಕೆ ಸೂಚನೆ ನೀಡಿದರು.

ಸುಪ್ರೀಂ ಕೋರ್ಟ್ ನ ಈ ಆದೇಶಕ್ಕೆ ನ್ಯಾಯಮೂರ್ತಿಗಳಾದ ಜಮಾಲ್ ಖಾನ್ ಮಂಡೋಖೈಲ್ ಮತ್ತು ನಯೀಮ್ ಅಖ್ತರ್ ಅಫ್ಘಾನ್ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. ಪ್ರತ್ಯೇಕ ಆದೇಶದಲ್ಲಿ ಮೇಲ್ಮನವಿಗಳನ್ನು ತಿರಸ್ಕರಿಸಿದರು ಮತ್ತು ನಾಗರಿಕರ ಮಿಲಿಟರಿ ವಿಚಾರಣೆಗಳನ್ನು ಅನೂರ್ಜಿತ ಎಂದು ಘೋಷಿಸಿರುವ ಹಿಂದಿನ ತೀರ್ಪನ್ನು ಎತ್ತಿಹಿಡಿದರು.

ಇದನ್ನೂ ಓದಿ: Board Exam: ಕ್ಯಾನ್ಸರ್‌ನೊಂದಿಗೆ ಹೋರಾಡಿದ ಬಾಲಕಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್‌

ಇದಕ್ಕೂ ಮೊದಲು 2023ರ ಅಕ್ಟೋಬರ್ 23ರಂದು ಐದು ಸದಸ್ಯರ ಪೀಠವು ಮಿಲಿಟರಿ ನ್ಯಾಯಾಲಯಗಳಲ್ಲಿ ನಾಗರಿಕರ ವಿಚಾರಣೆ ಮಾಡುವುದು ಸಂವಿಧಾನಬಾಹಿರ ಎಂದು ಬಹುಮತದ ತೀರ್ಪು ನೀಡಿತ್ತು. ಶಂಕಿತರ ಪ್ರಕರಣಗಳನ್ನು ಕ್ರಿಮಿನಲ್ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಬೇಕೆಂದು ಪೀಠವು ಸರ್ವಾನುಮತದಿಂದ ಒಪ್ಪಿಕೊಂಡಿತ್ತು. ಇದರೊಂದಿಗೆ ಪಾಕಿಸ್ತಾನ ಸೇನಾ ಕಾಯ್ದೆ 1952ರ ಸೆಕ್ಷನ್ 2(1)(d)(i), 2(1)(d)(ii), ಮತ್ತು 59(4) ಗಳನ್ನು ರದ್ದುಗೊಳಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಈಗ ನೀಡಿರುವ ತೀರ್ಪಿನಲ್ಲಿ ಸೇನಾ ಕಾಯ್ದೆ 1952ರ ಹಿಂದಿನ ಸೆಕ್ಷನ್‌ಗಳನ್ನು ಮರುಸ್ಥಾಪಿಸಿದೆ.

ಮಿಲಿಟರಿ ನ್ಯಾಯಾಲಯಗಳು ಈಗಾಗಲೇ 85 ಪಿಟಿಐ ಕಾರ್ಯಕರ್ತರಿಗೆ ಎರಡರಿಂದ ಹತ್ತು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿವೆ.