ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಕ್ಕಳಿಗಾಗಿ ಕಾರ್ಟೂನ್ ನೆಟ್‌ವರ್ಕ್ ಮತ್ತು ಡಿಸ್ಕವರಿ ಕಿಡ್ಸ್ ಸಹಭಾಗಿತ್ವದಲ್ಲಿ ಒರಾಯನ್ ಫನ್ ಲೀಗ್‌ 2025 ಆಯೋಜಿಸಿದ ಒರಾಯನ್ ಮಾಲ್

ಮಕ್ಕಳು ಟೀನ್ ಟೈಟಾನ್ಸ್ ಗೋ, ಬಂಧ್‌ಬುದ್ ಔರ್ ಬುಡ್‌ಬಕ್, ಜಾನಿ ಬ್ರಾವೋನಂತಹ ವಿಶ್ವಪ್ರಸಿದ್ಧ ಕಾರ್ಟೂನ್ ನೆಟ್‌ವರ್ಕ್ ಪಾತ್ರಗಳನ್ನು ಮತ್ತು ಟಿಟೂ, ಮಿಸ್ಟರ್ ಬೀನ್, ಕ್ರಿಸ್, ಏಕಾನ್ಸ್, ಕಿಯಾರಾ ಮುಂತಾದ ಡಿಸ್ಕವರಿ ಕಿಡ್ಸ್ ಪಾತ್ರಗಳನ್ನು ಭೇಟಿಯಾಗಿ ಸಂವಾದ ಮಾಡುವ ವಿಶಿಷ್ಟ ಅವಕಾಶ ಪಡೆಯ ಲಿದ್ದಾರೆ

ಒರಾಯನ್ ಫನ್ ಲೀಗ್‌ 2025 ಆಯೋಜಿಸಿದ ಒರಾಯನ್ ಮಾಲ್

Profile Ashok Nayak May 2, 2025 4:52 PM

ಬೆಂಗಳೂರು: ಒರಾಯನ್ ಮಾಲ್ ಸಂಸ್ಥೆಯು ಕಾರ್ಟೂನ್ ನೆಟ್‌ವರ್ಕ್ ಮತ್ತು ಡಿಸ್ಕವರಿ ಕಿಡ್ಸ್ ಸಹಭಾಗಿತ್ವದಲ್ಲಿ ಮಕ್ಕಳ ಖುಷಿಯನ್ನು ಹೆಚ್ಚಿಸಲು ಬೆಂಗಳೂರಿನಲ್ಲಿರುವ ಬ್ರಿಗೇಡ್ ಗೇಟ್‌ವೇಯಲ್ಲಿ ರುವ ಒರಾಯನ್ ಮಾಲ್, ಕಾಕ್ ಟೌನ್ ನಲ್ಲಿರುವ ಒರಾಯನ್ ಅವೆನ್ಯೂ ಮಾಲ್, ಮತ್ತು ವೈಟ್‌ ಫೀಲ್ಡ್-ಹೊಸಕೋಟೆ ಕ್ರಾಸ್ ನಲ್ಲಿರುವ ಒರಾಯನ್ ಅಪ್‌ಟೌನ್ ಮಾಲ್ ಎಂಬ ಮೂರು ಒರಾ ಯನ್ ಮಾಲ್‌ಗಳಲ್ಲಿ ಒರಾಯನ್ ಫನ್ ಲೀಗ್ 2025 ಅನ್ನು ಆಯೋಜಿಸಿದ್ದು, ಮೇ 11ರವರೆಗೆ ಈ ಲೀಗ್ ನಡೆಯಲಿದೆ.

ಈ ಸಂದರ್ಭದಲ್ಲಿ ಮಕ್ಕಳು ಟೀನ್ ಟೈಟಾನ್ಸ್ ಗೋ, ಬಂಧ್‌ಬುದ್ ಔರ್ ಬುಡ್‌ಬಕ್, ಜಾನಿ ಬ್ರಾವೋನಂತಹ ವಿಶ್ವಪ್ರಸಿದ್ಧ ಕಾರ್ಟೂನ್ ನೆಟ್‌ವರ್ಕ್ ಪಾತ್ರಗಳನ್ನು ಮತ್ತು ಟಿಟೂ, ಮಿಸ್ಟರ್ ಬೀನ್, ಕ್ರಿಸ್, ಏಕಾನ್ಸ್, ಕಿಯಾರಾ ಮುಂತಾದ ಡಿಸ್ಕವರಿ ಕಿಡ್ಸ್ ಪಾತ್ರಗಳನ್ನು ಭೇಟಿಯಾಗಿ ಸಂವಾದ ಮಾಡುವ ವಿಶಿಷ್ಟ ಅವಕಾಶ ಪಡೆಯಲಿದ್ದಾರೆ.

ಇದನ್ನೂ ಓದಿ: Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!

ಬ್ರಿಗೇಡ್ ಗ್ರೂಪ್ ನ ರಿಟೇಲ್ ವಿಭಾಗದ ಸೀನಿಯರ್ ವೈಸ್ ಪ್ರೆಸಿಡೆಂಟ್ ಸುನೀಲ್ ಮುನ್ಷಿ ಅವರು, “ಒರಾಯನ್ ಫನ್ ಲೀಗ್ 2025 ಮತ್ತೊಮ್ಮೆ ಬಂದಿದೆ. ಹೊಸ ಆವೃತ್ತಿಯಲ್ಲಿ ಕುಟುಂಬಗಳು ಮತ್ತು ಮಕ್ಕಳಿಗೆ ಖುಷಿ ಅನುಭವ ಒದಗಿಸಲು ನಾವು ಉತ್ಸುಕರಾಗಿದ್ದೇವೆ! ಈ ವರ್ಷದ ಕಾರ್ಯಕ್ರಮದಲ್ಲಿ ಮನಮೋಹಕವಾದ ಥೀಮ್ ಆಧಾರಿತ ಅಲಂಕಾರಗಳು, ಆಕರ್ಷಕ ಗೇಮ್ ಗಳು ಮತ್ತು ಎಲ್ಲಾ ವಯಸ್ಸಿನವರು ಪಾಲ್ಗೊಳ್ಳಬಹುದಾದ ಆಕರ್ಷಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಒರಾಯನ್ ಫನ್ ಲೀಗ್ 2025ರಲ್ಲಿ ಭಾಗವಹಿಸುವ ಎಲ್ಲರಿಗೂ ಸಂತೋಷವನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ” ಎಂದು ಹೇಳಿದರು.

ಒರಾಯನ್ ಫನ್ ಲೀಗ್ 2025 ಮೇ 11, 2025ರವರೆಗೆ ನಡೆಯಲಿದ್ದು, ಮಕ್ಕಳು ಕಾರ್ಟೂನ್ ನೆಟ್‌ವರ್ಕ್‌ ನ ಜಟ್‌ಪಟ್ ಆಕ್ಷನ್, ಖಟ್‌ಪಟ್ ಕಾಮಿಡಿ ಮತ್ತು ಡಿಸ್ಕವರಿ ಕಿಡ್ಸ್‌ ನ ಕಟ್ಟಿ ಬಟ್ಟಿ, ದೋಸ್ತಿ ಪಕ್ಕಿ ಮೂಲಕ ಬೇಸಿಗೆ ಸಂಭ್ರಮವನ್ನು ಆಚರಿಸಬಹುದು.