ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಗೌರಿಬಿದನೂರಿನ ಜಿಟಿಟಿಸಿ ಸರ್ಕಾರಿ ಉಪಕರಣಗಾರ, ತರಬೇತಿ ಕೇಂದ್ರದಿಂದ ಮನವಿ

ಸರ್ಕಾರಿ ಉಚಿತ ಅಲ್ಪಾವಧಿ ಕೌಶಾಲ್ಯಾಭಿವೃದ್ಧಿ ತರಬೇತಿಗಳಲ್ಲಿ ಟರ್ನರ್, ಫಿಟ್ಟರ್ ಸೇರಿದಂತೆ ಇತರೆ ತರಬೇತಿಗಳನ್ನು ನೀಡಲಾಗುತ್ತದೆ. ಈ ಸಂಸ್ಥೆ ಕಾಲೇಜು ಸ್ಥಾಪನೆಯಾಗಿದ್ದು 1972ರಲ್ಲಿ, ಈಗಾಗಲೇ 50 ವರ್ಷ ಪೂರೈಸಿದೆ, ರಾಜ್ಯದಲ್ಲಿ 33 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಗೌರಿಬಿದ ನೂರಿನಲ್ಲಿ 2016 ರಲ್ಲಿ ಸಂಸ್ಥೆ ಆರಂಭವಾಗಿದ್ದು, 2017ರಿಂದ ದೀರ್ಘಾವಧಿ ಕೋರ್ಸುಗಳನ್ನು ನಡೆಸಲಾಗುತ್ತಿದೆ

ಕೌಶಲ್ಯಾಧಾರಿತ ತರಬೇತಿ ಪಡೆಯಲು ವಿದ್ಯಾರ್ಥಿಗಳಿಗೆ ಸಲಹೆ

Profile Ashok Nayak May 9, 2025 3:58 PM

ಚಿಕ್ಕಬಳ್ಳಾಪುರ: ಉನ್ನತ ಮಟ್ಟದ ತಾಂತ್ರಿಕ ಶಿಕ್ಷಣ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಗೌರಿಬಿದನೂರಿನ ಜಿಟಿಟಿಸಿ ಸರ್ಕಾರಿ ಉಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿ ಪಡೆದು ಉದ್ಯೋಗಾವಕಾಶಗಳನ್ನು ಪಡೆಯುವಂತೆ ಸಂಸ್ಥೆಯ ಮುಖ್ಯಸ್ಥರು ಮನವಿ ಮಾಡಿದರು. ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಗೌರಿಬಿದನೂರು ಜಿಟಿಟಿಸಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ದೀರ್ಘಾವದಿ ಮತ್ತು ಅಲ್ಪಾವಧಿ ಕೌಶಲ್ಯಾಭಿವೃದ್ಧಿ ತಾಂತ್ರಿಕ ತರಬೇತಿಗಳನ್ನು ಪಡೆಯಲು ಇದು ಸುವರ್ಣಾವ ಕಾಶವಾಗಿದ್ದು, ಮಕ್ಕಳು ಇದರ ಸದುಪಯೋಗ ಪಡೆಯುವಂತೆ ಕೋರಿದರು.

ದೀರ್ಘಾವಧಿ ತರಬೇತಿಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಡಿಪ್ಲಮೋ ಇನ್ ಟೂಲ್‌ಅಂಡ್ ಡೈ ಮೇಕಿಂಗ್, ಡಿಪ್ಲಮೋ ಇನ್ ಪಿಸಿಷನ್ ಮ್ಯಾನ್ಯುಕ್ಚರಿಂಗ್, ಡಿಪ್ಲಮೋ ಇನ್ ಮೆಕಾಟ್ರಾನಿಕ್ಸ್ ತರಬೇತಿ ಕೋರ್ಸುಗಳಿವೆ ಎಂದರು.

ಇದನ್ನೂ ಓದಿ: Chikkaballapur News: ಮಂಚೇನಹಳ್ಳಿ ಶೂಟೌಟ್ ಪ್ರಕರಣದ ಹಿಂದಿನ ಸೂತ್ರದಾರಿ ಹುಡುಕಿ: ಎಸ್.ಆರ್.ಹಿರೇಮಠ್ ಸೂಚನೆ

ಸರ್ಕಾರಿ ಉಚಿತ ಅಲ್ಪಾವಧಿ ಕೌಶಾಲ್ಯಾಭಿವೃದ್ಧಿ ತರಬೇತಿಗಳಲ್ಲಿ ಟರ್ನರ್, ಫಿಟ್ಟರ್ ಸೇರಿದಂತೆ ಇತರೆ ತರಬೇತಿಗಳನ್ನು ನೀಡಲಾಗುತ್ತದೆ. ಈ ಸಂಸ್ಥೆ ಕಾಲೇಜು ಸ್ಥಾಪನೆಯಾಗಿದ್ದು 1972ರಲ್ಲಿ, ಈಗಾಗಲೇ 50 ವರ್ಷ ಪೂರೈಸಿದೆ, ರಾಜ್ಯದಲ್ಲಿ 33 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಗೌರಿಬಿದ ನೂರಿನಲ್ಲಿ 2016ರಲ್ಲಿ ಸಂಸ್ಥೆ ಆರಂಭವಾಗಿದ್ದು, 2017ರಿಂದ ದೀರ್ಘಾವಧಿ ಕೋರ್ಸುಗಳನ್ನು ನಡೆಸಲಾಗುತ್ತಿದೆ. 4 ವರ್ಷದ ಡಿಪ್ಲಮೋ ಕೋರ್ಸುಗಳಿದ್ದು, ಇದರಲ್ಲಿ ಕಡ್ಡಾಯ ತರಬೇತಿ ವಿದ್ಯಾರ್ಥಿಗಳು ಪಡೆಯಬೇಕದೆ. ಈ ವೇಳೆ 20 ಸಾವಿರದ ವರೆಗೆ ಸ್ಟೈಫಂಡ್ ಸಿಗಲಿದೆ ಎಂದು ಹೇಳಿದರು.

ಇನ್ನು ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ರೀತಿಯ ಯಂತ್ರಗಳನ್ನು ಸರ್ಕಾರ ಒದಗಿಸಿದೆ. ಹಾಗಾಗಿ ಮಕ್ಕಳು ಅಗತ್ಯ ತರಬೇತಿ ಪಡೆಯಲು ಸಹಕಾರಿಯಾಗಲಿದೆ. ಪ್ರಸ್ತುತ ಗೌರಿಬಿದ ನೂರು ಸಂಸ್ಥೆಯಲ್ಲಿ ಮೂರು ಕೋರ್ಸ್ ಮಾತ್ರ ನಡೆಯುತ್ತಿದೆ. ಇದಕ್ಕಾಗಿ ಕೇವಲ 150 ಸೀಟು ಮಾತ್ರ ಇದ್ದು, ಆನ್‌ಲೈನ್ ಮತ್ತು ಆï‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ಮೇ 15ರಂದು ಕೊನೆಯ ದಿನವಾಗಿದ್ದು, 20ಕ್ಕೆ ಮೊದಲ ಹಂತದ ಸೀಟುಗಳನ್ನು ಬಿಡುಗಡೆ ಮಾಡಲಾ ಗುತ್ತದೆ. ಉಳಿಕೆ ಸೀಟುಗಳಿಗೆ ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಅವಕಾಶ ಕಲ್ಪಿಸ ಲಾಗುತ್ತದೆ ಎಂದರು.

ಜಿಟಿಟಿಸಿಯ ಪ್ರಾಂಶುಪಾಲ ಹರೀಶ್‌ ಕುಮಾರ್, ಉಪನ್ಯಾಸಕರಾದ ಉಪೇಂದ್ರರಾವ್, ಶಂಕರನAದ್, ಚೈತ್ರ ಇದ್ದರು.