ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: 'ರಫೇಲ್ ಬಗ್ಗೆ ನಿಂಬು-ಮಿರ್ಚಿ' ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕನಿಂದ ಸೇನೆಗೆ ಶ್ಲಾಘನೆ

ಭಾನುವಾರ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ್ದ, ಅಜಯ ರಾಯ್, ‘ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು ರಫೇಲ್‌ಗೆ ನಿಂಬೆ ಮತ್ತು ಮೆಣಸಿನಕಾಯಿ ಕಟ್ಟಿ ಪೂಜಿಸಿದ್ದರು. ಹಾಗಿದ್ದರೆ ರಫೇಲ್ ನಿಂದ ನಿಂಬೆ ಮತ್ತು ಮೆಣಸಿನಕಾಯಿಯನ್ನು ಅವರು ಯಾವಾಗ ತೆಗೆಯುತ್ತಾರೋ’ ಎಂದು ಕೇಳಿದ್ದರು.

ಭಾರತೀಯ ಸೇನೆಗೆ ಶ್ಲಾಘನೆ ವ್ಯಕ್ತಪಡಿಸಿದ ಕಾಂಗ್ರೆಸ್‌ ನಾಯಕ ಅಜಯ ರಾಯ್

Profile Abhilash BC May 7, 2025 12:19 PM

ಲಕ್ನೋ: ರಫೇಲ್‌ಗೆ ಕಟ್ಟಿದ ನಿಂಬೆಹಣ್ಣು ಹಾಗೂ ಮೆಣಸಿನಕಾಯಿ ಯಾವಾಗ ತೆಗೀತೀರಿ? ಯಾವಾಗ ಅವುಗಳ ಮೂಲಕ ಪಾಕ್‌ ಮೇಲೆ ಯುದ್ಧ ಮಾಡುತ್ತೀರಿ ಎಂದು ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದ ಉತ್ತರ ಪ್ರದೇಶ ಕಾಂಗ್ರೆಸ್‌ ನಾಯಕ ಅಜಯ ರಾಯ್(Ajai Rai) ಅವರು ಇದೀಗ 'ಆಪರೇಷನ್ ಸಿಂಧೂರ್'(Operation Sindoor) ದಾಳಿಯ ಬಳಿಕ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ.

ಭಾನುವಾರ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ್ದ, ಅಜಯ ರಾಯ್, ‘ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು ರಫೇಲ್‌ಗೆ ನಿಂಬೆ ಮತ್ತು ಮೆಣಸಿನಕಾಯಿ ಕಟ್ಟಿ ಪೂಜಿಸಿದ್ದರು. ಹಾಗಿದ್ದರೆ ರಫೇಲ್ ನಿಂದ ನಿಂಬೆ ಮತ್ತು ಮೆಣಸಿನಕಾಯಿಯನ್ನು ಅವರು ಯಾವಾಗ ತೆಗೆಯುತ್ತಾರೋ’ ಎಂದು ಕೇಳಿದ್ದರು. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಭಾರತದ ದಾಳಿಯ ಬಳಿಕ ಎಎನ್‌ಐ ಜತೆ ಮಾತನಾಡಿದ ಅಜಯ ರಾಯ್, "ನಾನು ಸೇನೆಯನ್ನು ಅಭಿನಂದಿಸುತ್ತೇನೆ. ನಾವು ಯಾವಾಗಲೂ ನಮ್ಮ ಸೇನೆಯ ಬಗ್ಗೆ ಹೆಮ್ಮೆಪಡುತ್ತೇವೆ. ಇಡೀ ದೇಶವು ರಫೇಲ್‌ನಿಂದ ಆ ನಿಂಬೆ ಮೆಣಸಿನಕಾಯಿಗಳನ್ನು ತೆಗೆದುಹಾಕಬೇಕೆಂದು ಬಯಸಿತು. ಭಯೋತ್ಪಾದನೆ ಎಲ್ಲೆಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆಯೋ ಅಲ್ಲೆಲ್ಲಾ ನಾವು ಅದನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು ಎಂದು ನಾನು ಭಾವಿಸುತ್ತೇನೆ" ಎಂದು ರಾಯ್ ತಿಳಿಸಿದರು.



ದಾಳಿಯಲ್ಲಿ ಜೈಶ್‌ ಎ ಮೊಹಮ್ಮದ್‌ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ನ ಮದರಾಸ(Masood Azhar’s Madrasa)ವನ್ನು ಕೂಡ ಧ್ವಂಸ ಮಾಡಲಾಗಿದೆ. ಇದೀಗ ಪಾಕ್‌ ಮಾಧ್ಯಮಗಳ ವರದಿ ಪ್ರಕಾರ ದಾಳಿಯಲ್ಲಿ ಮಸೂದ್‌ ಅಜರ್‌ನ ಸಹೋದರ, ಸಹೋದರಿಯರು ಸೇರಿದಂತೆ ಕುಟುಂಬದ ಒಟ್ಟು 14 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಯಾಚರಣೆಯಲ್ಲಿ ಗುರಿಯಾದವುಗಳಲ್ಲಿ ಬಹಾವಲ್ಪುರದ ಮರ್ಕಜ್ ಸುಭಾನ್ ಅಲ್ಲಾ, ತೆಹ್ರಾ ಕಲಾನ್‌ನಲ್ಲಿರುವ ಸರ್ಜಲ್, ಕೋಟ್ಲಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಫರಾಬಾದ್‌ನ ಸೈಯದ್ನಾ ಬಿಲಾಲ್ ಶಿಬಿರಗಳಿವೆ. ಇವೆಲ್ಲವೂ ನಿಷೇಧಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪಿನ ಶಿಬಿರಗಳು.

ಇದನ್ನೂ ಓದಿ Operation Sindoor: ಭಾರತದ ಪ್ರತೀಕಾರಕ್ಕೆ ನಲುಗಿದ ಭಯೋತ್ಪಾದಕರು; ಉಗ್ರ ಮಸೂದ್‌ ಅಝರ್‌ ಕುಟುಂಬದ 14 ಮಂದಿ ಬಲಿ

ಮುರ್ಡಿಕ್‌ನಲ್ಲಿರುವ ಮರ್ಕಜ್ ತೈಬಾ, ಬರ್ನಾಲಾದ ಮರ್ಕಜ್ ಅಹ್ಲೆ ಹದೀಸ್ ಮತ್ತು ಮುಜಫರಾಬಾದ್‌ನ ಶ್ವಾಯ್ನ್‌ ಅಲ್ಲಾಗಳು ನಿಷೇಧಿತ ಲಷ್ಕರ್-ಎ-ತೈಬಾ ಶಿಬಿರಗಳು. ಮತ್ತು ಕೋಟ್ಲಿಯಲ್ಲಿರುವ ಮಕಾಜ್ ರಹೀಲ್ ಶಾಹಿದ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ಮೆಹಮೂನಾ ಜೋಯಾಗಳು ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್‌ನ ಶಿಬಿರಗಳು ಮತ್ತು ತರಬೇತಿ ಕೇಂದ್ರಗಳು.