ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Milind Rege: ಮುಂಬೈ ಮಾಜಿ ನಾಯಕ ಮಿಲಿಂದ್ ರೇಗೆ ನಿಧನ

Milind Rege: ಆಲ್‌ರೌಂಡರ್‌ ಆಗಿದ್ದ ಮಿಲಿಂದ್ ರೇಗೆ ಮುಂಬೈ ಪರ 52 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ126 ವಿಕೆಟ್‌ಗಳನ್ನು ಕಬಳಿಸಿದ್ದರು. ಬ್ಯಾಟಿಂಗ್‌ನಲ್ಲಿ 1532 ರನ್‌ ಬಾರಿಸಿದ್ದಾರೆ. 1988 ರಲ್ಲಿ ಮುಂಬೈನ ರಣಜಿ ಟ್ರೋಫಿ ತಂಡಕ್ಕೆ ಹದಿಹರೆಯದ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡಿದ ಆಯ್ಕೆಗಾರರಲ್ಲಿ ರೇಗೆ ಸೇರಿದ್ದಾರೆ.

ಮುಂಬೈ ಮಾಜಿ ನಾಯಕ ಮಿಲಿಂದ್ ರೇಗೆ ನಿಧನ

Profile Abhilash BC Feb 19, 2025 11:00 AM

ಮುಂಬಯಿ: ಮುಂಬೈ ರಣಜಿ ಟ್ರೋಫಿಯ ಮಾಜಿ ನಾಯಕ ಮಿಲಿಂದ್ ರೇಗೆ(Milind Rege) ಬುಧವಾರ ನಿಧನರಾದರು. ಅವರಿಗೆ 76 ವರ್ಷವಾಗಿತ್ತು.1970ರ ದಶಕದಲ್ಲಿ ಇವರು ದೇಶೀಯ ಕ್ರಿಕೆಟ್‌ ಟೂರ್ನಿಯ ಮುಂಬೈ ತಂಡದ ಪರ ಆಡಿದ್ದರು. ಮಾಜಿ ಆಟಗಾರ ಸುನಿಲ್‌ ಗವಾಸ್ಕರ್‌ ಜತೆಗೂ ಇನಿಂಗ್ಸ್‌ ಆಡಿದ್ದರು. ಮುಂಬೈ ತಂಡನ ನಾಯಕನಾಗಿ ಆ ಬಳಿಕ ಮುಂಬೈ ಆಯ್ಕೆ ಸಮಿತಿಯಲ್ಲಿ ಮತ್ತು ತಂಡದ ಮಾರ್ಗದರ್ಶಕರಾಗಿ ಸೇವೆ ಸಲ್ಲಿದ್ದರು. ಇವರ ಸಾವಿಗೆ ಮುಂಬೈ ಕ್ರಿಕೆಟ್‌ ಅಸೋಸಿಯೇಸನ್‌ ಮತ್ತು ಹಲವು ಮಾಜಿ ಮತ್ತು ಹಾಲಿ ಆಟಗಾರರು ಸಂತಾಪ ಸೂಚಿಸಿದ್ದಾರೆ.

'ಮಿಲಿಂದ್ ರೇಗೆ ಸರ್ ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಯಿತು. ಮುಂಬೈ ಕ್ರಿಕೆಟ್‌ನ ದಿಗ್ಗಜ ಆಟಗಾರ, ಆಯ್ಕೆಗಾರ ಮತ್ತು ಮಾರ್ಗದರ್ಶಕರಾಗಿ ಅವರ ಕೊಡುಗೆಗಳು ಅಮೂಲ್ಯವಾದವು. ಅವರ ಮಾರ್ಗದರ್ಶನವು ಕ್ರಿಕೆಟಿಗರ ತಲೆಮಾರುಗಳನ್ನು ರೂಪಿಸಿತು ಮತ್ತು ಅವರ ಪರಂಪರೆಯನ್ನು ಶಾಶ್ವತವಾಗಿ ಮುಂದಿವರಿಸಲಾಗುವುದು' ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯಾ ನಾಯಕ್ ಹೇಳಿದ್ದಾರೆ.

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್‌ನ 3 ನೇ ದಿನದ ಆಟ ಆರಂಭಿಸುವ ಮೊದಲು ಮುಂಬೈ ಮತ್ತು ವಿದರ್ಭ ತಂಡದ ಆಟಗಾರರು ಒಂದು ನಿಮಿಷ ಮೌನಾಚರಣೆ ಆಚರಿಸಿ ಅಗಲಿದ ಮಾಜಿ ಆಟಗಾರನಿಗೆ ಸಂತಾಪ ವ್ಯಕ್ತಪಡಿಸಿದರು.

ಇತ್ತೀಚೆಗಷ್ಟೇ ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಂಗೆ 50 ವರ್ಷ ತುಂಬಿದ ಹಿನ್ನೆಲೆ ಮೊದಲ ಪಂದ್ಯ ಆಡಿದ್ದ ಎಂಟು ಮಂದಿಗೆ 10 ಲಕ್ಷ ರೂ. ನಗದು ನೀಡಿ ಗೌರವಿಸಲಾಗಿತ್ತು.ಇದರಲ್ಲಿ ಮಿಲಿಂದ್ ರೇಗೆ ಕೂಡ ಸೇರಿದ್ದರು.

ಇದನ್ನೂ ಓದಿ ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಬಿದ್ದ ಫರ್ಗುಸನ್: ಜೇಮಿಸನ್‌ ಬದಲಿ ಆಟಗಾರ

ಆಲ್‌ರೌಂಡರ್‌ ಆಗಿದ್ದ ಮಿಲಿಂದ್ ರೇಗೆ ಮುಂಬೈ ಪರ 52 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ126 ವಿಕೆಟ್‌ಗಳನ್ನು ಕಬಳಿಸಿದ್ದರು. ಬ್ಯಾಟಿಂಗ್‌ನಲ್ಲಿ 1532 ರನ್‌ ಬಾರಿಸಿದ್ದಾರೆ. 1988 ರಲ್ಲಿ ಮುಂಬೈನ ರಣಜಿ ಟ್ರೋಫಿ ತಂಡಕ್ಕೆ ಹದಿಹರೆಯದ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡಿದ ಆಯ್ಕೆಗಾರರಲ್ಲಿ ರೇಗೆ ಸೇರಿದ್ದಾರೆ. ಆಟಗಾರ, ಆಯ್ಕೆಗಾರ, ನಿರ್ವಾಹಕರು ಮತ್ತು ಕಾಮೆಂಟೇಟರ್ ಆಗಿ, ಮುಂಬೈ ಕ್ರಿಕೆಟ್‌ಗೆ ರೇಜ್ ಅವರ ಕೊಡುಗೆಗಳನ್ನು ಪೀಳಿಗೆಗೆ ಗೌರವಿಸಲಾಗುತ್ತದೆ.