Chandan Shetty: ಸಂಜನಾ ಆನಂದ್ ‘ಅಣ್ಣ’ ಎಂದ ಬಗ್ಗೆ ಚಂದನ್ ಶೆಟ್ಟಿ ಏನು ಹೇಳಿದ್ರು ಗೊತ್ತೇ?
ಚಂದನ್ ಶೆಟ್ಟಿ ನನಗೆ ಒಳ್ಳೆ ಗೆಳೆಯ ಅನ್ನುವುದಕಿಂತಲೂ ಹೆಚ್ಚಾಗಿ ಒಳ್ಳೆಯ ಅಣ್ಣನಂತೆ’’ ಎಂದು ಸಂಜನಾ ಆನಂದ್ ಹೇಳಿದ್ದರು. ಇದೀಗ ಚಂದನ್ ಶೆಟ್ಟಿ ಅವರು ಅಂದು ಸಂಜನಾ ಅಣ್ಣ ಎಂದ ಬಗ್ಗೆ ಮಾತನಾಡಿದ್ದು, ಸಂಜನಾ ಆನಂದ್ ಅದನ್ನು ಇನ್ನೂ ಚೆನ್ನಾಗಿ ಹ್ಯಾಂಡಲ್ ಮಾಡಬಹುದಾಗಿತ್ತು. ಆ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವುದಕ್ಕೆ ನನ್ನನ್ನು ಅಣ್ಣನನ್ನಾಗಿ ಮಾಡಿಬಿಟ್ರು ಎಂದು ಹೇಳಿದ್ದಾರೆ.

chandan shetty sanjana anand

ನಿವೇದಿತಾ ಗೌಡ ಅವರಿಂದ ದೂರವಾದ ಬಳಿಕ ಚಂದನ್ ಶೆಟ್ಟಿ (Chandan Shetty) ಸದಾ ಸುದ್ದಿಯಲ್ಲಿದ್ದಾರೆ, ಸಿನಿಮಾ ವಿಚಾರವಾಗಿ ಹಾಗೂ ವೈಯಕ್ತಿಕ ವಿಷಯಗಳ ಬಗ್ಗೆಯೂ ಗಾಸಿಪ್ ಹರಿದಾಡುತ್ತಿದೆ. ಇತ್ತೀಚೆಗಷ್ಟೆ ಸಲಗ ಸುಂದರಿ ಸಂಜನಾ ಆನಂದ್ ಅವರ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಎರಡನೇ ಮದುವೆ ಆಗ್ತಾರೆ ಎಂದು ಹೇಳಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಅನೇಕ ಪೋಸ್ಟ್ಗಳು ಹರಿದಾಡಿದವು. ಬಳಿಕ ಇತ್ತೀಚೆಗಷ್ಟೆ ಈ ಗಾಳಿ ಸುದ್ದಿಗಳಿಗೆ ಸಂಜನಾ ಆನಂದ್ ಸ್ಪಷ್ಟನೆ ಕೊಟ್ಟರು.
‘‘ನಾವು ಸ್ಪಷ್ಟನೆ ಕೊಡಬೇಕಿತ್ತು. ಸೋಶಿಯಲ್ ಮೀಡಿಯಾ ಜೊತೆ ಜೊತೆಗೆ ಫ್ಯಾಮಿಲಿಗಳ ಕಡೆಯಿಂದಲೂ ಮದುವೆ ಬಗ್ಗೆ ಪ್ರಶ್ನೆಗಳನ್ನು ಕೇಳಿ ಒತ್ತಡ ಹಾಕುವುದಕ್ಕೆ ಶುರು ಮಾಡಿಬಿಟ್ಟಿದ್ದಾರೆ. ಚಂದನ್ ಶೆಟ್ಟಿ ನನಗೆ ಒಳ್ಳೆ ಗೆಳೆಯ ಅನ್ನುವುದಕಿಂತಲೂ ಹೆಚ್ಚಾಗಿ ಒಳ್ಳೆಯ ಅಣ್ಣನಂತೆ’’ ಎಂದು ಸಂಜನಾ ಆನಂದ್ ಹೇಳಿದ್ದರು. ಇದೀಗ ಚಂದನ್ ಶೆಟ್ಟಿ ಅವರು ಅಂದು ಸಂಜನಾ ಅಣ್ಣ ಎಂದ ಬಗ್ಗೆ ಮಾತನಾಡಿದ್ದಾರೆ.
‘‘ಸಂಜನಾ ಆನಂದ್ ನನಗೆ ಫ್ರೆಂಡೇ ಅಲ್ಲ, ಇನ್ನು ಬ್ರದರ್ ಹೇಗಾಗುತ್ತೆ? ಅವರು ನಮ್ಮ ಸೂತ್ರಧಾರಿ ಸಿನಿಮಾದಲ್ಲಿ ಕೋ- ಅರ್ಟಿಸ್ಟ್ ಅಷ್ಟೇ. ಸಿನಿಮಾದ ಡ್ಯಾಶ್ ಸಾಂಗ್‌ನಲ್ಲಿ ಡ್ಯಾನ್ಸ್ ಮಾಡಿದ್ರು. ಅಲ್ಲಿಗೆ ಅದು ಮುಗೀತು ಅಷ್ಟೇ. ನಮ್ಮ ಫೋಟೋಗಳನ್ನು ಇಟ್ಟುಕೊಂಡು ಎಂಗೇಜ್‌ಮೆಂಟ್ ಆಯ್ತು, ಮದುವೆ ಸೆಟ್ ಆಯ್ತು ಅಂತ ಕೆಲವರು ವದಂತಿಗಳನ್ನು ಹಬ್ಬಿಸಿದರು. ಸಂಜನಾ ಆನಂದ್ ಅದನ್ನು ಇನ್ನೂ ಚೆನ್ನಾಗಿ ಹ್ಯಾಂಡಲ್ ಮಾಡಬಹುದಾಗಿತ್ತು. ಆ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವುದಕ್ಕೆ ನನ್ನನ್ನು ಅಣ್ಣನನ್ನಾಗಿ ಮಾಡಿಬಿಟ್ರು. ಅಣ್ಣ ಅನ್ನೋದು ತುಂಬಾ ದೊಡ್ಡ ಸ್ಥಾನ’’ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
Bharjari Bachelors: ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಪಹಲ್ಗಾಮ್ ಘೋರ ದುರಂತ ಮರುಸೃಷ್ಟಿ: ಕಣ್ಣೀರಿಟ್ಟ ವೀಕ್ಷಕರು
‘‘ಅಣ್ಣ ಅನ್ನೋದು ದೊಡ್ಡ ಸ್ಥಾನ. ಒಂದು ಫ್ಯಾಮಿಲಿ ಬಾಂಡಿಂಗ್ ಥರ ಅದು. ಅಣ್ಣ ಆದವನು ಪ್ರತಿಯೊಂದು ಪರಿಸ್ಥಿತಿಯಲ್ಲೂ ಸಪೋರ್ಟ್ ಆಗಿ ನಿಂತಿರುತ್ತಾರೆ. ಅಣ್ಣ ತಂಗಿ ಅನ್ನೋದು ಒಂದು ಸ್ಪೆಷಲ್ ಸಂಬಂಧ ಅದು. ಅವತ್ತು ಮೀಡಿಯಾದವರು ಕೇಳಿದ್ರು ಅಂತ ಅವರು ಹಾಗೇ ಹೇಳಿದ್ರು. ಆ ವದಂತಿಗೆ ಏನೋ ಒಂದು ಫುಲ್ ಸ್ಟಾಪ್ ಇಡಬೇಕಾಗಿತ್ತು. ಅದಕ್ಕೆ ಆ ರೀತಿ ಹೇಳಿದ್ದಾರೆ ಅನ್ಸತ್ತೆ. ಇಟ್ಸ್ ಓಕೆ, ನೋ ಪ್ರಾಬ್ಲಂ’’ ಎಂದಿದ್ದಾರೆ.