ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amruthamathi Movie: ಅಮೇಜಾನ್ ಪ್ರೈಮ್ ಓ.ಟಿ.ಟಿ.ಯಲ್ಲಿ `ಅಮೃತ ಮತಿ'

Amruthamathi Movie: ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ `ಅಮೃತ ಮತಿ' ಕನ್ನಡ ಚಿತ್ರವು ಈಗ ಅಮೆಜಾನ್ ಪ್ರೈಮ್‍ನ ಓ.ಟಿ.ಟಿ. ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಪ್ರಸಿದ್ಧ ಕಲಾವಿದೆ ಹರಿಪ್ರಿಯ ಅವರು `ಅಮೃತ ಮತಿ' ಯ ಪಾತ್ರದಲ್ಲಿ ಮತ್ತು ಬಹುಭಾಷಾ ಕಲಾವಿದ ಕಿಶೋರ್ ಅವರು `ಯಶೋಧರ' ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಅಮೇಜಾನ್ ಪ್ರೈಮ್ ಓ.ಟಿ.ಟಿ.ಯಲ್ಲಿ `ಅಮೃತ ಮತಿ'

Profile Siddalinga Swamy May 6, 2025 3:43 PM

ಬೆಂಗಳೂರು: ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಲಾಂಛನದಲ್ಲಿ ಪುಟ್ಟಣ್ಣ ಅವರು ನಿರ್ಮಿಸಿ, ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ `ಅಮೃತ ಮತಿ' ಕನ್ನಡ ಚಿತ್ರವು (Amruthamathi Movie) ಈಗ ಅಮೆಜಾನ್ ಪ್ರೈಮ್‍ನ ಓ.ಟಿ.ಟಿ. ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಈಗ ಆಸಕ್ತರು ಅಮೇಜಾನ್ ಪ್ರೈಮ್‍ನಲ್ಲಿ ಈ ಚಿತ್ರವನ್ನು ನೋಡ ಬಹುದಾಗಿದೆ. `ಅಮೃತ ಮತಿ' ಚಿತ್ರವು ಹದಿಮೂರನೇ ಶತಮಾನದ ಖ್ಯಾತ ಕನ್ನಡ ಕವಿ ಜನ್ನನ `ಯಶೋಧರ ಚರಿತೆ' ಕಾವ್ಯ ಪ್ರಸಂಗವನ್ನು ಆಧರಿಸಿ ರೂಪುಗೊಂಡಿದೆ. ಈ ಚಿತ್ರದಲ್ಲಿ ಮೂಲ ಕಥನವನ್ನು ಮರುಸೃಷ್ಟಿ ಮಾಡಿ ನಿರೂಪಿಸಿರುವುದು ಒಂದು ವಿಶೇಷ. ಕನ್ನಡ ಸಾಹಿತ್ಯದಲ್ಲಿ ಮರುಸೃಷ್ಟಿಯ ಪರಂಪರೆಯಿದ್ದು ಈ ಚಿತ್ರವು ಅದರ ಮುಂದುವರಿಕೆಯಗಿದೆ.

ಬರಗೂರು ರಾಮಚಂದ್ರಪ್ಪನವರು ನಿರ್ದೇಶನದ ಜತೆಗೆ ಚಿತ್ರಕತೆ, ಸಂಭಾಷಣೆ ಮತ್ತು ಗೀತರಚನೆ ಮಾಡಿದ್ದಾರೆ. ಪ್ರಸಿದ್ಧ ಕಲಾವಿದೆ ಹರಿಪ್ರಿಯ ಅವರು `ಅಮೃತ ಮತಿ' ಯ ಪಾತ್ರದಲ್ಲಿ ಮತ್ತು ಬಹುಭಾಷಾ ಕಲಾವಿದ ಕಿಶೋರ್ ಅವರು `ಯಶೋಧರ' ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಸುಂದರರಾಜ್, ಪ್ರಮೀಳಾ ಜೋಷಾಯ್, ತಿಲಕ್, ಅಂಬರೀಶ್ ಸಾರಂಗಿ, ವತ್ಸಲಾ ಮೋಹನ್, ಸುಪ್ರಿಯಾ ರಾವ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಸುರೇಶ್ ಅರಸು ಅವರು ಸಂಕಲನ, ನಾಗರಾಜ್ ಆದವಾನಿಯವರು ಛಾಯಾಗ್ರಹಣ, ಶಮಿತಾ ಮಲ್ನಾಡ್ ಅವರು ಸಂಗೀತ ನಿರ್ದೇಶನ, ತ್ರಿಭುವನ್ ಅವರು ನೃತ್ಯ ಸಂಯೋಜನೆಯನ್ನು ನಿರ್ವಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Oxidised Jewel Fashion: ಡಿಫರೆಂಟ್‌ ಲುಕ್‌ ನೀಡುವ ಆಕ್ಸಿಡೈಸ್ಡ್‌ ಜ್ಯುವೆಲರಿಗಳಿವು