Drug Addict: ಡಾಕ್ಟರ್‌ಗೆ ಡ್ರಗ್ಸ್ ಚಟ... ಬರೋಬ್ಬರಿ 1 ಕೋಟಿ ರೂ. ಆಸ್ತಿ ನುಂಗಿ ನೀರು ಕುಡಿದ ಕಿʻಲೇಡಿʼ ಪೊಲೀಸ್ ಬಲೆಗೆ
Drug case: ತೆಲಂಗಾಣ ಮಾದಕ ದ್ರವ್ಯ ವಿರೋಧಿ ಬ್ಯೂರೋ ಕೊಕೇನ್ ಸೇವನೆ ಮತ್ತು ಖರೀದಿಯ ಆರೋಪದ ಮೇಲೆ ಹೈದರಾಬಾದ್‌ನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಮಾಜಿ ಸಿಇಒ ಆಗಿದ್ದ ವೈದ್ಯೆಯನ್ನು ಬಂಧಿಸಿದೆ. 34 ವರ್ಷದ ನಮ್ರತಾ ಚಿಗುರುಪತಿ 53 ಗ್ರಾಂ ಕೊಕೇನ್, ಎರಡು ಮೊಬೈಲ್ ಫೋನ್‌ಗಳು ಮತ್ತು 10,000 ರೂ. ನಗದಿನ ಜೊತೆಗೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.


ಹೈದರಾಬಾದ್: ತೆಲಂಗಾಣ (Telangana drug case) ಮಾದಕ ದ್ರವ್ಯ ವಿರೋಧಿ ಬ್ಯೂರೋ (TG-ANB) ಕೊಕೇನ್ (Cocaine) ಸೇವನೆ ಮತ್ತು ಖರೀದಿಯ ಆರೋಪದ ಮೇಲೆ ಹೈದರಾಬಾದ್‌ನ (Hyderabad) ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಮಾಜಿ ಸಿಇಒ ಆಗಿದ್ದ ವೈದ್ಯೆಯನ್ನು ಬಂಧಿಸಿದೆ. 34 ವರ್ಷದ ನಮ್ರತಾ ಚಿಗುರುಪತಿ (Namrata Chigurupati) 53 ಗ್ರಾಂ ಕೊಕೇನ್, ಎರಡು ಮೊಬೈಲ್ ಫೋನ್‌ಗಳು ಮತ್ತು 10,000 ರೂ. ನಗದಿನ ಜೊತೆಗೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ನಮ್ರತಾ ಒಮೆಗಾ ಆಸ್ಪತ್ರೆಗಳ ಮಾಜಿ ಮುಖ್ಯಸ್ಥರಾಗಿದ್ದು, ಕೊಕೇನ್ ಸೇವನೆಯ ಚಟಕ್ಕೆ ತೀವ್ರವಾಗಿ ಒಳಗಾಗಿದ್ದರು. ಈ ಚಟಕ್ಕಾಗಿ ಆಕೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದ್ದಾರೆ. ಇತ್ತೀಚೆಗೆ ಕೊರಿಯರ್ ಮೂಲಕ ಕೊಕೇನ್ ತರಿಸಿಕೊಳ್ಳುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ನಮ್ರತಾ ಮುಂಬೈ ಮೂಲದ ಡ್ರಗ್ಸ್ ಪೂರೈಕೆದಾರ ವಂಶ್ ಧಕ್ಕರ್‌ನೊಂದಿಗೆ ಸಂಪರ್ಕ ಹೊಂದಿದ್ದರು. ಈತ ಆಕೆಯ ಬೇಡಿಕೆಯಂತೆ ಕೊಕೇನ್ ಸರಬರಾಜು ಮಾಡುತ್ತಿದ್ದ. ಬಾಲಕೃಷ್ಣ ಎಂಬಾತ ಕೊರಿಯರ್ ಮೂಲಕ ಕೊಕೇನ್ ತಲುಪಿಸುತ್ತಿದ್ದ. ಇವರ ಹಣದ ವಹಿವಾಟು ವಾಟ್ಸಾಪ್ ಮೂಲಕವೇ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ನಮ್ರತಾ ದಿನಕ್ಕೆ 8 ರಿಂದ 10 ಬಾರಿ ಕೊಕೇನ್ ಸೇವಿಸುತ್ತಿದ್ದರು. ರಾತ್ರಿಯಲ್ಲಿ ಪ್ರತಿ 2-3 ಗಂಟೆಗಳಿಗೊಮ್ಮೆ ಕೊಕೇನ್ ತೆಗೆದುಕೊಳ್ಳಲು ಎಚ್ಚರಗೊಳ್ಳುತ್ತಿದ್ದರು. ಇದರ ಜೊತೆಗೆ ಆಕೆ ನಿದ್ರೆ ಮಾತ್ರೆಗಳನ್ನೂ ಬಳಸುತ್ತಿದ್ದರು. ತನ್ನ ಚಟವನ್ನು ಉಳಿಸಿಕೊಳ್ಳಲು ಸುಮಾರು 1 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಇದುವರೆಗೆ ಕೊಕೇನ್‌ಗಾಗಿ 70 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಸುದ್ದಿಯನ್ನು ಓದಿ: Crime News: ಮತ್ತೊಮ್ಮೆ ಗೋವಿನ ಮೇಲೆ ವಿಕೃತಿ, ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ
ಮೇ 9 ರಂದು ಬಂಧನವಾಗುವ ಮೊದಲು, 20 ದಿನಗಳ ಹಿಂದೆ ಪೊಲೀಸರು ನಮ್ರತಾ ಅವರ ಮನೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಆಕೆಯನ್ನು ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸುವಂತೆ ಕುಟುಂಬಕ್ಕೆ ಸಲಹೆ ನೀಡಿದ್ದರು. ಆದರೆ, ನಮ್ರತಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ವಾಗ್ವಾದ ನಡೆಸಿದ್ದರು ಎಂದು ತಿಳಿದುಬಂದಿದೆ. ಬಂಧನದ ದಿನ, ನಮ್ರತಾ ಮುಂಬೈನಿಂದ ಬಾಲಕೃಷ್ಣ ರಾಮ್ ಎಂಬಾತನ ಮೂಲಕ 5 ಲಕ್ಷ ರೂ.ಗೆ ಕೊಕೇನ್ ತರಿಸಿಕೊಳ್ಳುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಇವರ ಚಲನವಲನವನ್ನು ಗಮನಿಸುತ್ತಿದ್ದ ಪೊಲೀಸರು, ವ್ಯವಹಾರ ಪೂರ್ಣಗೊಂಡ ಕೂಡಲೇ ಇಬ್ಬರನ್ನು ಬಂಧಿಸಿದರು.
ಬಾಲಕೃಷ್ಣ ಕೇವಲ ನಮ್ರತಾಗೆ ಮಾತ್ರವಲ್ಲ, ಇತರರಿಗೂ ಕೊಕೇನ್ ಸರಬರಾಜು ಮಾಡುತ್ತಿದ್ದ ಶಂಕೆಯಿದೆ. ಕಳೆದ ಒಂದು ತಿಂಗಳಲ್ಲಿ 10 ಬಾರಿ ಹೈದರಾಬಾದ್‌ಗೆ ಪ್ರಯಾಣಿಸಿದ್ದ ಈತ, ಆರಂಭದಲ್ಲಿ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿದ್ದು, ನಂತರ ಡ್ರಗ್ಸ್ ಕಳ್ಳಸಾಗಣೆಗೆ ಇಳಿದಿದ್ದ ಎನ್ನಲಾಗಿದೆ.