ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಿಹಾರದಲ್ಲಿ ನಡೆಯುವ ಏಷ್ಯಾ ಕಪ್ ಹಾಕಿ ಟೂರ್ನಿಗೆ ಪಾಕ್‌ ಅನುಮಾನ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಕೇಂದ್ರ ಸರ್ಕಾರವು ಎಲ್ಲಾ ಪಾಕಿಸ್ತಾನಿ ಪ್ರಜೆಗಳು ದೇಶವನ್ನು ತೊರೆಯುವಂತೆ ಆದೇಶಿಸಿತ್ತು. ಮತ್ತು ಅವರ ವೀಸಾಗಳನ್ನು ರದ್ದುಗೊಳಿಸಿತ್ತು. ಹೀಗಾಗಿ ಪಾಕ್‌ ಹಾಕಿ ತಂಡಕ್ಕೆ ಭಾರತ ವೀಸಾ ನೀಡುವುದು ಅನುಮಾನ ಎನ್ನಲಾಗಿದೆ.

ಏಷ್ಯಾ ಕಪ್ ಹಾಕಿ ಟೂರ್ನಿಗೆ ಪಾಕ್‌ ಅನುಮಾನ

Profile Abhilash BC May 14, 2025 3:38 PM

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ(Pahalgam fallout,) ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನತೆಯ ವಾತಾವರಣವಿದೆ. ಹೀಗಾಗಿ ಭಾರತದ ಆತಿಥ್ಯದಲ್ಲಿ ನಡೆಯುವ ಏಷ್ಯಾ ಕಪ್ ಹಾಕಿ(Asia Cup 2025 hockey) ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡ(Pakistan hockey Team) ಭಾಗವಹಿಸುವುದು ಅನುಮಾನ ಎನ್ನಲಾಗಿದೆ. ಪಂದ್ಯಾವಳಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 7 ರವರೆಗೆ ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯಲಿದೆ.

ಆತಿಥೇಯ ಭಾರತ, ಪಾಕಿಸ್ತಾನ, ಜಪಾನ್, ಕೊರಿಯಾ, ಚೀನಾ, ಮಲೇಷ್ಯಾ, ಓಮನ್ ಮತ್ತು ಚೈನೀಸ್ ತೈಪೆ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದೆ. ಆದರೆ ಭಾರತ ಮತ್ತು ಪಾಕ್‌ ರಾಜತಾಂತ್ರಿಕ ಸಮಸ್ಯೆಯ ಕಾರಣ ಪಾಕ್‌ ತಂಡಕ್ಕೆ ಅವಕಾಶ ಸಿಗುವುದು ಕಷ್ಟಸಾಧ್ಯ ಎನ್ನಲಾಗಿದೆ. ಮುಂದಿನ ವರ್ಷ ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತಾ ಪಂದ್ಯಾವಳಿಗೆ ಈ ಟೂರ್ನಿ ಮಹತ್ವದ್ದಾಗಿದೆ.

"ಇತ್ತೀಚೆಗೆ ನಡೆದ ಬರ್ಬರ ಪಹಲ್ಗಾಮ್ ದಾಳಿ ಮತ್ತು ಅದರ ನಂತರ ಭಾರತ ನಡೆಸಿದ ಆಪರೇಷನ್ ಸಿಂದೂರ ಕಾರ್ಯಚರಣೆ ಬಳಿಕ ನಾವು ಈಗಲೇ ಏನನ್ನೂ ಊಹಿಸಲು ಸಾಧ್ಯವಿಲ್ಲ. ಪಂದ್ಯಾವಳಿಗೆ ಇನ್ನೂ ಮೂರು ತಿಂಗಳುಗಳಿವೆ ಆದರೆ ನಮ್ಮ ಸರ್ಕಾರ ನಮಗೆ ಸೂಚಿಸುವದನ್ನು ನಾವು ಪಾಲಿಸುತ್ತೇವೆ. ಇದರಲ್ಲಿ ಎರಡು ಮಾತಿಲ್ಲ" ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಸರ್ಕಾರವು ಎಲ್ಲಾ ಪಾಕಿಸ್ತಾನಿ ಪ್ರಜೆಗಳು ದೇಶವನ್ನು ತೊರೆಯುವಂತೆ ಆದೇಶಿಸಿತ್ತು. ಮತ್ತು ಅವರ ವೀಸಾಗಳನ್ನು ರದ್ದುಗೊಳಿಸಿತ್ತು. ಹೀಗಾಗಿ ಪಾಕ್‌ ತಂಡಕ್ಕೆ ಭಾರತ ವೀಸಾ ನೀಡುವುದು ಅನುಮಾನ ಎನ್ನಲಾಗಿದೆ.

"ಸರ್ಕಾರದ ಸಲಹೆಯು ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಸ್ಪಷ್ಟಪಡಿಸದಿದ್ದರೆ, ಆ ಸಮಯದಲ್ಲಿ ಸರ್ಕಾರದ ನಿಲುವನ್ನು ಅವಲಂಬಿಸಿರುತ್ತದೆ" ಎಂದು ಫೆಡರೇಶನ್ ಮೂಲವೊಂದು ಪಿಟಿಐಗೆ ತಿಳಿಸಿದೆ.

ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸಲು ಅನುಮತಿ ಪಡೆಯದಿದ್ದರೆ, ಪಂದ್ಯಾವಳಿಯನ್ನು ಏಳು ತಂಡಗಳನ್ನಾಗಿ ಮಾಡುವ ಅಥವಾ ಖಾಲಿ ಇರುವ ಸ್ಥಾನವನ್ನು ತುಂಬಲು ಹೊಸ ತಂಡವನ್ನು ಆಯ್ಕೆ ಮಾಡುವ ನಿರ್ಧಾರವು ಸಂಪೂರ್ಣವಾಗಿ ಏಷ್ಯನ್ ಹಾಕಿ ಫೆಡರೇಶನ್‌ನ ಕೈಯಲ್ಲಿರುತ್ತದೆ.

ಇದನ್ನೂ ಓದಿ Operation Sindoor: ಆಪರೇಶನ್‌ ಸಿಂದೂರ್‌ ವೇಳೆ ಪಾಕ್‌ ಪರ ಘೋಷಣೆ ಕೂಗಿದ ವ್ಯಕ್ತಿ ಸೆರೆ