International Monetary Fund: ʼಷರತ್ತು ವಿಧಿಸಿ ಬೇಲ್ ಔಟ್ ಪ್ಯಾಕೇಜ್ ನೀಡಿದ್ದೇವೆʼ; ಪಾಕಿಸ್ತಾನಕ್ಕೆ ನೀಡಿದ ಹಣಕಾಸಿನ ನೆರವನ್ನು ಸಮರ್ಥಿಸಿಕೊಂಡ IMF
ಸಾಲದಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ನೀಡಲಾದ 1 ಬಿಲಿಯನ್ ಡಾಲರ್ (ರೂ. 8,000 ಕೋಟಿಗೂ ಹೆಚ್ಚು) ಬೇಲ್ ಔಟ್ ಪ್ಯಾಕೇಜ್ ಅನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಮರ್ಥಿಸಿಕೊಂಡಿದೆ. ಆಪರೇಷನ್ ಸಿಂದೂರದ ಬಳಿಕ ಭಾರತ ಹಾಗೂ ಪಾಕಿಸ್ತಾನನ ನಡುವೆ ಉದ್ವಿಗ್ನತೆ ಹೆಚ್ಚಿತ್ತು.


ನವದೆಹಲಿ: ಸಾಲದಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ನೀಡಲಾದ 1 ಬಿಲಿಯನ್ ಡಾಲರ್ (ರೂ. 8,000 ಕೋಟಿಗೂ ಹೆಚ್ಚು) ಬೇಲ್ ಔಟ್ ಪ್ಯಾಕೇಜ್ ಅನ್ನು (International Monetary Fund) ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಮರ್ಥಿಸಿಕೊಂಡಿದೆ. ಆಪರೇಷನ್ ಸಿಂದೂರದ ಬಳಿಕ ಭಾರತ ಹಾಗೂ ಪಾಕಿಸ್ತಾನನ ನಡುವೆ ಉದ್ವಿಗ್ನತೆ ಹೆಚ್ಚಿತ್ತು. ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಸಂದರ್ಭದಲ್ಲಿಯೇ ಐಎಂಎಫ್ ಹಣ ಬಿಡುಗಡೆ ಮಾಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಹಣ ಬಿಡುಗಡೆ ಮಾಡಲು ಪಾಕಿಸ್ತಾನಕ್ಕೆ 11 ಹೊಸ ಷರತ್ತುಗಳನ್ನು ವಿಧಿಸಿದೆ.
ಪಾಕಿಸ್ತಾನಕ್ಕೆ ಹಣಕಾಸು ನೆರವು ನೀಡಬಾರದು ಎಂದು ಭಾರತ ಮನವಿ ಮಾಡಿತ್ತು. ಆದರೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಹಣ ಬಿಡುಗಡೆ ಮಾಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಳೆದ ವಾರ ಪಾಕಿಸ್ತಾನಕ್ಕೆ ನೀಡುವ ನೆರವು "ಭಯೋತ್ಪಾದನೆಗೆ ಪರೋಕ್ಷ ಹಣಕಾಸು ನೆರವು" ಎಂದು ಹೇಳಿದ್ದರು. ಪಾಕಿಸ್ತಾನಕ್ಕೆ ನೀಡುವ ಹಣಕಾಸಿನ ನೆರವಿನ ಬಗ್ಗೆ ಈ ಹಿಂದೆ ಭಾರತ ಅಧಿಕೃತ ಹೇಳಿಕೆಯಲ್ಲಿ ಪ್ರಶ್ನಿಸಿತ್ತು. ಪಾಕಿಸ್ತಾನದ ಆರ್ಥಿಕ ವ್ಯವಹಾರಗಳಲ್ಲಿ ಮಿಲಿಟರಿ ಪಾತ್ರದ ಕುರಿತು ಎಚ್ಚರಿಕೆಯನ್ನೂ ನೀಡಿತ್ತು. ಭಯೋತ್ಪಾದನೆಗೆ ಹಣಕಾಸು ಒದಗಿಸುವ ಅಪಾಯಗಳು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಗೆ ಅದರಿಂದ ಎದುರಾಗಬಹುದಾದ ತೊಂದರೆಗಳ ಬಗ್ಗೆ ವಿಸ್ತೃತವಾಗಿ ಮಾಹಿತಿಯನ್ನು ನೀಡಿತ್ತು.
ಐಎಂಎಫ್ ತನ್ನ ವಿಸ್ತೃತ ನಿಧಿ ಸೌಲಭ್ಯ (ಇಎಫ್‌ಎಫ್) ಕಾರ್ಯಕ್ರಮದಡಿಯಲ್ಲಿ ಪಾಕಿಸ್ತಾನಕ್ಕೆ ಎರಡು ಕಂತುಗಳಲ್ಲಿ 2.1 ಬಿಲಿಯನ್ ಡಾಲರ್‌ಗಳನ್ನು ವಿತರಿಸಿದೆ. ಪಾಕಿಸ್ತಾನವು ಎಲ್ಲಾ ಗುರಿಗಳನ್ನು ನಿಜವಾಗಿಯೂ ತಲುಪಿದೆ ಎಂದು ನಮ್ಮ ಮಂಡಳಿಯು ಕಂಡುಕೊಂಡಿದೆ. ಅದು ಕೆಲವು ಸುಧಾರಣೆಗಳಲ್ಲಿ ಪ್ರಗತಿ ಸಾಧಿಸಿದೆ. ಆ ಕಾರಣಕ್ಕಾಗಿ ಹಣ ಬಿಡುಗಡೆ ಮಾಡಲಾಗಿದೆ ಎಂದು IMF ನ ಸಂವಹನ ವಿಭಾಗದ ನಿರ್ದೇಶಕಿ ಜೂಲಿ ಕೊಜಾಕ್ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಭಾರತದೊಂದಿಗಿನ ಸಂಘರ್ಷಕ್ಕೆ ಸಂಬಂಧಿಸಿದಂತೆ, ಇತ್ತೀಚಿನ ಸಂಘರ್ಷದಿಂದ ಉಂಟಾದ ಜೀವಹಾನಿಗೆ ನಾವು ಸಂತಾಪವನ್ನು ಸೂಚಿಸುತ್ತೇವೆ. ಪಾಕಿಸ್ತಾನಕ್ಕೆ 11 ಷರತ್ತುಗಳನ್ನು ವಿಧಿಸಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ಜೂಲಿ ಕೊಜಾಕ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Jyoti Malhotra: ಪಾಕಿಸ್ತಾನ ಪರ ಬೇಹುಗಾರಿಕೆ- ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪೊಲೀಸ್ ಕಸ್ಟಡಿ 4 ದಿನಗಳವರೆಗೆ ವಿಸ್ತರಣೆ
ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಹಣ ಬಿಡುಗಡೆ ಮಾಡಲು ಪಾಕಿಸ್ತಾನಕ್ಕೆ 11 ಹೊಸ ಷರತ್ತುಗಳನ್ನು ವಿಧಿಸಿದೆ. ಪಾಕಿಸ್ತಾನದ ಮೇಲೆ ವಿಧಿಸಲಾದ ಹೊಸ ಷರತ್ತುಗಳಲ್ಲಿ 17.6 ಟ್ರಿಲಿಯನ್ ರೂಪಾಯಿಗಳ ಹೊಸ ಬಜೆಟ್‌ಗೆ ಸಂಸತ್ತಿನ ಅನುಮೋದನೆ, ವಿದ್ಯುತ್ ಬಿಲ್‌ಗಳ ಮೇಲಿನ ಸಾಲ ಸೇವಾ ಸರ್‌ಚಾರ್ಜ್‌ನಲ್ಲಿ ಹೆಚ್ಚಳ ಮತ್ತು ಮೂರು ವರ್ಷಗಳಿಗಿಂತ ಹೆಚ್ಚು ಹಳೆಯದಾದ ಬಳಸಿದ ಕಾರುಗಳ ಆಮದಿನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದು ಅದರಲ್ಲಿ ಸೇರಿವೆ.