Mass Suicide: ಮೂವರು ಅಪ್ರಾಪ್ತ ಹೆಣ್ಣುಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ- ಕಾರಣ ಮಾತ್ರ ನಿಗೂಢ
Mass Suicide: ಮುಂಬೈ ಸಮೀಪದ ಭಿವಂಡಿಯ ಫೆನೆ ಗ್ರಾಮದಲ್ಲಿ 32 ವರ್ಷದ ಮಹಿಳೆಯೊಬ್ಬರು ತಮ್ಮ ಮೂವರು ಅಪ್ರಾಪ್ತ ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ರಾತ್ರಿ ಕೆಲಸಕ್ಕೆ ತೆರಳಿದ್ದ ಗಂಡ ಶನಿವಾರ ಬೆಳಿಗ್ಗೆ ಮನೆಗೆ ವಾಪಸಾದಾಗ ನಾಲ್ಕು ಶವಗಳು ನೇತಾಡುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.


ಮುಂಬೈ: ಮುಂಬೈ (Mumbai) ಸಮೀಪದ ಭಿವಂಡಿಯ (Bhiwandi) ಫೆನೆ ಗ್ರಾಮದಲ್ಲಿ 32 ವರ್ಷದ ಮಹಿಳೆಯೊಬ್ಬರು ತಮ್ಮ ಮೂವರು ಅಪ್ರಾಪ್ತ ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆ (Woman Suicide Three Minor Daughters) ಮಾಡಿಕೊಂಡ ಘಟನೆ ನಡೆದಿದೆ. ರಾತ್ರಿ ಕೆಲಸಕ್ಕೆ ತೆರಳಿದ್ದ ಗಂಡ ಶನಿವಾರ ಬೆಳಿಗ್ಗೆ ಮನೆಗೆ ವಾಪಸಾದಾಗ ನಾಲ್ಕು ಶವಗಳು ನೇತಾಡುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ವರದಿಗಳ ಪ್ರಕಾರ, ಪವರ್ ಲೂಮ್ ಕೆಲಸಗಾರ ಲಾಲ್ಜಿ ಬನ್ವಾರಿಲಾಲ ಭಾರತಿ, ತಮ್ಮ ಪತ್ನಿ ಪುನೀತಾ (31 ವರ್ಷ), ಮಕ್ಕಳಾದ ನಂದಿನಿ (12 ವರ್ಷ), ನೇಹಾ (7 ವರ್ಷ) ಮತ್ತು ಅನು (4 ವರ್ಷ) ಜೊತೆ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ ಕೆಲಸಕ್ಕೆ ತೆರಳಿದ ಲಾಲ್ಜಿ, ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಗೆ ವಾಪಸಾದಾಗ, ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಸಣ್ಣ ಕಿಟಕಿಯಿಂದ ಒಳಗೆ ಒಡನೋಡಿದಾಗ ಈ ದುರಂತ ಕಾಣಿಸಿತು.
ಈ ಸುದ್ದಿಯನ್ನು ಓದಿ: Madhya Pradesh Crime: ಹೆಂಡತಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟ ಗಂಡ; ಸಮಾಧಿಯಿಂದ ಹೊರ ಬಂದ ಕೈ ಕಂಡು ಆತ್ಮಹತ್ಯೆ
ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ. ಸ್ಥಳ ಮಹಜರು ನಡೆಸಿದ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ದಿವಂಗತ ಇಂದಿರಾ ಗಾಂಧಿ ಸ್ಮೃತಿ ಉಪಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಆತ್ಮಹತ್ಯೆಗೆ ಯಾರನ್ನೂ ಜವಾಬ್ದಾರರನ್ನಾಗಿ ಮಾಡಬಾರದು ಎಂದು ಒಂದು ಚೀಟಿಯಲ್ಲಿ ಬರೆದಿರುವುದು ಕಂಡುಬಂದಿದೆ.
ಈ ಘಟನೆಯು 2018ರಲ್ಲಿ ಉತ್ತರ ದೆಹಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಜನರು ಕಣ್ಣುಕಟ್ಟಿಕೊಂಡು, ಬಾಯಿಗೆ ಟೇಪ್ ಹಚ್ಚಿಕೊಂಡು ಶವವಾಗಿ ಪತ್ತೆಯಾದ ಘಟನೆಯನ್ನು ನೆನಪಿಸುತ್ತದೆ. ತನಿಖಾಧಿಕಾರಿಗಳ ಪ್ರಕಾರ, ಕೈಬರಹದ ಚೀಟಿಗಳಲ್ಲಿ “ಕುಟುಂಬದಿಂದ ಕೆಲವು ಆಧ್ಯಾತ್ಮಿಕ ಅಥವಾ ರಹಸ್ಯಮಯ ಆಚರಣೆಗಳನ್ನು ಅನುಸರಿಸಲಾಗುತ್ತಿತ್ತು” ಎಂಬ ಸುಳಿವುಗಳು ಕಂಡುಬಂದಿದ್ದವು. ಡೈರಿಗಳಲ್ಲಿನ ಟಿಪ್ಪಣಿಗಳ ಆಧಾರದ ಮೇಲೆ ಇದು ತಪ್ಪಾದ ಆಚರಣೆಯ ಫಲಿತಾಂಶ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು.