Lawrence Bishnoi: "26 ಜನರ ಬದಲಿಗೆ 1 ಲಕ್ಷ ಜನರ ಪ್ರಾಣ ತೆಗೆಯುತ್ತೇವೆ" ; ಪಾಕ್‌ಗೆ ಬಿಷ್ಣೋಯ್ ಗ್ಯಾಂಗ್ ಬೆದರಿಕೆ
ಪಹಲ್ಗಾಮ್ ದಾಳಿ ಬಳಿಕ ಭಾರತ ಹಾಗೂ ಪಾಕ್ ನಡುವೆ ಇದ್ದ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ. ಇದೀಗ ಳಿಯ ಬಗ್ಗೆ ಇಡೀ ದೇಶವೇ ಆಕ್ರೋಶಗೊಂಡಿರುವ ಸಮಯದಲ್ಲಿ, ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ 26 ಅಮಾಯಕರ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಶಪಥ ಮಾಡಿದೆ.


ನವದೆಹಲಿ: ಪಹಲ್ಗಾಮ್ ದಾಳಿ ಬಳಿಕ ಭಾರತ ಹಾಗೂ ಪಾಕ್ ನಡುವೆ ಇದ್ದ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ. ಇದೀಗ ದಾಳಿಯ ಬಗ್ಗೆ ಇಡೀ ದೇಶವೇ ಆಕ್ರೋಶಗೊಂಡಿರುವ ಸಮಯದಲ್ಲಿ, ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್ 26 ಅಮಾಯಕರ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಶಪಥ ಮಾಡಿದೆ. 26 ಜನರ ಬದಲಾಗಿದೆ ಪಾಕಿಸ್ತಾನದ 1 ಲಕ್ಷ ಜನರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ. ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಪ್ರಕಟಿಸಿದೆ. 26/11 ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನೂ ಕೂಡ ಕೊಲ್ಲುವುದಾಗಿ ತಿಳಿಸಿದೆ.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಹಿರಂಗವಾಗಿ ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದೆ. ಹಫೀಜ್ ಸಯೀದ್‌ನ ಫೋಟೋವನ್ನು ಪೋಸ್ಟ್ ಮಾಡಿ, ನೀವು ನಮ್ಮ ಮುಗ್ಧ ಜನರನ್ನು ಕೊಂದಿದ್ದೀರಿ, ಈಗ ನಾವು ಅದಕ್ಕೆ ಸೇಡು ತೀರಿಸಿಕೊಳ್ಳಲೇಬೇಕು. ಪಾಕಿಸ್ತಾನಕ್ಕೆ ಪ್ರವೇಶಿಸಿ 1 ಲಕ್ಷ ಜನರನ್ನು ನಾವು ಕೊಂದು ಹಾಕುತ್ತೇವೆ. ಈ ಚಿತ್ರವನ್ನು "ಜೈ ಶ್ರೀ ರಾಮ್" ಎಂಬ ಫೇಸ್‌ಬುಕ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಆದರೆ ಇದನ್ನು ನಿಜವಾಗಿಯೂ ಬಿಷ್ಣೋಯ್ ಗ್ಯಾಂಗ್ ಪೋಸ್ಟ್ ಮಾಡಿದೆಯೇ ಇಲ್ಲವೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನ ಜೈಲಿನಲ್ಲಿದ್ದಾನೆ.
ಹಫೀಜ್ ಸಯೀದ್ ಯಾರು?
ಹಫೀಜ್ ಸಯೀದ್ ಭಾರತಕ್ಕೆ ಅತ್ಯಂತ ಬೇಕಾಗಿರುವ ಭಯೋತ್ಪಾದಕ. ಸಯೀದ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಮುಖ್ಯಸ್ಥ. ಈ ಭಯೋತ್ಪಾದಕ ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಕೂಡ ಆಗಿದ್ದಾನೆ. ಇದಲ್ಲದೆ, ಭಾರತದ ಮೇಲಿನ ಹೆಚ್ಚಿನ ಭಯೋತ್ಪಾದಕ ದಾಳಿಗಳಲ್ಲಿ ಹಫೀಜ್ ಭಾಗಿಯಾಗಿದ್ದಾನೆ. ಭಾರತವನ್ನು ಹೊರತುಪಡಿಸಿ, ವಿಶ್ವದ ಹಲವು ದೇಶಗಳು ಹಫೀಜ್‌ನನ್ನು ಭಯೋತ್ಪಾದಕ ಎಂದು ಘೋಷಿಸಿವೆ.
ಈ ಸುದ್ದಿಯನ್ನೂ ಓದಿ: Pahalgam attack: ಒಂದು ವಾರದ ಹಿಂದೆ ಪಹಲ್ಗಾಮ್‌ನಲ್ಲಿ ಸ್ಮಾಟ್ ಇನ್‌ಸ್ಪೆಕ್ಷನ್ ಮಾಡಿದ್ರಂತೆ ಉಗ್ರರು!
ಈ ಭಯೋತ್ಪಾದಕನನ್ನು ಹಸ್ತಾಂತರಿಸುವಂತೆ ಭಾರತ ಪಾಕಿಸ್ತಾನಕ್ಕೆ ಹಲವು ಬಾರಿ ಒತ್ತಾಯಿಸಿದೆ, ಆದರೆ ಪಾಕಿಸ್ತಾನ ಅವನಿಗೆ ಆಶ್ರಯ ನೀಡಿದೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಮುಖ್ಯ ರೂವಾರಿ ಎಂದು ನಂಬಲಾದ ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಪಾಕಿಸ್ತಾನವು ಸುಮಾರು ನಾಲ್ಕು ಬಾರಿ ಭದ್ರತೆಯನ್ನು ತೀವ್ರವಾಗಿ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿದ ಭದ್ರತಾ ವ್ಯಾಪ್ತಿಯಲ್ಲಿ ಪಾಕಿಸ್ತಾನ ಸಶಸ್ತ್ರ ಪಡೆಗಳು 24 ಗಂಟೆ ಲಾಹೋರ್‌ನಲ್ಲಿರುವ ಸಯೀದ್‌ನ ನಿವಾಸದ ಸುತ್ತಲೂ ಕಾವಲು ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪಾಕಿಸ್ತಾನ ಸೇನೆ, ಐಎಸ್‌ಐ ಮತ್ತು ಲಷ್ಕರ್ ಕಾರ್ಯಕರ್ತರು ಜಂಟಿಯಾಗಿ ಆತನ ರಕ್ಷಣೆಯಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ.