ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಜಮ್ಮುವಿನಲ್ಲಿರುವ ತಂದೆಯಿಂದ ಬಂದ ಕರೆ ಬಗ್ಗೆ ಸಮಯ್ ರೈನಾ ಭಾವುಕ ಪೋಸ್ಟ್

Standup Comedian Samay Raina ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನ ಡ್ರೋನ್ ಮತ್ತು ಕ್ಷಿಪಣಿ ಪ್ರತಿ ದಾಳಿ ಮಾಡಿದ್ದು, ಭಾರತ ಯಶಸ್ವಿಯಾಗಿ ದಾಳಿಗಳನ್ನುತಡೆದಿದೆ. ಈ ಸಂದರ್ಭದಲ್ಲಿ ಹಾಸ್ಯ ಕಲಾವಿದ ಸಮಯ್ ರೈನಾ ಬಾಲಿವುಡ್ ತಾರೆಯರಂತೆ ಭಾರತೀಯ ಸೇನೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ, ಜಮ್ಮುವಿನಲ್ಲಿರುವ ತಮ್ಮ ತಂದೆಯಿಂದ ಭಾವನಾತ್ಮಕ ಕರೆ ಸ್ವೀಕರಿಸಿದ ಬಗ್ಗೆ ಹಂಚಿಕೊಂಡಿದ್ದಾರೆ. ಆ ಕುರಿತು ಕಂಪ್ಲೀಟ್ ಡಿಟೇಲ್ ಇಲ್ಲಿದೆ

ಪಾಕಿಸ್ತಾನ ದಾಳಿ ಬಗ್ಗೆ ಸಮಯ್ ರೈನಾ ತಂದೆ ಹೇಳಿದ್ದು ಹೀಗೆ...

Profile Rakshita Karkera May 9, 2025 2:20 PM

ನವದೆಹಲಿ: ಆಪರೇಷನ್ ಸಿಂಧೂರ್ (Operation Sindoor) ನಂತರ ಭಾರತವು ಕಳೆದ ರಾತ್ರಿ ಪಾಕಿಸ್ತಾನದ ಡ್ರೋನ್ (Pakistani Drone) ಮತ್ತು ಕ್ಷಿಪಣಿ ದಾಳಿಗಳನ್ನು (Missile Attacks) ಯಶಸ್ವಿಯಾಗಿ ತಡೆದಿದೆ ಎಂದು ದೃಢಪಡಿಸಿದೆ. ಈ ಸಂದರ್ಭದಲ್ಲಿ ಹಾಸ್ಯ ಕಲಾವಿದ ಸಮಯ್ ರೈನಾ (Samay Raina), ಬಾಲಿವುಡ್ ತಾರೆಯರಂತೆ ಭಾರತೀಯ ಸೇನೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ, ಜಮ್ಮುವಿನಲ್ಲಿರುವ ತಮ್ಮ ತಂದೆಯಿಂದ ಭಾವನಾತ್ಮಕ ಕರೆ ಸ್ವೀಕರಿಸಿದ ಬಗ್ಗೆ ಹಂಚಿಕೊಂಡಿದ್ದಾರೆ.

ಸಮಯ್ ರೈನಾ, ತಮ್ಮ ತಂದೆ ಭಾರತೀಯ ಸೇನೆಯು ಎಲ್ಲವನ್ನೂ ನಿಯಂತ್ರಣದಲ್ಲಿಟ್ಟಿದೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. "ಜಮ್ಮುವಿನಿಂದ ನನ್ನ ತಂದೆ ಇಂದು ರಾತ್ರಿ ಕರೆ ಮಾಡಿ ಶುಭರಾತ್ರಿ ಹೇಳಿದರು. ಅವರ ಶಾಂತ ಮತ್ತು ಸ್ಥಿರವಾದ ಧ್ವನಿ ಕೇಳಿ ನಾನು ನಾನು ನಿಶ್ಚಿಂತೆಯಿಂದ ನಿದ್ದೆ ಮಾಡಲು ಸಾಧ್ಯವಾಯಿತು. ಭಾರತೀಯ ಸೇನೆ ನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ತಂದೆ ಮಾತು ಕೇಳಿ ಮನಸ್ಸಿನ ದುಗುಡ ದೂರವಾಗಿತ್ತು. ಮುಂಬೈನ ನನ್ನ ಮನೆಯಲ್ಲಿ ದೀಪಗಳನ್ನು ಆರಿಸಿ, ಕಿಟಕಿಯ ಬಳಿ ಪರದೆ ಎಳೆಯಲು ನಡೆದೆ. ಹೊರಗೆ ನನ್ನ ನೆರೆಹೊರೆಯವರ ದೀಪಗಳು ಇನ್ನೂ ಬೆಳಗುತ್ತಿರುವುದು ಕಣ್ಣಿಗೆ ಬಿತ್ತು" ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.

"ನನ್ನ ನೆರೆಮನೆಯವರ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಮುಂಬೈಯಲ್ಲಿ ಅದೇನುಹೊಸದಲ್ಲ ಬಿಡಿ. ಅವರ ಮನೆಯ ದೀಪ ಇನ್ನೂ ಉರಿಯುತ್ತಿರುವುದನ್ನು ಕಂಡು ಅವರಿಗೂ ಜಮ್ಮು, ಬಹುಶಃ ಪಠಾಣ್‌ಕೋಟ್‌ನಲ್ಲಿ ಕುಟುಂಬವಿದೆಯೇ? ಅಥವಾ ಅವರು ರಾತ್ರಿಯಿಡೀ ಎಚ್ಚರವಾಗಿರುವ, ಗಡಿಯಲ್ಲಿರುವ ತಂದೆಯಿಂದ ಬೆಳಗ್ಗಿನ ಕರೆಗಾಗಿ ಕಾಯುತ್ತಿರುವ ಶೂರ ಸೈನಿಕನ ಮಗನಾಗಿರಬಹುದೇ? ಎಂಬ ಆಲೋಚನೆ ಬಂತು. ನಮ್ಮ ಸುರಕ್ಷತೆಗಾಗಿ ತ್ಯಾಗ ಮಾಡುವ ಸೇನೆ ಮತ್ತು ಅವರ ಕುಟುಂಬಗಳಿಗೆ ನನ್ನ ಗೌರವ. ಶುಭರಾತ್ರಿ. ಜೈ ಹಿಂದ್," ಎಂದು ಅವರು ಬರೆದುಕೊಂಡಿದ್ದಾರೆ.

ಭಾರತೀಯ ಸೇನೆಯನ್ನು ಶ್ಲಾಘಿಸಿ ಮತ್ತೊಂದು ಪೋಸ್ಟ್‌ನಲ್ಲಿ, "ಜಮ್ಮುವಿನ ಎಲ್ಲರಿಗೂ ನನ್ನ ಪ್ರಾರ್ಥನೆಗಳು. ಶಾಂತಿಯಿಂದ ನಿದ್ದೆ ಮಾಡಿ, ಭಾರತೀಯ ಸೇನೆಯ ಮೇಲೆ ನಂಬಿಕೆ ಇರಿಸಿ. ಜೈ ಹಿಂದ್," ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Operation Sindoor: ನೋಡ ನೋಡುತ್ತಿದ್ದಂತೆ ಕ್ಷಿಪಣಿಗಳ ಎಂಟ್ರಿ; ವೈಮಾನಿಕ ದಾಳಿಗೆ ಬೆಚ್ಚಿದ ಪಾಕ್‌, ಹೇಗಿತ್ತು ಗೊತ್ತಾ ಆಪರೇಷನ್ ಸಿಂಧೂರ್‌? ದೃಶ್ಯಗಳು ವೈರಲ್‌

ಪಾಕಿಸ್ತಾನ ಸೇನೆಯು 2025ರ ಮೇ 8 ಮತ್ತು 9ರ ರಾತ್ರಿಯಲ್ಲಿ ಡ್ರೋನ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಬಳಸಿ ಪಶ್ಚಿಮ ಗಡಿಯ ಉದ್ದಕ್ಕೂ ಹಲವಾರು ದಾಳಿಗಳನ್ನು ನಡೆಸಿತು. ಜಮ್ಮು ಮತ್ತು ಕಾಶ್ಮೀರದ ಗಡಿರೇಖೆಯಲ್ಲಿ (LoC) ಪಾಕ್ ಸೈನಿಕರು ಹಲವು ಕದನ ವಿರಾಮ ಉಲ್ಲಂಘನೆಗಳನ್ನು ಮಾಡಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ. ಡ್ರೋನ್ ದಾಳಿಗಳನ್ನು ಯಶಸ್ವಿಯಾಗಿ ತಡೆಯಲಾಯಿತು ಮತ್ತು ಕದನ ವಿರಾಮ ಉಲ್ಲಂಘನೆಗಳಿಗೆ ತಕ್ಕ ಪ್ರತಿಕ್ರಿಯೆ ನೀಡಲಾಯಿತು ಎಂದು ಸೇನೆ ಹೇಳಿದೆ. "ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ. ಎಲ್ಲಾ ಕುತಂತ್ರ ಯೋಜನೆಗಳಿಗೆ ಬಲದಿಂದ ಪ್ರತಿಕ್ರಿಯಿಸಲಾಗುವುದು" ಎಂದು ಸೇನೆ ಸ್ಪಷ್ಟಪಡಿಸಿದೆ.

ಈ ಹಿಂದೆ, ಜಮ್ಮು, ಪಠಾಣ್‌ಕೋಟ್ ಮತ್ತು ಉಧಮ್‌ಪುರದ ಸೇನಾ ನೆಲೆಗಳನ್ನು ಗುರಿಯಾಗಿಸಿದ ಡ್ರೋನ್‌ಗಳನ್ನು "ತಕ್ಷಣವೇ ತಟಸ್ಥಗೊಳಿಸಲಾಗಿದೆ" ಎಂದು ಸೇನೆ ತಿಳಿಸಿತ್ತು. ಇದೇ ವೇಳೆ, ಭಾರತದ ಗಡಿ ಭದ್ರತಾ ಪಡೆ (BSF) ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಗಡಿಯಾಚೆಗಿನ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದೆ.