ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-Pakistan Conflict: ಪಾಕ್‌ಗೆ ಚಳ್ಳೆ ಹಣ್ಣು ತಿನಿಸಲು ಭಾರತದ ಪ್ಲ್ಯಾನ್‌; ವಿವಿಧ ನಗರಗಳಲ್ಲಿ ಬ್ಲ್ಯಾಕ್‌ಔಟ್‌, ರೆಡ್‌ ಅಲರ್ಟ್‌ ಘೋಷಣೆ

Operation Sindoor: ಪಾಕಿಸ್ತಾನ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರ ಹಲವು ಸೂಕ್ಷ್ಮ ನಗರಗಳಲ್ಲಿ ಬ್ಲ್ಯಾಕ್‌ಔಟ್‌ ಮತ್ತು ರೆಡ್‌ ಅಲರ್ಟ್‌ ಘೋಷಿಸಿದೆ. ಪಾಕ್‌ನಿಂದ ನಡೆಯಬಹುದಾದ ಯಾವುದೇ ಆಕ್ರಮಣವನ್ನು ತಡೆಯಲು ಮುನ್ನೆಚ್ಚರಿಕೆಯ ಭಾಗವಾಗಿ ಭಾರತ ಈ ಕ್ರಮಗಳನ್ನು ಕೈಗೊಂಡಿದೆ.

ವಿವಿಧ ನಗರಗಳಲ್ಲಿ ಬ್ಲ್ಯಾಕ್‌ಔಟ್‌, ರೆಡ್‌ ಅಲರ್ಟ್‌ ಘೋಷಣೆ

Profile Ramesh B May 9, 2025 7:33 PM

ಹೊಸದಿಲ್ಲಿ: ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಪಾಕ್‌ ಮೂಲದ ಉಗ್ರರು 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿತ್ತು. ಆಪರೇಷನ್‌ ಸಿಂದೂರ್‌ (Operation Sindoor) ಹೆಸರಿನಲ್ಲಿ ಭಾರತ ಈ ಕೃತ್ಯಕ್ಕೆ ಸೇಡು ತೀರಿಸಿಕೊಂಡಿದ್ದು, ಸುಮಾರು 100 ಉಗ್ರರನ್ನು ಹೊಡೆದುರುಳಿಸಿದೆ. ಇದಕ್ಕೆ ಪ್ರತಿಯಾಗಿ ಮೇ 7ರಂದು ದಾಳಿ ಪಾಕ್‌ ಭಾರತದ ಸುಮಾರು 15 ನಗರಗಳ ಮೇಲೆ ದಾಳಿ ನಡೆಸಿದೆ. ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದ ಭಾರತ ಪಾಕ್‌ನ ಸೇನೆಯನ್ನು ಹಿಮ್ಮೆಟ್ಟಿಸಿದೆ (India-Pakistan Conflict). ಅಲ್ಲದೆ ಪಾಕಿಸ್ತಾನ ಮೇ 8-9ಕ್ಕೆ ಭಾರತದ ನಾಗರಿಕ ಹಾಗೂ ಸೇನಾ ನೆಲೆಗಳ ಮೇಲೆ ದಾಳಿಗೆ ಯತ್ನಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಭಾರತ ಪಾಕಿಸ್ತಾನದ 36 ಕಡೆ ಪ್ರತಿದಾಳಿ ನಡೆಸಿದೆ. ಮೇ 9ರಂದೂ ಪಾಕಿಸ್ತಾನದಿಂದ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಗಡಿ ಅಂಚಿನಲ್ಲಿರುವ ನಗರಗಲ್ಲಿ ಭಾರತ ಭದ್ರತೆ ಹೆಚ್ಚಿಸಿದೆ.

ಹಲವು ಸೂಕ್ಷ್ಮ ನಗರಗಳಲ್ಲಿ ಕೇಂದ್ರ ಬ್ಲ್ಯಾಕ್‌ಔಟ್‌ (Blackouts) ಮತ್ತು ರೆಡ್‌ ಅಲರ್ಟ್‌ ಘೋಷಿಸಿದೆ. ಪಾಕ್‌ನಿಂದ ನಡೆಯಬಹುದಾದ ಯಾವುದೇ ಆಕ್ರಮಣವನ್ನು ತಡೆಯಲು ಮುನ್ನೆಚ್ಚರಿಕೆಯ ಭಾಗವಾಗಿ ಭಾರತ ಈ ಕ್ರಮಗಳನ್ನು ಕೈಗೊಂಡಿದೆ.

ಯುದ್ಧದ ಸಂದರ್ಭದಲ್ಲಿ ಶತ್ರು ದೇಶಗಳ ಕಣ್ಣಿಗೆ ಮಣ್ಣೆರಚಲು ಎಲ್ಲಡೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಸೈರನ್ ಶಬ್ದ ಕೇಳಿದ ನಂತರ ಇಡೀ ಪ್ರದೇಶವೇ ಕಗ್ಗತ್ತಲೆಯಲ್ಲಿ ಮುಳುಗುತ್ತದೆ. ಇದನ್ನು ಬ್ಲ್ಯಾಕ್‌ಔಟ್‌ ಎನ್ನಲಾಗುತ್ತದೆ. ಇದರಿಂದ ಶತ್ರುಗಳ ದಾಳಿಯಿಂದ ಒಂದು ಹಂತದವರೆಗೆ ತಪ್ಪಿಸಿಕೊಳ್ಳಬಹುದಾಗಿದೆ.



ಈ ಸುದ್ದಿಯನ್ನೂ ಓದಿ: Operation Sindoor: ಭಾರತದ ಕ್ಷಿಪಣಿ ದಾಳಿ ಏಕೆ ತಡೆಯಲಿಲ್ಲ? ಪಾಕ್‌ ರಕ್ಷಣಾ ಮಂತ್ರಿ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ

ಮೇ 9ರಂದು ಬ್ಲ್ಯಾಕ್‌ಔಟ್‌ ಮತ್ತು ರೆಡ್‌ ಅಲರ್ಟ್‌ ಘೋಷಣೆಯಾಗಿರುವ ನಗರಗಳು

ಪಾಕಿಸ್ತಾನದಿಂದ ದಾಳಿ ನಡೆಯುವ ಸಾಧ್ಯತೆ ಇರುವುದಿಂದ ಮೇ 9ರಂದು ಈ ಕೆಳಗಿನ ರಾಜ್ಯಗಳ ನಗರಗಳಲ್ಲಿ ಬ್ಲ್ಯಾಕ್‌ಔಟ್‌ ಮತ್ತು ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ: ಜಮ್ಮು, ಶ್ರೀನಗರ, ಉದ್ದಾಂಪುರ, ಸಾಂಬಾ, ಬಾರಮುಲ್ಲಾ, ಕುಪ್ವಾರ, ಅಖ್ನೂರ್, ರಜೌರಿ, ಪೂಂಛ್‌, ಕಿಷ್ತ್ವರ.

ಪಂಜಾಬ್: ಅಮೃತಸರ, ಜಲಂಧರ್, ಲುಧಿಯಾನಾ, ಚಂಡೀಗಢ್, ಮುನ್ನಿ, ಪಠಾಣಕೋಟ್, ಗುರ್ದಾಸ್ಪುರ, ಫಿರೋಜ್‌ಪುರ, ಫಜಿಲ್ಕಾ, ಟಾರ್ನ್ ತರಣ್, ಕಾಪೂರ್‌ಥಲಾ, ಸಂಗ್ರೂರು, ಬಠಿಂಡಾ, ಹೋಶಿಯಾರ್‌ಪುರ, ಫಾಗ್ವಾರಾ, ರೂಪನಗರ.

ರಾಜಸ್ಥಾನ: ಜೈಪುರ, ಜೋಧ್‌ಪುರ, ಬಿಕಾನರ್, ಜೈಸಲ್ಮೆರ್, ಶ್ರೀಗಂಗಾನಗರ, ಬಾರ್ಮರ್‌, ಫಲೋಡಿ

ಹರಿಯಾಣ: ಅಂಬಾಲಾ, ಪಂಚ್ಕುಲ, ಸಿರ್ಸಾ, ಪಾನಿಪತ್, ಕಾರ್ನಲ್

ಗುಜರಾತ್: ಭುಜ್, ನಾಲಿಯಾ, ನಾಖತ್ರಾಣ, ಗಂಧಿಡ್‌ಹಮ್, ಬಾನಾಸ್ಕಾಂತಾ ಪ್ರಾಂತ್ಯದ ಗಡಿಗೆ ಹೊಂದಿಕೊಂಡಿರುವ ಗ್ರಾಮಗಳು, ಪಟಾನ್‌ನ ಕೆಲವು ಗ್ರಾಮಗಳು

ದಿಲ್ಲಿ: ದಿಲ್ಲಿಯಾದ್ಯಂತ. ಕೆಲವೆಡೆ ಮಾಕ್‌ ಡ್ರಿಲ್‌.

ಹಿಮಾಚಲ ಪ್ರದೇಶ: ಉನಾ, ಕಾಂಗ್ರಾ, ಹಮಿರ್ಪುರ, ಬಿಲಾಸ್ಪುರ

ಬ್ಲ್ಯಾಕ್‌ಔಟ್‌ ಜನಪ್ರಿಯ ನಗರಗಳನ್ನು ಶತ್ರುಗಳ ದಾಳಿಯಿಂದ ರಕ್ಷಿಸುವ ಗುರಿಯನ್ನು ಹೊಂದಿದೆ. ಈ ವೇಳೆ ಸ್ಥಳೀಯ ನಿವಾಸಿಗಳಲ್ಲಿ ಮನೆಯೊಳಗೇ ಇರುವಂತೆ ಸೂಚಿಸಲಾಗುತ್ತದೆ. ಜತೆಗೆ ಎಲ್ಲ ಬೆಳಕನ್ನು ಆರಿಸುವಂತೆ ಮನವಿ ಮಾಡಲಾಗುತ್ತದೆ. ಈ ಮಧ್ಯೆ ಭಾರತೀಯ ಸೇನೆ ಮಾಹಿತಿ ನೀಡಿ ಮೇ 8-9ರಂದು ಭಾರತದ ನಾಗರಿಕ ಹಾಗೂ ಸೇನಾ ನೆಲೆಗಳ ಮೇಲೆ ದಾಳಿಗೆ ಯತ್ನಿಸಿದ್ದತ್ತು. ಅದಕ್ಕೆ ಭಾರತ ಪ್ರತ್ಯುತ್ತರ ನೀಡಿದೆ. ರಕ್ಷಣೆಗಾಗಿ ಪಾಕಿಸ್ತಾನದ 36 ಕಡೆ ದಾಳಿ ನಡೆಸಿದ್ದೇವೆ. ಎಲ್‌ಒಸಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ ಅಪ್ರಚೋದಿತ ಗುಂಡಿನ ದಾಳಿ ನಡಸಿದ್ದು, ಭಾರತೀಯ ಸೇನೆಯ ಯೋಧ ಹುತಾತ್ಮರಾಗಿದ್ದಾರೆ ಹಾಗೂ ಹಲವು ಸೈನಿಕರಿಗೆ ಗಾಯಗಳಾಗಿವೆ ಎಂದು ತಿಳಿಸಿದೆ.