ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ʻಕ್ಯಾಚ್‌ಗಳನ್ನು ಕೈ ಚೆಲ್ಲಿದ್ದೇವೆʼ-ಲಖನೌ ಸೋಲಿಗೆ ಕಾರಣ ತಿಳಿಸಿದ ರಿಷಭ್‌ ಪಂತ್‌!

Rishabh Pant on LSG's loss against PBKS: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಖನೌ ಸೂಪರ್ ಜಯಂಟ್ಸ್‌ 37 ರನ್‌ಗಳ ಸೋಲು ಅನುಭವಿಸಿತು. ಈ ಪಂದ್ಯದಲ್ಲಿನ ಹೀನಾಯ ಸೋಲಿನ ನಂತರ, ಲಖನೌ ನಾಯಕ ರಿಷಭ್ ಪಂತ್ ದೊಡ್ಡ ಹೇಳಿಕೆ ನೀಡಿದ್ದಾರೆ.

LSG vs PBKS: ಲಖನೌ ಸೋಲಿಗೆ ಕಾರಣ ತಿಳಿಸಿದ ರಿಷಭ್‌ ಪಂತ್‌!

ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋಲಿನ ಬಳಿಕ ರಿಷಭ್‌ ಪಂತ್‌ ಹೇಳಿಕೆ.

Profile Ramesh Kote May 5, 2025 7:26 AM

ಧರ್ಮಶಾಲಾ: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಮತ್ತೊಂದು ಹೈ-ವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings), ಎದುರಾಳಿ ಲಖನೌ ಸೂಪರ್ ಜಯಂಟ್ಸ್‌ (Lucknow Super Giants) ತಂಡವನ್ನು 37 ರನ್‌ಗಳಿಂದ ಮಣಿಸಿತು. ರಿಷಭ್‌ ಪಂತ್‌ ನಾಯಕತ್ವದ ಲಖನೌ ಸೂಪರ್ ಜಯಂಟ್ಸ್ ತಂಡ ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಸೋಲು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ನಾಯಕ ರಿಷಭ್ ಪಂತ್ (Rishabh Pant) ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಋತುವಿನಲ್ಲಿ ಪಂತ್ ಅವರ ಬ್ಯಾಟಿಂಗ್ ಅಥವಾ ನಾಯಕತ್ವ ಎರಡೂ ಉತ್ತಮವಾಗಿಲ್ಲ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಮೊತ್ತ ಆಟಗಾರ ಎನಿಸಿಕೊಂಡಿರುವ ರಿಷಭ್‌ ಪಂತ್‌ (27 ಕೋಟಿ ರು), ತಮ್ಮ ಬೆಲೆಗೆ ತಕ್ಕಂತೆ ಆಡುತ್ತಿಲ್ಲ. ಅವರು ಪಂಜಾಬ್‌ ಕಿಂಗ್ಸ್‌ ವಿರುದ್ದದ ಸೋಲಿನ ನಂತರ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.

"ಖಂಡಿತವಾಗಿಯೂ ತುಂಬಾ ರನ್‌ಗಳನ್ನು ಬೋರ್ಡ್‌ನಲ್ಲಿ ಕಲೆ ಹಾಕಲಾಗಿತ್ತು. ನೀವು ತಪ್ಪು ಸಮಯದಲ್ಲಿ ನಿರ್ಣಾಯಕ ಕ್ಯಾಚ್‌ಗಳನ್ನು ಬಿಟ್ಟಾಗ, ಅದು ನಿಮಗೆ ತುಂಬಾ ನೋವುಂಟು ಮಾಡುತ್ತದೆ. ಇದು ಇನ್ನೂ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ ಎಂದು ನಾವು ಭಾವಿಸಿದ್ದೇವೆ. ನಾವು ಆರಂಭದಲ್ಲಿ ಸರಿಯಾದ ಲೆನ್ತ್‌ಗಳನ್ನು ಹಾಕಲಿಲ್ಲ. ಅದು ಆಟದ ಒಂದು ಭಾಗ. ಪ್ಲೇಆಫ್ಸ್‌ ಕನಸು ಇನ್ನೂ ಜೀವಂತವಾಗಿದೆ. ಮುಂದಿನ ಮೂರು ಪಂದ್ಯಗಳನ್ನು ನಾವು ಗೆದ್ದರೆ, ನಾವು ಖಂಡಿತವಾಗಿಯೂ ತಲುಪಬಹುದು. ನಿಮ್ಮ ಅಗ್ರ ಕ್ರಮಾಂಕ ನಿಜವಾಗಿಯೂ ಉತ್ತಮವಾಗಿ ಬ್ಯಾಟ್ ಮಾಡುತ್ತಿರುವಾಗ, ಇದರ ಬಗ್ಗೆ ನಿಮಗೆ ಅರಿವಾಗುತ್ತದೆ," ಎಂದು ರಿಷಭ್‌ ಪಂತ್‌ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ತಿಳಿಸಿದ್ದಾರೆ.

PBKS vs LSG: ಲಕ್ನೋ ವಿರುದ್ಧ ಪಂಜಾಬ್‌ಗೆ 37 ರನ್‌ ಜಯಭೇರಿ

"ಪ್ರತಿಯೊಂದು ಪಂದ್ಯದಲ್ಲೂ ನಿಮ್ಮ ಅಗ್ರ ಕ್ರಮಾಂಕದಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲು ಸಾಧ್ಯವಿಲ್ಲ. ಅದು ಆಟದ ಒಂದು ಭಾಗ. ನಾವು ಆಟವನ್ನು ಇನ್ನಷ್ಟು ಡೆಪ್ತ್‌ ಆಗಿ ತೆಗೆದುಕೊಳ್ಳಬೇಕಾಗಿದೆ. ಅವರು ನಮಗೆ ಎಲ್ಲಾ ಕೆಲಸಗಳನ್ನು ಎಲ್ಲಾ ಬಾರಿ ಮಾಡಲು ಸಾಧ್ಯವಿಲ್ಲ. ನೀವು ಮೊದಲೇ ಹೇಳಿದಂತೆ, ಅವರು ನಮಗೆ ದೊಡ್ಡ ಮೊತ್ತದ ಗುರಿಯನ್ನು ನೀಡಿದ್ದರು. ಇದರಿಂದ ನಮಗೆ ತುಂಬಾ ನಷ್ಟವಾಯಿತು," ಎಂದು ಎಲ್‌ಎಸ್‌ಜಿ ನಾಯಕ ಬೇಸರ ವ್ಯಕ್ತಪಡಿಸಿದ್ದಾರೆ.

ಪಂಜಾಬ್‌ ತಂಡವನ್ನು ಶ್ಲಾಘಿಸಿದ ಶ್ರೇಯಸ್ ಅಯ್ಯರ್

ಪಂದ್ಯದ ಗೆಲುವಿನ ನಂತರ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ, ಪ್ರತಿಯೊಬ್ಬ ಆಟಗಾರನೂ ಗೆಲುವಿಗೆ ಕೊಡುಗೆ ನೀಡಿದ್ದಾರೆ ಮತ್ತು ಪ್ರಭ್‌ಸಿಮ್ರನ್ ಸಿಂಗ್ (91 ರನ್) ಇನಿಂಗ್ಸ್ ಅಸಾಧಾರಣವಾಗಿದೆ ಎಂದು ಶ್ಲಾಘಿಸಿದ್ದಾರೆ.

IPL 2025: ಮ್ಯಾಕ್ಸ್‌ವೆಲ್ ಬದಲಿಗೆ ಪಂಜಾಬ್‌ ಕಿಂಗ್ಸ್‌ ಸೇರಿದ ಮಿಚೆಲ್ ಓವನ್

"ಪ್ರತಿಯೊಬ್ಬ ಆಟಗಾರನೂ ಕೊಡುಗೆ ನೀಡಿದ್ದಾರೆ. ಇಂದು ಪ್ರಭ್‌ಸಿಮ್ರನ್‌ ಸಿಂಗ್‌ ಅಸಾಧಾರಣ ಇನಿಂಗ್ಸ್ ಆಡಿದ್ದಾರೆ. ನಾನು ಒಂದೇ ಒಂದು ಯೋಜನೆಯೊಂದಿಗೆ ಆಟಕ್ಕೆ ಇಳಿದಿದ್ದೆ- ಈ ಪಂದ್ಯವನ್ನು ಗೆಲ್ಲುವುದು, ಈ ಮೈದಾನದಲ್ಲಿ ನಮ್ಮ ತಂಡದ ಅಂಕಿಅಂಶಗಳ ಬಗ್ಗೆ ಯೋಚಿಸುತ್ತಿರಲಿಲ್ಲ," ಎಂದು ಪಂಜಾಬ್‌ ಕಿಂಗ್ಸ್‌ ನಾಯಕ ತಿಳಿಸಿದ್ದಾರೆ.

"ಪ್ರತಿಯೊಬ್ಬ ಆಟಗಾರನು ಸರಿಯಾದ ಸಮಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಆದಾಗ್ಯೂ, ನಾವು ಫೀಲ್ಡಿಂಗ್‌ನಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಅಂಕಿಅಂಶಗಳ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ, ಈ ಪಂದ್ಯವನ್ನು ಗೆಲ್ಲಲೇಬೇಕು ಎಂಬ ಆಲೋಚನೆಯೊಂದಿಗೆ ಮೈದಾನಕ್ಕೆ ಹೋಗಿದ್ದೆವು," ಎಂದು ಪಿಬಿಕೆಎಸ್‌ ನಾಯಕ ಹೇಳಿದ್ದಾರೆ.

ಪ್ಲೇಆಫ್ಸ್‌ಗೆ ಸನಿಹವಾದ ಪಂಜಾಬ್‌ ಕಿಂಗ್ಸ್‌

ಈ ಪಂದ್ಯದ ಗೆಲುವಿನ ಮೂಲಕ ಪಂಜಾಬ್‌ ಕಿಂಗ್ಸ್‌ ತಂಡ 15 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಆ ಮೂಲಕ ಟೂರ್ನಿಯ ಪ್ಲೇಆಫ್ಸ್‌ಗೆ ಇನ್ನಷ್ಟು ಸನಿಹವಾಗಿದೆ. ಇನ್ನು ಸೋತ ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಕ್‌ಔಟ್‌ ಹಾದಿ ಇನ್ನಷ್ಟು ಕಠಿಣವಾಗಿದೆ.