Javed Akhtar: ನೀನು ಸಾಯುವ ಹಂತಕ್ಕೆ ಬಂದಿದ್ದೀಯ: ಜಾವೇದ್ ಅಖ್ತರ್ ವಿರುದ್ಧ ನಾಲಿಗೆ ಹರಿಬಿಟ್ಟ ಪಾಕ್ ನಟಿ ಬುಷ್ರಾ ಅನ್ಸಾರಿ
ಪಾಕಿಸ್ತಾನಿ ನಟಿ ಬುಷ್ರಾ ಅನ್ಸಾರಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನವನ್ನು ಟೀಕಿಸಿದ ಭಾರತೀಯ ಗೀತರಚನೆಕಾರ ಜಾವೇದ್ ಅಖ್ತರ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾಳೆ. ವಿದೇಶ ಪ್ರವಾಸದಲ್ಲಿರುವ ಬುಷ್ರಾ, ಜಾವೇದ್ ಈ ವಿಷಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾಳೆ.

ಪಾಕಿಸ್ತಾನಿ ನಟಿ ಬುಷ್ರಾ ಅನ್ಸಾರಿ - ಭಾರತೀಯ ಗೀತರಚನೆಕಾರ ಜಾವೇದ್ ಅಖ್ತರ್

ಇಸ್ಲಾಮಾಬಾದ್: ಪಾಕಿಸ್ತಾನಿ ನಟಿ ಬುಷ್ರಾ ಅನ್ಸಾರಿ (Bushra Ansari) ಪಹಲ್ಗಾಮ್ (Pahalgam Terror Attack) ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನವನ್ನು ಟೀಕಿಸಿದ ಭಾರತೀಯ ಗೀತ ರಚನೆಕಾರ ಜಾವೇದ್ ಅಖ್ತರ್ (Javed Akhtar) ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾಳೆ. ವಿದೇಶ ಪ್ರವಾಸದಲ್ಲಿರುವ ಬುಷ್ರಾ, ಜಾವೇದ್ ಈ ವಿಷಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾಳೆ. ಜಾವೇದ್ ಬಗ್ಗೆ ಮಾತನಾಡುತ್ತಾ, "ನಿಮ್ಮ ಜೀವನದಲ್ಲಿ ಕಡಿಮೆ ಸಮಯ ಉಳಿದಿದೆ" ಎಂದು ಟೀಕಿಸಿದ್ದಾಳೆ.
ಜಾವೇದ್ ಅವರನ್ನು ಟೀಕಿಸುವಾಗ ಬುಷ್ರಾ ಅವರ ಹೆಸರನ್ನು ಉಲ್ಲೇಖಿಸದೆ, "ನಮ್ಮ ಬರಹಗಾರನಿಗೆ ಒಂದು ನೆವ ಬೇಕು. ವಾಸ್ತವವಾಗಿ, ಅವರಿಗೆ ಬಾಂಬೆಯಲ್ಲಿ ಮನೆ ಬಾಡಿಗೆಗೆ ಸಿಗಲಿಲ್ಲ. ತಮ್ಮ ಅಸ್ತಿತ್ವಕ್ಕಾಗಿ ಅವರು ಏನು ಬೇಕಾದರೂ ಮಾತನಾಡಬಹುದು. ನೀವೇನು ಹೇಳುತ್ತಿದ್ದೀರಿ? ನಿಮಗೆ ಜೀವಿಸಲು ಕೆಲ ವರ್ಷಗಳಷ್ಟೇ ಇವೆ, ಅದರ ಮೇಲೆ ಇಂತಹ ಅಸಂಬದ್ಧ ಮಾತುಗಳನ್ನು ಹೇಳುತ್ತಿದ್ದೀರಿ" ಎಂದು ವಾಗ್ದಾಳಿ ನಡೆಸಿದ್ದಾಳೆ.
ಜಾವೇದ್ ಅವರು ಹಿರಿಯ ನಟ ನಸೀರುದ್ದೀನ್ ಶಾ ಅವರಂತೆ ಮೌನವಾಗಿರಬೇಕು ಎಂದು ಬುಷ್ರಾ ಸಲಹೆ ನೀಡಿದ್ದಾಳೆ. "ಈ ಭಯ, ದುರಾಸೆ ಏನು? ಈಗ ಮೌನವಾಗಿರಿ. ನಸೀರುದ್ದೀನ್ ಶಾ ಅವರು ಮೌನವಾಗಿದ್ದಾರೆ, ಇತರರೂ ಮೌನವಾಗಿದ್ದಾರೆ, ನಿಮ್ಮ ಮನಸ್ಸಿನಲ್ಲಿ ಏನಿದೆಯೋ ಅದನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ" ಎಂದು ಹೇಳಿದ್ದಾಳೆ. ಭಾರತದಲ್ಲಿ ಕೆಲವು ಯುವತಿಯರು ನನ್ನೊಂದಿಗೆ ಪ್ರೀತಿಯಿಂದ ಮಾತನಾಡಿದ್ದಾರೆ ಎಂದು ಬುಷ್ರಾ ಉಲ್ಲೇಖಿಸಿದ್ದಾಳೆ. ಭಾರತದ ಜನರು ಕೆಟ್ಟವರಲ್ಲ, ಆದರೆ ಅವರನ್ನು ಪ್ರಚೋದಿಸಲಾಗುತ್ತಿದೆ ಎಂದು ಅವರು ಹೇಳಿದ್ದಾಳೆ.
ಈ ಸುದ್ದಿಯನ್ನು ಓದಿ: Pahalgam Terror Attack: ಉಗ್ರರ ದಾಳಿ ಕೇಸ್; ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಓಡಾಡುತ್ತಿದ್ದ ಶಂಕಿತ ಅರೆಸ್ಟ್
ಇತ್ತೀಚೆಗೆ ಪಹಲ್ಗಾಮ್ ದಾಳಿಗೆ ಪಾಕಿಸ್ತಾನದ ಸಂಪರ್ಕ ಹೊಂದಿದ್ದು ಕೇಂದ್ರ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಾವೇದ್ ಒತ್ತಾಯಿಸಿದ್ದರು. ಗ್ಲೋರಿಯಸ್ ಮಹಾರಾಷ್ಟ್ರ ಫೆಸ್ಟಿವಲ್ ಉದ್ಘಾಟನೆಗೆ ಆಹ್ವಾನಿತರಾಗಿದ್ದ ಜಾವೇದ್, "ಇದು ಒಮ್ಮೆಯಷ್ಟೇ ಆಗಿಲ್ಲ, ಹಲವಾರು ಬಾರಿ ಆಗಿದೆ. ಕೇಂದ್ರ ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ಗಡಿಯಲ್ಲಿ ಕೆಲವು ಪಟಾಕಿಗಳಿಂದ ಕೆಲಸವಾಗುವುದಿಲ್ಲ. ಈಗ ದೃಢವಾದ ಕ್ರಮ ಕೈಗೊಳ್ಳಿ. ಅಲ್ಲಿನ (ಪಾಕಿಸ್ತಾನ) ಹುಚ್ಚ ಸೇನಾ ಮುಖ್ಯಸ್ಥನಂತೆ ಯಾರೂ ಭಾಷಣ ಮಾಡಲಾರರು. ಅವನು ಹಿಂದೂಗಳು ಮತ್ತು ಮುಸ್ಲಿಮರು ವಿಭಿನ್ನ ಸಮುದಾಯಗಳು ಎಂದು ಹೇಳುತ್ತಾನೆ. ತನ್ನ ದೇಶದಲ್ಲಿಯೂ ಹಿಂದೂಗಳಿದ್ದಾರೆ ಎಂಬುದನ್ನು ಅವನು ಪರಿಗಣಿಸುವುದಿಲ್ಲ. ಇಂತಹ ವ್ಯಕ್ತಿ ಯಾವ ರೀತಿಯ ಮನುಷ್ಯ? ಅವರಿಗೆ ಯೋಗ್ಯವಾದ ಉತ್ತರ ನೀಡಬೇಕು. ಆಗ ಇಂತಹವರು ನೆನಪಿಟ್ಟುಕೊಳ್ಳುತ್ತಾರೆ. ಇದಕ್ಕಿಂತ ಕಡಿಮೆ ಏನೂ ಅವರ ಗಮನಕ್ಕೆ ಬರುವುದಿಲ್ಲ. ನನಗೆ ರಾಜಕೀಯದ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ಈಗ ‘ಆರ್ ಯಾ ಪಾರ್’ ಸಮಯ ಎಂದು ನನಗೆ ಗೊತ್ತಿದೆ" ಎಂದು ಹೇಳಿದ್ದರು.