ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʼವಾರ್ 2ʼ ಟೀಸರ್‌ ರಿಲೀಸ್‌; ಮತ್ತೊಮ್ಮೆ ಆ್ಯಕ್ಷನ್ ಅವತಾರದಲ್ಲಿ ಹೃತಿಕ್‌ ರೋಷನ್‌: ವಿಲನ್ ಪಾತ್ರದ ಮೂಲಕ ಬಾಲಿವುಡ್‌ಗೆ ಜೂ.ಎನ್​ಟಿಆರ್ ಎಂಟ್ರಿ

War 2 Teaser: ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದ ಪ್ರಯುಕ್ತ ʼವಾರ್‌ 2ʼ ಬಾಲಿವುಡ್‌ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜೂನಿಯರ್ ಎನ್‌ಟಿಆರ್ ನೆಗೆಟಿವ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆ ಆಗಿರುವ ಟೀಸರ್‌ನ ಸಣ್ಣ ಝಲಕ್ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಅಯಾನ್ ಮುಖರ್ಜಿ ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಹೃತಿಕ್ ಎದುರು ಎನ್‌ಟಿಅರ್ ಅಬ್ಬರಿಸಿದ್ದಾರೆ.

ಭರ್ಜರಿ ಆ್ಯಕ್ಷನ್​ ದೃಶ್ಯವಿರುವ ʼವಾರ್​ 2ʼ ಟೀಸರ್​ ಔಟ್

War 2 teaser out

Profile Pushpa Kumari May 20, 2025 5:27 PM

ಮುಂಬೈ: ಬಹುನಿರೀಕ್ಷಿತ 'ವಾರ್ 2' ಬಾಲಿವುಡ್‌ ಚಿತ್ರದ ಟೀಸರ್ (War 2 Teaser) ರಿಲೀಸ್ ಆಗಿದೆ. ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದ ಪ್ರಯುಕ್ತ ʼವಾರ್‌ 2ʼ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಜೂನಿಯರ್ ಎನ್‌ಟಿಆರ್ ನೆಗೆಟಿವ್ ಲುಕ್‌ನಲ್ಲಿ ವಿಲನ್‌ ಆಗಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆ ಆಗಿರುವ ಟೀಸರ್‌ನ ಸಣ್ಣ ಝಲಕ್ ಸೋಶಿಯಲ್ ಮೀಡಿ ಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಯಾನ್ ಮುಖರ್ಜಿ ನಿರ್ದೇಶನದ ಆ್ಯಕ್ಷನ್​ ಥ್ರಿಲ್ಲರ್ ಚಿತ್ರದಲ್ಲಿ ಹೃತಿಕ್ ಎದುರು ಎನ್‌ಟಿಅರ್ ಅಬ್ಬರಿಸಿದ್ದಾರೆ.

2019ರಲ್ಲಿ ತೆರೆಗೆ ಬಂದಿದ್ದ ʻವಾರ್ʼ ಸಿನಿಮಾದಲ್ಲಿ ಹೃತಿಕ್‌ ರೋಷನ್‌ ಜತೆಗೆ ಟೈಗರ್‌ ಶ್ರಾಫ್‌ ಮಿಂಚಿದ್ದರು. ಆ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿತ್ತು. ಇದೀಗ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ 'ವಾರ್ 2' ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ಹೃತಿಕ್‌ ರೋಷನ್‌ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.



ʼವಾರ್‌ 2ʼ ಚಿತ್ರದಲ್ಲಿ ರಾ ಏಜೆಂಟ್‌ ಕಬೀರ್‌ ಪಾತ್ರದಲ್ಲಿ ಹೃತಿಕ್‌ ಕಾಣಿಸಿಕೊಂಡರೆ, ಅವರ ಎದುರು ಖಡಕ್‌ ಖಳನಾಗಿ ಜೂನಿಯರ್‌ ಎನ್‌ಟಿಆರ್‌ ನಟಿಸಿದ್ದಾರೆ. ʼʼನನ್ನ ಕಣ್ಣುಗಳು ಯಾವತ್ತಿನಿಂದಲೋ ನಿನ್ನನ್ನು ಹುಡುಕಾಡುತ್ತಿದೆ ಕಬೀರ್" ಎನ್ನುವ ಖಡಕ್ ಡೈಲಾಗ್ ಹಿನ್ನೆಲೆಯಲ್ಲಿ ಟೀಸರ್ ಆರಂಭ ವಾಗುತ್ತದೆ. "ನಿನಗೆ ನನ್ನ ಬಗ್ಗೆ ಗೊತ್ತಿಲ್ಲ. ಈಗ ಗೊತ್ತಾಗುತ್ತೆ, ಗೆಟ್ ರೆಡಿ ಫಾರ್ ವಾರ್" ಎಂಬ ಮತ್ತೊಂದು ಡೈಲಾಗ್ ಕೂಡ ಟೀಸರ್‌ನಲ್ಲಿದೆ. ಟೀಸರ್ ನಲ್ಲಿ ಆ್ಯಕ್ಷನ್‌ ಸೀಕ್ವೆನ್ಸ್‌ಗಳು ಸಿನಿಪ್ರಿಯರ ಮನ ಗೆದ್ದಿದೆ.

ಇದನ್ನು ಓದಿ: Maayavi Movie: ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವುಳ್ಳ ʼಮಾಯಾವಿʼ ಚಿತ್ರದ ಟೀಸರ್, ಹಾಡು ಬಿಡುಗಡೆ

ಚಿತ್ರದ ಶೂಟಿಂಗ್‌ ಸ್ಪೇನ್, ಇಟಲಿ, ಅಬುಧಾಬಿ, ಜಪಾನ್, ರಷ್ಯಾ ಹಾಗೂ ಭಾರತ ಸೇರಿದಂತೆ ಆರು ದೇಶಗಳಲ್ಲಿ 150 ದಿನಗಳ ಕಾಲ ನಡೆದಿದ್ದು, ಬಹುತೇಕ ದೃಶ್ಯಗಳನ್ನು ನೈಜ ಸ್ಥಳಗಳಲ್ಲಿ ಶೂಟ್ ಮಾಡಲಾಗಿದೆ. ಕೆಲವು ದೃಶ್ಯಗಳನ್ನು ಮುಂಬೈಯ ಸೆಟ್‌ಗಳಲ್ಲಿ ಚಿತ್ರೀಕರಿಸಲಾಗಿದೆ. ಆದಿತ್ಯ ಚೋಪ್ರಾ ನಿರ್ಮಾಣದ ಈ ಆ್ಯಕ್ಷನ್‌ ಥ್ರಿಲ್ಲರ್ ಚಿತ್ರಕ್ಕೆ ಪ್ರೀತಂ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅಮಿತಾಬ್ ಬಟ್ಟಾಚಾರ್ಯ ಸಾಹಿತ್ಯ, ಅಬ್ಬಾಸ್ ತೈರೆವಾಲಾ ಸಂಭಾಷಣೆ ಚಿತ್ರಕ್ಕಿದೆ. ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ʼವಾರ್ 2ʼ ಆಗಸ್ಟ್ 14ರಂದು ತೆರೆಗೆ ಬರಲಿದೆ.