Vishweshwar Bhat Column: ಅಮೆರಿಕ ಅಧ್ಯಕ್ಷರ ಪೆನ್
ಒಂದು ಕಾಲಕ್ಕೆ ಪಾರ್ಕರ್ ಪೆನ್ನು ಜಗತ್ತಿನ ಗಣ್ಯವ್ಯಕ್ತಿಗಳ ಅಂಗಿಯ ಜೇಬನ್ನು ಅಲಂಕರಿಸಿ, ಅವರ ಹೃದಯಕ್ಕೆ ಹತ್ತಿರವಾಗಿತ್ತು. ಆ ಪೆನ್ನಿನ ಮೋಹಕ್ಕೆ ಒಳಗಾದವರಲ್ಲಿ ಅಮೆರಿಕದ ಅಧ್ಯಕ್ಷರೂ ಇದ್ದರು. ಅವರು ಬಳಸುವ ಪೆನ್ನಿಗೆ Presidential Pen ಎಂದು ಕರೆಯುವುದುಂಟು. ಇಂಥದೇ ಪೆನ್ನನ್ನು ಅವರು ಬಳಸಬೇಕು ಎಂದೇನೂ ಅಲ್ಲ. ಆದರೆ ಅವರು ಯಾವುದೇ ಪೆನ್ನನ್ನು ಬಳಸಲಿ, ಅದು ಲೋಕವಿಖ್ಯಾತ ವಾಗುವುದು ಸಹಜ


ಸಂಪಾದಕರ ಸದ್ಯಶೋಧನೆ
ಒಂದು ಕಾಲಕ್ಕೆ ಪಾರ್ಕರ್ ಪೆನ್ನು ಜಗತ್ತಿನ ಗಣ್ಯವ್ಯಕ್ತಿಗಳ ಅಂಗಿಯ ಜೇಬನ್ನು ಅಲಂಕರಿಸಿ, ಅವರ ಹೃದಯಕ್ಕೆ ಹತ್ತಿರವಾಗಿತ್ತು. ಆ ಪೆನ್ನಿನ ಮೋಹಕ್ಕೆ ಒಳಗಾದವರಲ್ಲಿ ಅಮೆರಿಕದ ಅಧ್ಯಕ್ಷರೂ ಇದ್ದರು. ಅವರು ಬಳಸುವ ಪೆನ್ನಿಗೆ Presidential Pen ಎಂದು ಕರೆಯುವುದುಂಟು. ಇಂಥದೇ ಪೆನ್ನನ್ನು ಅವರು ಬಳಸಬೇಕು ಎಂದೇನೂ ಅಲ್ಲ. ಆದರೆ ಅವರು ಯಾವುದೇ ಪೆನ್ನನ್ನು ಬಳಸಲಿ, ಅದು ಲೋಕವಿಖ್ಯಾತವಾಗುವುದು ಸಹಜ. ಫ್ರಾಂಕ್ಲಿನ್ ರೂಸ್‌ವೆಲ್ಟ್ ರಿಂದ ಬಿಲ್ ಕ್ಲಿಂಟನ್ ತನಕ ಅಧ್ಯಕ್ಷರಾದವರೆಲ್ಲ ಪಾರ್ಕರ್ ಪೆನ್ನುಗಳನ್ನು (ಬೇರೆ ಬೇರೆ ಮಾದರಿಯವು) ಬಳಸುತ್ತಿದ್ದುದು ವಿಶೇಷವೇ ಸರಿ.
‘ಅಮೆರಿಕ ಅಧ್ಯಕ್ಷರ ಅಚ್ಚುಮೆಚ್ಚಿನ ಪೆನ್’ ಎಂದು ಪಾರ್ಕರ್ ತನ್ನ ಜಾಹೀರಾತಿನಲ್ಲಿ ಗರ್ವದಿಂದ ಹೇಳಿಕೊಂಡಿತ್ತು. ಅಧ್ಯಕ್ಷರು ಪಾರ್ಕರ್ ಪೆನನ್ನು ಬಳಸಲು 2 ಕಾರಣಗಳಿದ್ದವು.
ಇದನ್ನೂ ಓದಿ: Vishweshwar Bhat Column: ಇದು ಭಾಗ್ಯ..ಇದು ಭಾಗ್ಯ !
ಮೊದಲನೆಯದಾಗಿ ಅದರ ಉತ್ಕೃಷ್ಟ ಗುಣಮಟ್ಟ, ಎರಡನೆಯದಾಗಿ ಅಪ್ಪಟ ಸ್ವದೇಶಿ (ಅಮೆರಿ ಕನ್) ಎಂಬುದು. ಆರಂಭದಲ್ಲಿ ವಾಟರ್‌ಮನ್ ಪೆನ್ನನ್ನು ಬಳಸುತ್ತಿದ್ದ ರೂಸ್‌ವೆಲ್ಟ್ ಕ್ರಮೇಣ ಪಾರ್ಕರ್ ಪೆನ್ನಿಗೆ ಮೋಹಿತರಾದರು. ಅವರ ಉತ್ತರಾಧಿಕಾರಿಗಳಾದ ಹ್ಯಾರಿ ಟ್ರೂಮನ್ ಮತ್ತು ಐಸೆನ್‌ಹೋವರ್ ಪಾರ್ಕರ್ ಕಂಪನಿಯ ಫೌಂಟನ್ ಪೆನ್ನುಗಳನ್ನು ಬಳಸಲಾರಂಭಿಸಿದರು.
ಎಡಗೈಯಲ್ಲಿ ಬರೆಯುತ್ತಿದ್ದ ಟ್ರೂಮನ್, ತಮಗೆ ಅನುಕೂಲವಾಗಲು ಪೆನ್ನನ್ನು ವಿಶೇಷವಾಗಿ ವಿನ್ಯಾಸ ಮಾಡಿಕೊಡುವಂತೆ, ಪಾರ್ಕರ್ ಕಂಪನಿಗೆ ಮನವಿ ಮಾಡಿಕೊಂಡಿದ್ದರು. ಕಂಪನಿಯು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಜಾನ್ ಎಫ್.ಕೆನಡಿಗೂ ಪಾರ್ಕರ್ ಪೆನ್ ಇಷ್ಟವಾಗಿತ್ತು.
ಅವರು ‘ಪಾರ್ಕರ್-45’ ಪೆನ್ನನ್ನು ಬಳಸುತ್ತಿದ್ದರು. ಪಾರ್ಕರ್ ಸಂಸ್ಥೆ ಅವರ ಹೆಸರಿನ ಸಂಕ್ಷಿಪ್ತ ರೂಪ JFK ಎಂದು ಕೆತ್ತಿ ಅವರಿಗೆ ನೂರು ಪೆನ್ನುಗಳನ್ನು ಉಡುಗೊರೆಯಾಗಿ ನೀಡಿತ್ತು. ಕೆನಡಿ ತಮ್ಮ ಹೆಸರು ಬರೆದ ಆ ಪೆನ್ನನ್ನು ಗಣ್ಯವ್ಯಕ್ತಿಗಳಿಗೆ ನೆನಪಿನ ಉಡುಗೊರೆಯಾಗಿ ನೀಡುತ್ತಿದ್ದರು. ಕೆಲವು ಸಲ ಸಾಮಾನ್ಯರಿಗೂ ನೀಡಿ ಅಚ್ಚರಿಯುಂಟುಮಾಡುತ್ತಿದ್ದರು. ಅವರ ಜೇಬಿನಲ್ಲಿ ಆ ಸಂಸ್ಥೆಯ ಒಂದಕ್ಕಿಂತ ಹೆಚ್ಚು ಪೆನ್ನುಗಳು ಇರುತ್ತಿದ್ದವು. ಅವರ ನಂತರ ಅಧ್ಯಕ್ಷರಾದ ಲಿಂಡನ್ ಜಾನ್ಸನ್‌ಗೂ ಪಾರ್ಕರ್ ಪೆನ್ ಅಂದ್ರೆ ಪಂಚಪ್ರಾಣ.
ಅವರು ಅಧ್ಯಕ್ಷರಾದ ಆರಂಭದಲ್ಲಿ ವೈಟ್ ಹೌಸಿಗೆ 60 ಸಾವಿರ ಪಾರ್ಕರ್ (ಈಸ್ಟರ್ ಬ್ರೂಕ್ ಫೌಂಟನ್ ಪೆನ್) ಪೆನ್ ಪೂರೈಸುವಂತೆ ಆದೇಶಿಸಿದ್ದರು. ಜಾನ್ಸನ್ ಅವರು ಮಹತ್ವದ ಕಡತ ಅಥವಾ ಆದೇಶಗಳಿಗೆ ಸಹಿ ಹಾಕಿದ ನಂತರ ಅದನ್ನು ತಮ್ಮ ಆಪ್ತರಿಗೆ, ಗಣ್ಯರಿಗೆ ಉಡುಗೊರೆಯಾಗಿ ನೀಡುತ್ತಿದ್ದರು. ಅವರು ಸದಾ 5 ಪಾರ್ಕರ್ ಪೆನ್ನುಗಳನ್ನು ಇಟ್ಟುಕೊಳ್ಳುತ್ತಿದ್ದರು. ಪ್ರತಿ ಸಲ ಹೊಸ ಕಡತ ಸಹಿ ಮಾಡಲು ಅವರು ಹೊಸ ಪೆನ್ನನ್ನೇ ಉಪಯೋಗಿಸುತ್ತಿದ್ದರು. ಜಾನ್ಸನ್ ಅಧಿಕಾರ ಅವಧಿಯಲ್ಲಿ ಪಾರ್ಕರ್ ಕಂಪನಿ, ಜಾನ್ ಗಿಬ್ಸ್ ಎಂಬ ವಿಶೇಷ ಪ್ರತಿನಿಧಿಯನ್ನು ವೈಟ್ ಹೌಸ್ ಬೇಡಿಕೆಗಳನ್ನು ಪೂರೈಸಲೆಂದೇ ನೇಮಿಸಿತ್ತು!
ಗಿಬ್ಸ್‌ರನ್ನು ಜಾನ್ಸನ್ ಆಗಾಗ ಭೇಟಿ ಮಾಡಿ, ಪಾರ್ಕರ್ ಬಿಡುಗಡೆ ಮಾಡಿದ ಹೊಸ ಪೆನ್ನುಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಅದಾದ ಬಳಿಕ ರಿಚರ್ಡ್ ನಿಕ್ಸನ್, ಗೆರಾಲ್ಡ್ ಫೋರ್ಡ್ ಮತ್ತು ಜಿಮ್ಮಿ ಕಾರ್ಟರ್, ಪಾರ್ಕರ್ ಎವರ್ ಶಾರ್ಪ್ ಪೆನ್ನನ್ನು ಬಳಸುತ್ತಿದ್ದರು. ರೊನಾಲ್ಡ್ ರೇಗನ್ ಮತ್ತು ಜಾರ್ಜ್ ಬುಷ್ ‘ಕ್ರಾಸ್ ಕಂಪನಿ’ಯ ಪೆನ್ನುಗಳನ್ನು ಇಷ್ಟಪಡುತ್ತಿದ್ದರು. 2007ರಿಂದ ಪಾರ್ಕರ್ ಕಂಪನಿಯ ಪೆನ್ನುಗಳಿಗೆ ಬೇರೆ ಕಂಪನಿಗಳ ಪೆನ್ನುಗಳು ಪ್ರಬಲ ಪ್ರತಿಸ್ಪರ್ಧೆಯೊಡ್ಡಲಾರಂಭಿಸಿದವು.
ಅದಾಗಿ 4 ವರ್ಷಗಳ ಬಳಿಕ 2011ರಲ್ಲಿ ಪಾರ್ಕರ್ ಸಂಸ್ಥೆ ತನ್ನ ಪ್ರಧಾನ ಕಚೇರಿಯನ್ನು ಅಮೆರಿಕ ದಿಂದ ಫ್ರಾನ್ಸ್‌ಗೆ ವರ್ಗಾಯಿಸಿತು. ಒಂದು ಕಾಲಕ್ಕೆ ಅಮೆರಿಕ ಅಧ್ಯಕ್ಷರ ಪ್ರೀತಿಗೆ ಪಾತ್ರವಾಗಿದ್ದ
ಪಾರ್ಕರ್, ಈಗ ಅಧ್ಯಕ್ಷರ ಪೆನ್ನುಗಳ ವಸ್ತು ಸಂಗ್ರಹಾಲಯವನ್ನು ಸೇರಿದೆ. ಇಂಗ್ಲೆಂಡಿನ ರಾಣಿ ಕೂಡ 30 ವರ್ಷ ಬಳಸಿದ್ದು ಪಾರ್ಕರ್ ಪೆನ್ನುಗಳನ್ನು.