ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿದ ಚಿರತೆ; ಶಾಕಿಂಗ್‌ ವಿಡಿಯೊ ಇಲ್ಲಿದೆ

ತಮಿಳುನಾಡಿನ ನೀಲಗಿರಿಯ ನಡುವಟ್ಟಂ ಪೊಲೀಸ್ ಠಾಣೆಗೆ ಚಿರತೆಯೊಂದು ನುಗ್ಗಿದೆ. ಪೊಲೀಸ್ ಠಾಣೆಯಲ್ಲಿ ಚಿರತೆ ಅಡ್ಡಾಡುವುದನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಚಿರತೆ ನೋಡಿ ಭಯಗೊಂಡ ಪೊಲೀಸರು ಚಿರತೆ ಹೊರಗೆ ಹೋದ ಬಳಿಕ ಬಾಗಿಲು ಮುಚ್ಚಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿದ ಚಿರತೆ; ಶಾಕಿಂಗ್‌ ವಿಡಿಯೊ ಇಲ್ಲಿದೆ

Profile pavithra Apr 30, 2025 3:25 PM

ಚೆನ್ನೈ: ಇತ್ತೀಚಿನ ದಿನಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಆಗಾಗ ಮನೆಗೆ ನುಗ್ಗುವುದು, ಮನುಷ್ಯರ ಮೇಲೆ ದಾಳಿ ಮಾಡುವ ವಿಡಿಯೊಗಳು ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇತ್ತೀಚೆಗೆ ತಮಿಳುನಾಡಿನ ಪೊಲೀಸ್ ಠಾಣೆಯಲ್ಲಿ ಚಿರತೆಯೊಂದು ಅಡ್ಡಾಡುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಕಂಡು ಕರ್ತವ್ಯದಲ್ಲಿದ್ದ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಈ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ನೆಟ್ಟಿಗರು ತಮಾಷೆ ಮಾಡಿದ್ದಾರೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೊದಲ್ಲಿ, ನೀಲಗಿರಿಯ ನಡುವಟ್ಟಂ ಪೊಲೀಸ್ ಠಾಣೆಯೊಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಇರುವುದು ಸೆರೆಯಾಗಿದೆ. ಚಿರತೆ ಕಟ್ಟಡದ ವಿವಿಧ ಕೋಣೆಗಳಲ್ಲಿ ಅಲೆದಾಡಿ ಪ್ರತಿಯೊಬ್ಬರನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಕೊನೆಗೆ ಠಾಣೆಯಿಂದ ಹೊರಬಂದ ಆಘಾತಕಾರಿ ದೃಶ್ಯ ಸೆರೆಯಾಗಿದೆ.

ವಿಡಿಯೊ ಇಲ್ಲಿದೆ ನೋಡಿ...



ವೈರಲ್‌ ಆದ ವಿಡಿಯೊದಲ್ಲಿ, ಚಿರತೆ ಕೋಣೆಯಿಂದ ಹೊರಬಂದ ನಂತರ, ಪೊಲೀಸ್‌ ಅಧಿಕಾರಿಯೊಬ್ಬ ಚಿರತೆ ಇನ್ನೂ ಅಲ್ಲಿ ಇದೆಯೇ ಎಂದು ಇಣುಕಿ ನೋಡಿದ್ದಾನೆ. ಚಿರತೆಯನ್ನು ಕಂಡು ಭಯದಿಂದ ಕೋಣೆಯ ಬಾಗಿಲನ್ನು ಮುಚ್ಚಿದ್ದಾನೆ. ನಂತರ ಚಿರತೆ ಅಲ್ಲಿಂದ ಹೊರಟುಹೋಗಿದೆಯಂತೆ. ಐಎಎಸ್ ಅಧಿಕಾರಿ ಸಾಹು, ಅಧಿಕಾರಿಯ ಪ್ರತಿಕ್ರಿಯೆಯನ್ನು ಹೊಗಳಿದ್ದಾರೆ ಮತ್ತು ಚಿರತೆ ಪೊಲೀಸ್ ಠಾಣೆಗೆ ಭೇಟಿ ಮಾಡಿರುವ ಬಗ್ಗೆ ತಮಾಷೆ ಮಾಡಿದ್ದಾರೆ. ವರದಿ ಪ್ರಕಾರ, ನೀಲಗಿರಿಯ ನಡುವಟ್ಟಂ ಪೊಲೀಸ್ ಠಾಣೆಗೆ ಚಿರತೆ ನುಗ್ಗಿದೆ. ಇದನ್ನು ಕಂಡ ಪೊಲೀಸರು ಬಾಗಿಲು ಮುಚ್ಚಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಮತ್ತು ಚಿರತೆ ಸುರಕ್ಷಿತವಾಗಿ ಕಾಡಿಗೆ ಮರಳಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಅರಶಿನ ಶಾಸ್ತ್ರಕ್ಕೆ ಬಂದ ಡೈನೋಸಾರ್‌! ವರ ಫುಲ್‌ ಶಾಕ್‌; ಕಾರಣವೇನು?

ಈ ವಿಡಿಯೊ ವೈರಲ್ ಆಗಿ ಸಾವಿರಾರು ವ್ಯೂವ್ಸ್‌ ಗಳಿಸಿದೆ. ನೆಟ್ಟಿಗರು ಪೊಲೀಸರನ್ನು ಹೊಗಳಿದ್ದಾರೆ ಮತ್ತು ಸಾಹು ಅವರಂತೆ ತಮಾಷೆ ಮಾಡಿದ್ದಾರೆ. “ಚಿರತೆ ಅಲೆದಾಡುತ್ತಿರುವುದನ್ನು ನೋಡಿ ಬಾಗಿಲನ್ನು ಲಾಕ್ ಮಾಡಿದ ಕೆಲವು ಪೋಲೀಸರ ಸಂಯಮವನ್ನು ಮೆಚ್ಚಲೇಬೇಕು" ಎಂದು ಅವರಲ್ಲಿ ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, "ಪೊಲೀಸ್ ಸಿಬ್ಬಂದಿ ತುಂಬಾ ಶಾಂತರಾಗಿದ್ದರು . ಅದಕ್ಕಾಗಿಯೇ ಅದೃಷ್ಟವಶಾತ್ ಅಲ್ಲಿ ಯಾವ ದುರಂತ ನಡೆಯಲಿಲ್ಲ" ಎಂದಿದ್ದಾರೆ. ಮೂರನೇಯವರು ಚಿರತೆಯನ್ನು ಅಲ್ಲಿಂದ ಕಳುಹಿಸಿದ ಬಗ್ಗೆ ತಮಾಷೆ ಮಾಡಿದ್ದು, "ಬಡ ಪ್ರಾಣಿಯ ದೂರನ್ನು ತೆಗೆದುಕೊಳ್ಳದೆ ಅದನ್ನು ಹೊರಗೆ ಕಳುಹಿಸಿ ಬಾಗಿಲು ಮುಚ್ಚಿರುವುದು ಎಷ್ಟು ಅನ್ಯಾಯ? " ಎಂದು ಕೇಳಿದ್ದಾರೆ.