ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

HIT- The Third Case: ಹಿಟ್‌ ಅಬ್ಬರಕ್ಕೆ ಪ್ರೇಕ್ಷಕ ಫುಲ್‌ ಖುಷ್‌; ನಾನಿ ಅಭಿನಯಕ್ಕೆ ಬಹುಪರಾಕ್‌

HIT 3 First Review OUT: ಥ್ರಿಲ್ಲರ್‌ ಸಸ್ಪೆನ್ಸ್‌ ಚಿತ್ರವಾಗಿರುವ ಹಿಟ್‌ ಅಬ್ಬರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದು ಹಿಟ್‌ ಸಿನಿಮಾ ಮೂರನೇ ಸೀಕ್ವೆಲ್‌ ಆಗಿದ್ದು, ಮೊದಲೆರಡು ಸಿನಿಮಾಗಳಿಗಿಂತಲೂ ಈ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಚಿತ್ರದ ಪ್ರತೀ ಸೀನ್‌ ಪ್ರೇಕ್ಷಕನನ್ನು ಸೀಟು ತುದಿಗೆ ತಂದು ಕೂರಿಸುವಂತಿದೆ ಎನ್ನಲಾಗಿದೆ. ಇನ್ನು ನಾನಿಯ ಅದ್ಬುತ ಮ್ಯಾನರಿಸಂಗಂತೂ ಪ್ರೇಕ್ಷಕ ಬಹುಪರಾಕ್‌ ಅಂದಿದ್ದಾನೆ.

ಟಾಲಿವುಡ್‌ ಹಿಟ್‌ ಸಿನಿಮಾ ರಿಲೀಸ್‌; ಪ್ರೇಕ್ಷಕರ ರಿಯಾಕ್ಷನ್‌ ಹೇಗಿದೆ?

Profile Rakshita Karkera May 1, 2025 10:28 AM

ಹೈದರಾಬಾದ್‌: ಟಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ಒಂದಾದ ಹಿಟ್‌: ದ ಥರ್ಡ್‌ ಕೇಸ್‌(HIT: The Third Case) ಇಂದಿನಿಂದ ತೆರೆಮೇಲೆ ಅಬ್ಬರಿಸುತ್ತಿದೆ. ಥ್ರಿಲ್ಲರ್‌ ಸಸ್ಪೆನ್ಸ್‌ ಚಿತ್ರವಾಗಿರುವ ಹಿಟ್‌ ಅಬ್ಬರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದು ಹಿಟ್‌ ಸಿನಿಮಾ ಮೂರನೇ ಸೀಕ್ವೆಲ್‌ ಆಗಿದ್ದು, ಮೊದಲೆರಡು ಸಿನಿಮಾಗಳಿಗಿಂತಲೂ ಈ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಚಿತ್ರದ ಪ್ರತೀ ಸೀನ್‌ ಪ್ರೇಕ್ಷಕನನ್ನು ಸೀಟು ತುದಿಗೆ ತಂದು ಕೂರಿಸುವಂತಿದೆ ಎನ್ನಲಾಗಿದೆ. ಇನ್ನು ನಾನಿಯ ಅದ್ಬುತ ಮ್ಯಾನರಿಸಂಗಂತೂ ಪ್ರೇಕ್ಷಕ ಬಹುಪರಾಕ್‌ ಅಂದಿದ್ದಾನೆ. ಇದೀ ಚಿತ್ರದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು, ಶೈಲೇಶ್‌ ಕೊಲನು ನಿರ್ದೇಶನ ಮತ್ತು ನಾನಿ ಅತ್ಯದ್ಬುತ ಅಭಿನಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಹಾಗದ್ರೆ ಸೋಶಿಯಲ್‌ ಮೀಡಿಯಾದಲ್ಲಿ ಹಿಟ್‌ ಹವಾ ಹವಾ ಎಷ್ಟಿದೆ ಎಂಬುದನ್ನು ನೋಡೋಣ.



ನಾನಿ ಏನೋ ಹೊಸದೊಂದನ್ನು ಹೇಳೋಕೆ ಪ್ರಯತ್ನಿಸಿದ್ದಾರೆ. ಇದು ಬಹಳ ವರ್ಕೌಟ್‌ ಆಗಿದೆ. ಇಂತಹ ಕಥಾವಸ್ತು ಮತ್ತು ಚಿತ್ರಕಥೆಯನ್ನು ಪ್ರೇಕ್ಷಕರ ಮುಂದೆ ತಂದಿರುವ ನಿರ್ದೇಶಕ ಶೈಲೇಶ್‌ ಕೊಲನು ಅಭಿನಂದನೆಗಳು ಎಂದು ಒಬ್ಬರು ನೆಟ್ಟಿಗರು ಹಾಡಿ ಹೊಗಳಿದ್ದಾರೆ. ಮತ್ತೊಂದು ವಿಮರ್ಶೆಯಲ್ಲಿ, "ಸಕಾರಾತ್ಮಕ ಅಂಶಗಳು: ನಾನಿ, ದಿ ಫೈನಲ್ ಆಕ್ಟ್, ಪರಿಕಲ್ಪನೆ, ಶೈಲೇಶ್ ಅವರ ಚಿತ್ರಕಥೆ, ವಿಶೇಷ ಪಾತ್ರಗಳು. ನಕಾರಾತ್ಮಕ ಅಂಶಗಳು: ಕ್ಲೀಷೆ ತನಿಖೆ ಮತ್ತು ಮಂಧಗತಿ ಸಿನಿಮಾ(ಮೊದಲಾರ್ಧ), ತಕ್ಕಮಟ್ಟಿನ ಸಂಗೀತ. ಒಟ್ಟಿನಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲ ಸಿನಿಮಾ ಎಂದು ಮತ್ತೊರ್ವ ನೆಟ್ಟಿಗರು ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ:Imanvi: "ಪಾಕ್‌ ಜೊತೆ ಈಕೆಗೆ ನಂಟು ಸಿನಿಮಾದಿಂದ ಕಿತ್ತೊಗೆಯಿರಿ" ; ಪ್ರಭಾಸ್‌ ಹೊಸ ಸಿನಿಮಾ ನಾಯಕಿ ಮೇಲೆ ಏನಿದು ಆರೋಪ?

ನಾನಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ನೀಡದ ಅದ್ಭುತ ಅಭಿನಯವನ್ನು ನೀಡಿದ್ದಾರೆ ಮತ್ತು ಅವರನ್ನು ಅದ್ಬುತ ಅಭಿನಯ ಎಂದೂ ಸ್ಮರಣೀಯ. ಕೊನೆಯ ಮೂವತ್ತು ನಿಮಿಷಗಳ ಕಾಲ ಸಿನಿಮಾ ಅನಿರೀಕ್ಷಿತ ಹೈಪ್‌ ಪಡೆದುಕೊಳ್ಳುತ್ತದೆ. ಮತ್ತೊಂದೆಡೆ ಸಂಗೀತ ಮತ್ತು ತನಿಖಾ ವಿಧಾನದಲ್ಲಿ ನಿರ್ದೇಶಕರು ಕೊಂಚ ಎಡವಿದಂತೆ ಭಾಸವಾಗುತ್ತದೆ ಎಂದು ಪ್ರೇಕ್ಷಕರೊಬ್ಬರು ಬರೆದುಕೊಂಡಿದ್ದಾರೆ. "#Hit3 ಒಂದು ವೈಲೆಂಟ್‌ ಆಕ್ಷನ್ ಕ್ರೈಮ್ ಥ್ರಿಲ್ಲರ್ ಆಗಿದೆ. ನಿಧಾನಗತಿಯಲ್ಲಿ ಕಥೆ ಸಾಗುತ್ತದೆ ಎಂಬುದನ್ನು ಬಿಟ್ಟರೆ ಚಿತ್ರ ಅತ್ಯುತ್ತಮವಾಗಿದೆ. ಕೆಲವೊಂದು ಸೀನ್‌ಗಳಲ್ಲಿ ನಿರ್ದೇಶಕರು ಬಹಳ ಕೆಲಸ ಮಾಡಿದ್ದಾರೆ ಎಂದು ಮತ್ತೊರ್ವ ನೆಟ್ಟಿಗ ಹೇಳಿದ್ದಾರೆ.

ಇನ್ನು ಸೂರ್ಯ ಅವರ ರೆಟ್ರೋ ಮತ್ತು ಅಜಯ್ ದೇವಗನ್ ಅವರ ಬಹುನಿರೀಕ್ಷಿತ ರೈಡ್ 2 ಕೂಡ ಇಂದೇ ಬಿಡುಗಡೆಯಾಗಿದೆ. ಹೀಗಾಗಿ ಮೂರು ಬಿಗ್‌ ಬಜೆಟ್‌ ಸಿನಿಮಾಗಳು ಪರಸ್ಪರ ಮುಖಾಮುಖಿಯಾಗಿದ್ದು, ಯಾವ ಸಿನಿಮಾ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ.