GT vs SRH: ಗುಜರಾತ್ ವಿರುದ್ಧ ಸನ್‌ರೈಸರ್ಸ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ
ಹೈದರಾಬಾದ್‌ಗೆ ಹೋಲಿಸಿದರೆ ಗುಜರಾತ್ ಬೌಲಿಂಗ್ ಹೆಚ್ಚು ಬಲಿಷ್ಠ. ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮ, ರಶೀದ್ ಖಾನ್, ಹೀಗೆ ವೈವಿಧ್ಯಮಯ ಆಯ್ಕೆಗಳಿವೆ. ಆದರೆ ರಾಜಸ್ಥಾನ್ ಪಂದ್ಯದ ವೇಳೆ 14 ವರ್ಷದ ಬೈಭವ್ ಸೂರ್ಯವಂಶಿ ಇವರಿಗೆಲ್ಲ ಬಿಸಿ ಮುಟ್ಟಿಸಿದ್ದನ್ನು ಮರೆಯುವಂತಿಲ್ಲ.


ಅಹಮದಾಬಾದ್: ಬ್ಯಾಟಿಂಗ್ ಕಂಪನದಿಂದ ಚೇತರಿಕೆ ಕಂಡು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿ ಮಾಲ್ಡಿವ್ಸ್ ಪ್ರವಾಸಗೈದಿದ್ದ ಸನ್‌ರೈಸರ್ ಹೈದರಾಬಾದ್‌ನ ಆಟಗಾರರು ಹೊಸ ಜೋಶ್‌ನೊಂದಿಗೆ ಶುಕ್ರವಾರ “ನರೇಂದ್ರ ಮೋದಿ ಸ್ಟೇಡಿಯಂ'ನಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ಸವಾಲು ಎದುರಿಸಲಿದೆ. ಮುಂಬೈ ಹಿಂದಿನ ಪಂದ್ಯದಲ್ಲಿ ಲಕ್ನೋ ವಿರುದ್ಧ ಭರ್ಜರಿ ಜಯ ಸಾಧಿಸಿದ ಉತ್ಸಾಹದಲ್ಲಿದೆ. ಆಡಿದ 9 ಪಂದ್ಯಗಳಲ್ಲಿ 3 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನಿಯಾಗಿರುವ ಹೈದರಾಬಾದ್ ಈ ಪಂದ್ಯ ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
ಹೈದರಾಬಾದ್ ಮೊದಲ ಪಂದ್ಯದಲ್ಲಿ ಸಿಡಿದ ಬಳಿಕ ಭಾರೀ ಮಂಕಾಗಿತ್ತು. ಸತತ 5 ಪಂದ್ಯಗಳಲ್ಲಿ ಮುಗ್ಗರಿಸಿತ್ತು. ಬ್ಯಾಟಿಂಗ್ ಬರಗಾಲಕ್ಕೆ ಸಿಲುಕಿದ್ದ ಕಮಿನ್ಸ್ ಪಡೆ ಚೆನ್ನೈ ವಿರುದ್ಧ ನೈಜ ಆಟಕ್ಕೆ ಕುದುರಿದ್ದು ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದೆ. ಇದೇ ಅಬ್ಬರ ಮುಂದುವರಿದರೆ 9ನೇ ಸ್ಥಾನದಿಂದ ಸಾಕಷ್ಟು ಮೇಲೇರುವುದರಲ್ಲಿ ಅನುಮಾನವಿಲ್ಲ.
ಹೈದರಾಬಾದ್‌ಗೆ ಹೋಲಿಸಿದರೆ ಗುಜರಾತ್ ಬೌಲಿಂಗ್ ಹೆಚ್ಚು ಬಲಿಷ್ಠ. ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮ, ರಶೀದ್ ಖಾನ್, ಹೀಗೆ ವೈವಿಧ್ಯಮಯ ಆಯ್ಕೆಗಳಿವೆ. ಆದರೆ ರಾಜಸ್ಥಾನ್ ಪಂದ್ಯದ ವೇಳೆ 14 ವರ್ಷದ ಬೈಭವ್ ಸೂರ್ಯವಂಶಿ ಇವರಿಗೆಲ್ಲ ಬಿಸಿ ಮುಟ್ಟಿಸಿದ್ದನ್ನು ಮರೆಯುವಂತಿಲ್ಲ. ಇವರ ಓವರ್‌ಗಳಲ್ಲಿ ಧಾರಾಳ ರನ್ ಸೋರಿ ಹೋಗಿತ್ತು. ಆದರೆ ಅವರೆಲ್ಲ ತವರಲ್ಲಿ ಉತ್ತಮ ಪ್ರದರ್ಶನ ನೀಡಬಹುದೆಂಬ ನಿರೀಕ್ಷೆ ಇದೆ.
Game recognizes game 🤝
— SunRisers Hyderabad (@SunRisers) April 30, 2025
Travis Head | Heinrich Klaasen | #PlayWithFire | #TATAIPL2025 pic.twitter.com/zERwXWgAKh
ಗುಜರಾತ್ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಈ ಬಾರಿಯ ಐಪಿಎಲ್‌ನ ಅತ್ಯಂತ ಯಶಸ್ವಿ ಜೋಡಿ ಎನಿಸಿಕೊಂಡಿರುವ ಶುಭಮನ್ ಗಿಲ್ ಮತ್ತು ಆರೆಂಜ್ ಕ್ಯಾಪ್ ಹೋಲ್ಡರ್ ಸಾಯಿ ಸುದರ್ಶನ್ ಪ್ರಚಂಡ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ವನ್‌ಡೌನ್ ಬ್ಯಾಟರ್ ಜಾಸ್ ಬಟ್ಲರ್ ಕೂಡ ಪ್ರತಿ ಪಂದ್ಯದಲ್ಲೂ ಬ್ಯಾಟಿಂಗ್ ಜೋಶ್ ತೋರುತ್ತಿದ್ದಾರೆ.
ಪಿಚ್ ರಿಪೋರ್ಟ್
ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಉತ್ತಮ ಬ್ಯಾಟಿಂಗ್ ವಿಕೆಟ್ ಎಂದು ಹೆಸರುವಾಸಿಯಾಗಿದ್ದು, ಇನ್ನಿಂಗ್ಸ್ ಆರಂಭದಲ್ಲಿ ಬೌಲರ್‌ಗಳಿಗೆ ಸ್ವಲ್ಪ ಸಹಾಯ ಮಾಡುತ್ತದೆ. ಆದಾಗ್ಯೂ, ಹಾಲಿ ಆವೃತ್ತಿಯಲ್ಲಿ ಹಲವು ಆಟಗಾರ ಇಲ್ಲಿ ಉತ್ತಮ ಪ್ರದರ್ಶನ ತೋರಿಸಿದ್ದಾರೆ. ಮಾತ್ರವಲ್ಲದೆ, ನಿಧಾನಗತಿಯ ಬೌಲಿಂಗ್ಗೆ ಈ ಪಿಚ್ ಯೋಗ್ಯವಾಗಿದೆ. ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಇದನ್ನೂ ಓದಿ IPL 2025: ಜಂಪಿಂಗ್ ಕ್ಯಾಚ್ ಹಿಡಿದು ಮಿಂಚಿದ ಜೂನಿಯರ್ ಎಬಿಡಿ
ಸಂಭಾವ್ಯ ತಂಡಗಳು
ಹೈದರಾಬಾದ್: ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿ.ಕೀ.), ಅನಿಕೇತ್ ವರ್ಮಾ, ಕಮಿಂದು ಮೆಂಡಿಸ್, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಜೀಶನ್ ಅನ್ಸಾರಿ, ಮೊಹಮ್ಮದ್ ಶಮಿ.
Welcome to Amdavad, Sunrisers 🤝 pic.twitter.com/9MxsAJU9XH
— Gujarat Titans (@gujarat_titans) April 30, 2025
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿ.ಕೀ.), ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕರೀಂ ಜನತ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.