MLA Pradeep Eshwar: ಬಿಗಿ ಪೊಲೀಸ್ ಪಹರೆಯಲ್ಲಿ ಜನತೆಯ ಅಹವಾಲು ಆಲಿಸಿದ ಶಾಸಕ ಪ್ರದೀಪ್ ಈಶ್ವರ್
ಶಾಸಕ ಪ್ರದೀಪ್ ಈಶ್ವರ್ ಎಂದೂ ಕೂಡ ಸುದ್ದಿಗಾರರನ್ನು ದೂರವಿಟ್ಟಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಸುದ್ದಿಗಾರರು ಮಾತನಾಡಿಸಲು ಯತ್ನಿಸಿದರೂ ಮುಂದಿನ ಗ್ರಾಮದಲ್ಲಿ ಮಾತನಾಡುತ್ತೇನೆ ಎಂದರೆ ವಿನಃ ಎಲ್ಲೂ ಕೂಡ ಮಾಧ್ಯಮ ದವರನ್ನು ಎದುರಾಗಿ ಮಾತನಾಡಲಿಲ್ಲ. ಆದರೆ ಮಾಧ್ಯಮ ದವರು ನಿರ್ಗಮಿಸಿದ ನಂತರ ಕೆಲ ಆಯ್ದ ಯುಟ್ಯೂಬ್‌ನವರಿಗೆ ಮಾತ್ರ ಬೈಟ್ ನೀಡಿರುವುದು ಮಾಧ್ಯಮ ದವರನ್ನು ಕೆರಳಿಸಿದೆ

ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದ ಅಂಗವಾಗಿ ನುಲುಗುಮ್ಮನಹಳ್ಳಿ ಗ್ರಾಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿದರು

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಅವರ ನಮ್ಮ ಊರಿಗೆ ನಮ್ಮ ಶಾಸಕರು ಅಭಿಯಾನದ ಭಾಗವಾಗಿ ಗುರುವಾರ ಮಂಚೇನಹಳ್ಳಿ ತಾಲೂಕಿನ ಜರಬಂಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿ ಯ ಪಿಡಚಲಹಳ್ಳಿ ,ಜರಬಂಡಹಳ್ಳಿ, ನುಲುಗುಮ್ಮನಹಳ್ಳಿ ಗ್ರಾಮಗಳಲ್ಲಿ ಸಂಚರಿಸಿದ ಶಾಸಕರು ಜನರ ಬಳಿ ತೆರಳಿ ಕಷ್ಟಗಳನ್ನು ಆಲಿಸಿದರು. ತಾಲೂಕು ಆಡಳಿತ ವ್ಯವಸ್ಥೆಯ 36 ಇಲಾಖೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದು ಸ್ಥಳದಲ್ಲಿ ಬಂದ ಅರ್ಜಿಯನ್ನು ಆಯಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಈ ಬೇಡಿಕೆಗಳು ನ್ಯಾಯತವಾಗಿದ್ದರೆ ಪರಿಹರಿಸಿ ಎಂದು ಸ್ಥಳದಲ್ಲಿ ಆದೇಶಿಸಿದರು.
ಇದನ್ನೂ ಓದಿ: Chikkanayakanahalli News: ಪ್ರತಿಯೊಬ್ಬರೂ ನೀರಿನ ರಕ್ಷಣಾ ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ
ಸಾರ್ವಜನಿಕರಿಂದ ಬರುವ ದೂರುಗಳನ್ನು ಆಲಿಸಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಕರೆದು ಅವರ ಸಮ್ಮುಖದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಾಣಿಸುವುದು ಶಾಸಕರ ಕಾರ್ಯವೈಖರಿ ಯಾಗಿದೆ. ಇವರ ಈ ನಡೆ ಜನಸಾಮಾನ್ಯರಿಗೆ ಇಷ್ಟವಾಗಿದ್ದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಇವರನ್ನು ಭೇಟಿಯಾಗಲು ಬರುತ್ತಾರೆ.ಎಷ್ಟೇ ಮಂದಿ ಬಂದು ಎಲ್ಲಿಗೇ ಕರೆದರೂ ಬೇಸರಿಸಿದೆ. ಅವರ ಹಿಂದೆ ಹೋಗಿ ಅವರ ಕಷ್ಟ ಕೇಳುತ್ತಾರೆ. ಆಗಬೇಕಾದ ಕೆಲಸವನ್ನು ವಿಳಂಬ ಮಾಡದೆ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಾರೆ.ಹೀಗಾಗಿ ನಮ್ಮೂರಿಗೆ ನಮ್ಮ ಶಾಸಕ ದಿನೇ ದಿನೇ ಜನಪ್ರಿಯವಾಗುತ್ತಿದೆ.
ಜರಬಂಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಡಚಲಹಳ್ಳಿ, ಜರಬಂಡಹಳ್ಳಿ, ನುಲುಗುಮ್ಮನ ಹಳ್ಳಿ ಗ್ರಾಮಗಳಲ್ಲಿ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದ ಅಡಿಯಲ್ಲಿ ಶಾಸಕರು ತಮ್ಮ ಗ್ರಾಮಕ್ಕೆ ಬಂದೇ ಬರುತ್ತಾರೆ ಎಂಬುದನ್ನು ಮೊದಲೇ ಅರಿತಿದ್ದ ಗ್ರಾಮಸ್ಥರು ಊರಿನ ಪ್ರವೇಶ ದ್ವಾರದಲ್ಲಿಯೇ ಅವರನ್ನು ಸ್ವಾಗತಿಸಿ ಪಟಾಕಿಗಳನ್ನು ಸಿಡಿಸಿ, ಆರತಿ ಬೆಳಗಿ, ಹಣೆಗೆ ತಿಲಕ ಹಚ್ಚಿ ಅದ್ದೂರಿಯಾಗಿ ಸ್ವಾಗತ ಕೋರಿದರು.
ಈ ಗ್ರಾಮಗಳಲ್ಲಿನ ಜನತೆ ತಾವು ಎದುರಿಸುತ್ತಿರುವ ಸಮಸ್ಯೆಗಳಾದ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ, ರಸ್ತೆ ಸಮಸ್ಯೆ, ಸ್ಮಶಾನಗಳ ಒತ್ತುವರಿ ಜಾಗ ತೆರುವು, ಚರಂಡಿ ದುರಸ್ಥಿ ಮತ್ತು ನಿರ್ಮಾಣ, ವಿದ್ಯತ್ ದೀಪ ಅಳವಡಿಕೆ, ವಸತಿ ,ನಿವೇಶನ ಸಮಸ್ಯೆ , ಖಾತೆ ಸಮಸ್ಯೆ ಪರಿಹಾರಕ್ಕೆ ಶಾಸಕರಲ್ಲಿ ಮೊರೆ ಯಿಟ್ಟರು.
ಜತೆಗೆ ಸಮರ್ಪಕ ಸಾರಿಗೆ ವ್ಯವಸ್ಥೆ, ಸೇರಿದಂತೆ ಪೆನ್ಶನ್,ಹಾಸ್ಟೆಲ್‌ಗೆ ಸೇರಿಸುವುದು, ಶಾಲಾ ದಾಖಲಾ ತಿಗೆ ನೆರವು ಕೋರಿ ಶಾಸಕರಲ್ಲಿ ಗ್ರಾಮಸ್ಥರು ಮನವಿ ಮಾಡಿದರು. ಜನರ ಸಮಸ್ಯೆಗೆ ಸ್ಪಂದಿಸಿದ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಈ ಬಗ್ಗೆ ನಿಗಾ ಇರಿಸಿ ಪರಿಹರಿಸುವಂತೆ ಸೂಚಿಸಿ ದರು.
ಗ್ರಾಮದ ಆಂತರಿಕ ಸಮಸ್ಯೆಗಳನ್ನು ಸರಿಪಡಿಸಲು ಶಾಸಕ ಪ್ರದೀಪ್ ಈಶ್ವರ್ ಅದೇ ಗ್ರಾಮಗಳ ಹಲವಾರು ಮುಖಂಡರ ಸಲಹೆ ಸೂಚನೆಗಳನ್ನು ಕೂಡ ಕೇಳಿ ಪಡೆದರು.
ಮಂಚೇನಹಳ್ಳಿ ತಾಲೂಕಿನಲ್ಲಿ ಗುರುವಾರ ನಡೆದ ನಮ್ಮೂರಿಗೆ ನಮ್ಮ ಶಾಸಕರು ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅವರು ಸಂಚರಿಸಿದ ಎಲ್ಲಾ ಗ್ರಾಮಗಳಲ್ಲಿ ನೂರಕ್ಕೂ ಹೆಚ್ಚು ಪೋಲಿಸರು ಶಾಸಕರನ್ನು ಸುತ್ತುವರೆದಿದ್ದರು. ವಿಶೇಷವೆಂದರೆ ಈವರೆಗೂ ಶಾಸಕರು ಭೇಟಿ ನೀಡಿರುವ 150ಕ್ಕೂ ಹೆಚ್ಚು ಗ್ರಾಮಗಳಿಗೆ ಬರುವಾಗ ಒಬ್ಬರು ಸಬ್‌ಇನ್ಸ್ಪೆಕ್ಟರ್ ಮತ್ತು ನಾಲ್ಕಾರು ಪೊಲೀಸರು ಬಿಟ್ಟರೆ ಯಾರು ಇರುತ್ತಿರಲಿಲ್ಲ. ಇಂದು ಮಾತ್ರ ನೂರಕ್ಕೂ ಹೆಚ್ಚು ಪೊಲೀಸರನ್ನು ಜೊತೆಗಿಟ್ಟುಕೊಂಡು ಬಿಗಿ ಭದ್ರತೆ ನಡುವೆ ಜನರ ಅಹವಾಲು ಆಲಿಸಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇನ್ನು ಶಾಸಕ ಪ್ರದೀಪ್ ಈಶ್ವರ್ ಎಂದೂ ಕೂಡ ಸುದ್ದಿಗಾರರನ್ನು ದೂರವಿಟ್ಟಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಸುದ್ದಿಗಾರರು ಮಾತನಾಡಿಸಲು ಯತ್ನಿಸಿದರೂ ಮುಂದಿನ ಗ್ರಾಮದಲ್ಲಿ ಮಾತನಾಡುತ್ತೇನೆ ಎಂದರೆ ವಿನಃ ಎಲ್ಲೂ ಕೂಡ ಮಾಧ್ಯಮ ದವರನ್ನು ಎದುರಾಗಿ ಮಾತನಾಡಲಿಲ್ಲ. ಆದರೆ ಮಾಧ್ಯಮದವರು ನಿರ್ಗಮಿಸಿದ ನಂತರ ಕೆಲ ಆಯ್ದ ಯುಟ್ಯೂಬ್‌ನವರಿಗೆ ಮಾತ್ರ ಬೈಟ್ ನೀಡಿರುವುದು ಮಾಧ್ಯದವರನ್ನು ಕೆರಳಿಸಿದೆ. ಇದು ಮುಂದಿನ ದಿನಗಳಲ್ಲಿ ಯಾವ ರೀತಿ ಪರಿಣಾಮ ಬೀರುತ್ತೋ ಕಾದು ನೋಡಬೇಕು.
ಈ ವೇಳೆ ಮಂಚೇನಹಳ್ಳಿ ತಹಸೀಲ್ದಾರ್ ದೀಪ್ತಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಯ್ಯ, ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ನಗರಾಭಿವೃದ್ದಿ ಪ್ರಾಧಿಖಾರದ ಸದಸ್ಯರಾದ ಪೆದ್ದಣ್ಣ, ಹಮೀಮ್, ಮುಖಂಡರಾದ ಅರವಿಂದ್, ಜಿ.ಉಮೇಶ್,ಲಕ್ಷ್ಮೀನಾರಾಯಣ,ರಮೇಶ್ ಬಾಬು, ರಾಜಣ್ಣ,ಡ್ಯಾನ್ಸ್ ಶ್ರೀನಿವಾಸ್, ವಿನಯ್ ಬಂಗಾರಿ, ಆಹಾರ, ಅಬಕಾರಿ,ಅರಣ್ಯ,ಬೆಸ್ಕಾಂ, ಆರೋಗ್ಯ, ಪೋಲಿಸ್ ಇಲಾಖೆಗಳ ತಾಲ್ಲೂಕು ಪಂಚಾಯತಿ,ಗ್ರಾಮ ಪಂಚಾಯತಿ,ಅಧಿಕಾರಿಗಳು, ಮುಖಂಡರು,ಗ್ರಾಮಸ್ಥರು ಇದ್ದರು.