ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-Pak Ceasefire: ನಾನೇ ಮಾಡಿದ್ದಲ್ಲ. ಆದರೆ...: ಭಾರತ-ಪಾಕ್‌ ಕದನ ವಿರಾಮ ಮಧ್ಯಸ್ಥಿಕೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಡೊನಾಲ್ಡ್‌ ಟ್ರಂಪ್‌

Donald Trump: ಮೇ 10ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಾವು ಭಾರತ-ಪಾಕ್‌ ಮಧ್ಯೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿರುವುದಾಗಿ ತಿಳಿಸಿದ್ದರು. ಬಳಿಕ ಎರಡೂ ದೇಶಗಳು ಇದನ್ನು ದೃಢಪಡಿಸಿದ್ದವು. ಇದೀಗ ತಮ್ಮ ವರಸೆ ಬದಲಿಸಿರುವ ಅವರು, ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ನಾನೇ ಪೂರ್ತಿ ಕಾರಣ ಅಲ್ಲ ಎಂದಿದ್ದಾರೆ.

ಕದನ ವಿರಾಮ ಮಧ್ಯಸ್ಥಿಕೆ ಬಗ್ಗೆ ಡೊನಾಲ್ಡ್‌ ಟ್ರಂಪ್‌ ಅಚ್ಚರಿಯ ಹೇಳಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌.

Profile Ramesh B May 15, 2025 11:44 PM

ಹೊಸದಿಲ್ಲಿ: ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಅಮಾಯಕ ಪ್ರವಾಸಿಗರನ್ನು ಉಗ್ರರು (Pahalgam Attack) ಹತ್ಯೆ ಮಾಡಿದ್ದಕ್ಕೆ ಪ್ರತೀಕಾರ ತೀರಿಸಿಕೊಂಡ ಭಾರತ ಆಪರೇಷನ್‌ ಸಿಂದೂರ್‌ (Operation Sindoor) ಹೆಸರಿನಲ್ಲಿ ಮೇ 7ರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಿ ಉಗ್ರ ನೆಲೆಯನ್ನು ಧ್ವಂಸಗೊಳಿಸಿತು. ಇದರಿಂದ ಉರಿದು ಬಿದ್ದ ಪಾಕಿಸ್ತಾನ ಹೇಡಿಯಂತೆ ರಾತ್ರಿಯಾಗುತ್ತಿದ್ದಂತೆ ಭಾರತದ ಮೇಲೆ ದಾಳಿ ನಡೆಸಿತು. ಇದಕ್ಕೆ ಭಾರತ ಸರಿಯಾಗಿ ತಿರುಗೇಟು ನೀಡಿ ಅಲ್ಲಿನ ಸೇನಾನೆಲೆಗಳನ್ನೇ ಧ್ವಂಸ ಮಾಡಿತು. ಈ ಸಂಘರ್ಷ ಎರಡೂ ದೇಶಗಳ ನಡುವೆ ಯುದ್ಧ ನಡೆಯುವ ಭೀತಿ ಮೂಡಿಸಿತ್ತು. ಈ ಮಧ್ಯೆ ಮೇ 10ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಸೋಶಿಯಲ್‌ ಮೀಡಿಯಾದಲ್ಲಿ ತಾವು ಭಾರತ-ಪಾಕ್‌ ಮಧ್ಯೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿರುವುದಾಗಿ ತಿಳಿಸಿದ್ದರು (India-Pak Ceasefire). ಬಳಿಕ ಎರಡೂ ದೇಶಗಳು ಇದನ್ನು ದೃಢಪಡಿಸಿದ್ದವು. ಇದೀಗ ತಮ್ಮ ವರಸೆ ಬದಲಿಸಿರುವ ಅವರು, ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ನಾನೇ ಪೂರ್ತಿ ಕಾರಣ ಅಲ್ಲ ಎಂದಿದ್ದಾರೆ.

ಭಾರತ-ಪಾಕಿಸ್ತಾನ ಕದನ ವಿರಾಮ ಮಾತುಕತೆಗಳ ಬಗ್ಗೆ ಡೊನಾಲ್ಡ್ ಟ್ರಂಪ್ ತಮ್ಮ ನಿಲುವನ್ನು ವಿವರಿಸಿದ್ದಾರೆ. ಇದಕ್ಕೆ ತಾವೇ ಸಂಪೂರ್ಣ ಕ್ರೆಡಿಟ್ ಹೇಳಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಅದಾಗ್ಯೂ 2 ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ವಿವರಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: India Pakistan Ceasefire: ಭಾರತ- ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ; ಡೊನಾಲ್ಡ್‌ ಟ್ರಂಪ್‌ ಹೇಳಿಕೆ

ಡೊನಾಲ್ಡ್‌ ಟ್ರಂಪ್‌ ಹೇಳಿದ್ದೇನು?

ಕತಾರ್‌ನಲ್ಲಿ ಈ ಬಗ್ಗೆ ಮಾತನಾಡಿದ ಅವರು, "ಕಳೆದ ವಾರದ ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮ ಒಪ್ಪಂದಕ್ಕೆ ಪೂರ್ತಿ ನಾನೇ ಕಾರಣ ಎನ್ನುವುದಿಲ್ಲ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಮಸ್ಯೆಯನ್ನು ಪರಿಹರಿಸಲು ನಾನು ಖಂಡಿತವಾಗಿಯೂ ಸಹಾಯ ಮಾಡಿದ್ದೇನೆ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಆ ಎರಡೂ ದೇಶಗಳ ನಡುವಿನ ಗಲಭೆ ಹೆಚ್ಚಾಗುತ್ತಿತ್ತು, ಪರಿಸ್ಥಿತಿ ಕೈ ಮೀರಿ ಹೋಗುತ್ತಿತ್ತು. ಎರಡೂ ದೇಶಗಳ ನಡುವೆ ಕ್ಷಿಪಣಿ ದಾಳಿ ಆರಂಭವಾಗಿತ್ತು. ಇದನ್ನು ನಾವು ಇತ್ಯರ್ಥ ಪಡಿಸಿದ್ದೇವೆʼʼ ಎಂದು ಹೇಳಿದ್ದಾರೆ.

ಅಲ್ಲದೆ ಭಾರತ-ಪಾಕಿಸ್ತಾನ ನಡುವೆ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸಿದ್ದಾಗಿಯೂ ತಿಳಿಸಿದ್ದಾರೆ. ʼʼವ್ಯಾಪಾರ-ವ್ಯವಹಾರ ನಡೆಸುವ ಬಗ್ಗೆಯೂ ನಾವು ಸಲಹೆ ನೀಡಿದೆವು. ಯುದ್ಧದ ಬದಲು ವ್ಯಾಪಾರ ನಡೆಸಿ ಎಂದು ತಿಳಿಸಿದ್ದಕ್ಕೆ ಎರಡೂ ದೇಶಗಳು ಸಂತಸ ವ್ಯಕ್ತಪಡಿಸಿದವು. ಈ ನಿಟ್ಟಿನಲ್ಲಿ ಎರಡೂ ದೇಶಗಳು ಸದ್ಯದಲ್ಲೇ ಕಾರ್ಯ ನಿರ್ವಹಿಸಲಿದೆʼʼ ಎಂದು ಹೇಳಿದ್ದಾರೆ.

ಈ ಹಿಂದೆ ಟ್ರಂಪ್‌ ಹೇಳಿದ್ದೇನು?

ರಾತ್ರಿಯಿಡೀ ನಡೆದ ಎರಡೂ ದೇಶಗಳೊಂದಿಗಿನ ಮಾತುಕತೆಯ ಬಳಿಕ ಭಾರತ ಮತ್ತು ಪಾಕಿಸ್ತಾನ ತಕ್ಷಣ ಮತ್ತು ಪೂರ್ಣ ಪ್ರಮಾಣದ ಕದನವಿರಾಮಕ್ಕೆ ಒಪ್ಪಿವೆ ಎಂದು ಮೇ 10ರಂದು ಸೋಶಿಯಲ್‌ ಮೀಡಿಯಾದಲ್ಲಿ ಹೇಳುವ ಮೂಲಕ ಟ್ರಂಪ್‌ ಸಂಪೂರ್ಣ ಕ್ರೆಡೆಟ್‌ ತಾವೇ ತೆಗೆದುಕೊಂಡಿದ್ದರು. ಆದರೆ ಭಾರತ ಈ ಹೇಳಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿತ್ತು.