2025ರ ಐಪಿಎಲ್ ಪ್ಲೇಆಫ್ಸ್ಗೆ ಅಲಭ್ಯರಾಗಲಿರುವ ದಕ್ಷಿಣ ಆಫ್ರಿಕಾ ಸ್ಟಾರ್ಗಳು!
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮೇ 17 ರಂದು ಪುನರಾರಂಭವಾಗಲಿದೆ. ಭಾರತ vs ಪಾಕ್ ನಡುವಣ ಉದ್ವಿಗ್ನ ಪರಿಸ್ಥಿತಿಯ ಕಾರಣ ಒಂದು ವಾರ ಟೂರ್ನಿಯನ್ನು ನಿಲ್ಲಿಸಲಾಗಿತ್ತು. ಇದು ವಿದೇಶಿ ಆಟಗಾರರ ಮೇಲೆ ಪರಿಣಾಮ ಬೀರಿದೆ. ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪೈನಲ್ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಕಾದಾಟ ನಡೆಸಲಿವೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಪ್ಲೇಆಫ್ಸ್ಗೆ ಅಲಭ್ಯರಾಗಲಿರುವ ಆಫ್ರಿಕಾ ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ.



1 ಟ್ರಿಸ್ಟನ್ ಸ್ಟಬ್ಸ್
ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇಆಫ್ಸ್ ರೇಸ್ನಲ್ಲಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದರೂ ಡೆಲ್ಲಿ ಪ್ಲೇಆಫ್ಸ್ಗೆ ಲಗ್ಗೆ ಇಡಬಹುದು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಟ್ರಿಸ್ಟನ್ ಸ್ಟಬ್ಸ್ ಪ್ಲೇಆಫ್ಸ್ಗೆ ಅಲಭ್ಯರಾಗಲಿದ್ದಾರೆ.

2 ಕಗಿಸೊ ರಬಾಡ
ಮಾದಕವಸ್ತು ಸೇವನೆಯಿಂದಾಗಿ ಅಮಾನತುಗೊಂಡ ನಂತರ ಕಗಿಸೊ ರಬಾಡ 2025ರ ಐಪಿಎಲ್ ಟೂರ್ನಿಯ ಬಹುಪಾಲು ಪಂದ್ಯಗಳನ್ನು ತಪ್ಪಿಸಿಕೊಂಡರು. ದಕ್ಷಿಣ ಆಫ್ರಿಕಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಇರುವ ಕಾರಣ ಗುಜರಾತ್ ಟೈಟನ್ಸ್ ವೇಗಿ ರಬಾಡ ಪ್ಲೇಆಫ್ಸ್ಗೆ ಅಲಭ್ಯರಾಗಲಿದ್ದಾರೆ.

3 ಕಾರ್ಬಿನ್ ಬಾಷ್
ಮುಂಬೈ ಇಂಡಿಯನ್ಸ್ ತಂಡ 2025ರ ಐಪಿಎಲ್ ಪ್ಲೇಆಫ್ಸ್ಗೆ ಅರ್ಹತೆ ಪಡೆದರೆ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕಾರ್ಬಿನ್ ಬಾಷ್ ಅಲಭ್ಯರಾಗಲಿದ್ದಾರೆ. ಅವರು ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಅವರ ಅನುಪಸ್ಥಿತಿ ಮುಂಬೈಗೆ ಕಾಡಲಿದೆ.

4 ರಯಾನ್ ರಿಕಲ್ಟನ್
ಮುಂಬೈ ಇಂಡಿಯನ್ಸ್ಗೆ ರಯಾನ್ ರಿಕೆಲ್ಟನ್ ಪ್ರಮುಖ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್. ಒಂದು ವೇಳೆ ಮುಂಬೈ ಇಂಡಿಯನ್ಸ್ ನಾಕ್ಔಟ್ ಹಂತಕ್ಕೆ ಪ್ರವೇಶ ಮಾಡಿದರೆ, ದಕ್ಷಿಣ ಆಫ್ರಿಕ ಆಟಗಾರ ಪ್ಲೇಆಫ್ಸ್ನಿಂದ ಹೊರ ನಡೆಯಲಿದ್ದಾರೆ. ಇದರಿಂದ ಮುಂಬೈಗೆ ದೊಡ್ಡ ನಷ್ಟವಾಗಲಿದೆ.

5 ಮಾರ್ಕೊ ಯೆನ್ಸೆನ್
ಪಂಜಾಬ್ ಕಿಂಗ್ಸ್ ತಂಡ 2025ರ ಐಪಿಎಲ್ ಟೂರ್ನಿಯ ಪ್ಲೇಆಫ್ಸ್ಗೆ ಅರ್ಹತೆ ಪಡೆದರೆ ದಕ್ಷಿಣ ಆಫ್ರಿಕಾದ ಸೀಮ್ ಬೌಲಿಂಗ್ ಆಲ್ರೌಂಡರ್ ಅಲಭ್ಯರಾಗಲಿದ್ದಾರೆ. ಆ ಮೂಲಕ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಭಾರಿ ನಷ್ಟವಾಗಲಿದೆ.

ಲುಂಗಿ ಎನ್ಗಿಡಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅರ್ಹತೆ ಪಡೆದರೆ ಲುಂಗಿ ಎನ್ಗಿಡಿ 2025ರ ಐಪಿಎಲ್ ಪ್ಲೇಆಫ್ಸ್ನಿಂದ ಹೊರ ನಡೆಯಲಿದ್ದಾರೆ. ಜಾಶ್ ಹೇಝ್ಲ್ವುಡ್ ಗಾಯದಿಂದಾಗಿ ಹೊರಗುಳಿದಿದ್ದರೆ, ಅವರಿಗೆ ಎನ್ಗಿಡಿ ದೊಡ್ಡ ಬದಲಿ ಆಟಗಾರರಾಗಬಹುದಿತ್ತು.

7 ಏಡೆನ್ ಮಾರ್ಕ್ರಮ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇಆಫ್ಸ್ಗೆ ಅರ್ಹತೆ ಪಡೆದರೆ ಏಡೆನ್ ಮಾರ್ಕ್ರಮ್ ಟೂರ್ನಿಯನನು ತೊರೆಯಲಿದ್ದಾರೆ. ಇದು ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಎಲ್ಎಸ್ಜಿಗೆ ಏಡೆನ್ ಮಾರ್ಕ್ರಮ್ ಈ ಸೀಸನ್ನಲ್ಲಿ ಉತ್ತಮ ಕೊಡುಗೆ ನೀಡಿದ್ದಾರೆ.