ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA K H PuttaswamyGowda: ಪ್ರಾಚೀನ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಯುವಶಕ್ತಿ ಮುಂದಾಗಬೇಕು : ಕೆ.ಹೆಚ್.ಪುಟ್ಟಸ್ವಾಮಿಗೌಡ

ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಕಸರತ್ತಿನೊಂದಿಗೆ ಧಾರ್ಮಿಕ ಶ್ರದ್ಧೆಯನ್ನು ಬೇಡುತ್ತವೆ. ಜಾರುಟ್ಲು ತರದ ಕ್ರೀಡೆಗಳಿಗೆ ಹಿಂದಿನ ಕಾಲದಲ್ಲಿ ಬಹಳ ಮಾನ್ಯತೆಯಿತ್ತು. ದೈವಸನ್ನಿಧಿಯಲ್ಲಿ ನಡೆಯುವ ಇಂತಹ ಮನರಂಜನೆಯ ಕ್ರೀಡೆಗಳು ಕಣ್ಮರೆ ಯಾಗುತ್ತಿವೆ. ಆದರೂ ಹೊಸೂರು ಹೋಬಳಿಯ ಯುವ ಕರು ಉತ್ಸಾಹದಿಂದ ಈ ಕ್ರೀಡೆಯನ್ನು ಆಯೋಜಿಸಿ ಜನತೆಗೆ ಮನರಂಜನೆ ನೀಡುವುದು ಸಂತೋಷದ ಸಂಗತಿಯೆಂದು ಬಣ್ಣಿಸಿದರು

ಪ್ರಾಚೀನ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಯುವಶಕ್ತಿ ಮುಂದಾಗಬೇಕು

ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಬಸವ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ಜನಪ್ರಿಯ ಕ್ರೀಡೆಗಳಲ್ಲಿ ಒಂದಾದ ಶ್ರೀ ಹನುಮ ದೇವರ "ಜಾರುಟ್ಲು ಪರಷೆ"ಕ್ರೀಡೆಗೆ  ಶಾಸಕ ಕೆ ಹೆಚ್ ಪುಟ್ಟಸ್ವಾಮಿಗೌಡರು ಚಾಲನೆ ನೀಡಿದರು.

Profile Ashok Nayak May 5, 2025 1:32 PM

ಗೌರಿಬಿದನೂರು: ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಬಸವ ಜಯಂತಿಯ ಪ್ರಯುಕ್ತ ಆಯೋಜಿ ಸಲಾಗಿದ್ದ ಜನಪ್ರಿಯ ಕ್ರೀಡೆಗಳಲ್ಲಿ ಒಂದಾದ ಶ್ರೀ ಹನುಮ ದೇವರ "ಜಾರುಟ್ಲು ಪರಷೆ"ಕ್ರೀಡೆಗೆ  ಶಾಸಕ ಕೆ ಹೆಚ್ ಪುಟ್ಟಸ್ವಾಮಿಗೌಡರು ಚಾಲನೆ ನೀಡಿದರು. ಈ ವೇಳೆ ಮಾತನಾಡುತ್ತಾ ಈ ರೀತಿಯ ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಕಸರತ್ತಿನೊಂದಿಗೆ ಧಾರ್ಮಿಕ ಶ್ರದ್ಧೆಯನ್ನು ಬೇಡುತ್ತವೆ. ಜಾರುಟ್ಲು ತರದ ಕ್ರೀಡೆಗಳಿಗೆ ಹಿಂದಿನ ಕಾಲದಲ್ಲಿ ಬಹಳ ಮಾನ್ಯತೆಯಿತ್ತು. ದೈವಸನ್ನಿಧಿಯಲ್ಲಿ ನಡೆಯುವ ಇಂತಹ ಮನರಂಜನೆಯ ಕ್ರೀಡೆಗಳು ಕಣ್ಮರೆ ಯಾಗುತ್ತಿವೆ. ಆದರೂ ಹೊಸೂರು ಹೋಬಳಿಯ ಯುವಕರು ಉತ್ಸಾಹದಿಂದ ಈ ಕ್ರೀಡೆಯನ್ನು ಆಯೋಜಿಸಿ ಜನತೆಗೆ ಮನರಂಜನೆ ನೀಡುವುದು ಸಂತೋಷದ ಸಂಗತಿಯೆಂದು ಬಣ್ಣಿಸಿದರು.

ಇದನ್ನೂ ಓದಿ: Roopa Gururaj Column: ಮುಕುಂದೂರು ಸ್ವಾಮಿಗಳ ಮಡಿಯ ವ್ಯಾಖ್ಯಾನ

ಗ್ರಾಮೀಣ ಭಾಗದಲ್ಲಿ ಇಂದಿಗೂ ಕೂಡ ಉಳಿಸುಕೊಂಡು ಬಂದಿರುವ ಪ್ರಾಚೀನ ಕ್ರೀಡೆಗಳನ್ನು ಮುಂದುವರೆಸಿಕೊAಡು ಹೋಗಲು ನಮ್ಮ ಯುವಕರು ಇನ್ನಷ್ಟು ಜಾಗೃತೆ ವಹಿಸಬೇಕು. ನಿಮ್ಮೊಂದಿಗಿದ್ದು ಶಾಸಕನಾಗಿ ಬೇಕಾದ ಸಹಕಾರ ನೀಡುತ್ತೇನೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಜ್ಯೋತಿರೆಡ್ಡಿ,,ಹೊಸೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಗೀತಾ ನಾಗರಾಜ್,ಕೆ.ಹೆಚ್.ಪಿ.ಬಣದ ಲಕ್ಷ್ಮಣ್ ರಾವ್ ಪ್ರಮುಖ ಮುಖಂಡರುಗಳು ಚುನಾಯಿತ ಜನ ಪ್ರತಿನಿಧಿಗಳು, ಕಾರ್ಯಕರ್ತರುಗಳು, ಕ್ರೀಡೆಯನ್ನು ವೀಕ್ಷಿಸಲು ಹಲವು ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.