ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Rains: ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ 12 ವರ್ಷದ ಬಾಲಕ ಸೇರಿ ಇಬ್ಬರು ಬಲಿ; ವಿದ್ಯುತ್‌ ತಗುಲಿ ಅವಘಡ

Bengaluru Rains: ಬೆಂಗಳೂರಿನ ಬಿಟಿಎಂ ಲೇಔಟ್‌ನ ಅಪಾರ್ಟ್ಮೆಂಟ್‌ನ ಬೇಸ್ಮೆಂಟ್‌ನಲ್ಲಿ ಮೋಟಾರ್‌ನಿಂದ ಮಳೆಯ ನೀರು ಹೊರ ಹಾಕಲು ಹೋಗಿ ಕರೆಂಟ್ ಶಾಕ್ ತಗುಲಿ ದುರಂತ ನಡೆದಿದೆ. ವೈಟ್ ಫೀಲ್ಡ್​​ನ ಚನ್ನಸಂದ್ರದ ಸಮೀಪ ಕಟ್ಟಡದ ಗೋಡೆ ಕುಸಿದು ಮಹಿಳೆ ಮೃತಪಟ್ಟ ಬೆನ್ನಲ್ಲೇ ರಾಜಧಾನಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ.

ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಮತ್ತಿಬ್ಬರು ಬಲಿ

Profile Prabhakara R May 19, 2025 10:26 PM

ಬೆಂಗಳೂರು: ನಗರದಲ್ಲಿ ಮಳೆಯ ಅವಾಂತರಕ್ಕೆ (Bengaluru Rains) ಮತ್ತಿಬ್ಬರು ಮೃತಪಟ್ಟಿದ್ದಾರೆ. ವೈಟ್ ಫೀಲ್ಡ್​​ನ ಚನ್ನಸಂದ್ರದ ಸಮೀಪ ಕಟ್ಟಡದ ಗೋಡೆ ಕುಸಿದು ಮಹಿಳೆ ಮೃತಪಟ್ಟ ಬೆನ್ನಲ್ಲೇ ಮೋಟಾರ್‌ನಿಂದ ಮಳೆ ನೀರು ತೆರವು ಮಾಡಲು ಹೋಗಿ ವಿದ್ಯುತ್‌ ತಗುಲಿ 12 ವರ್ಷದ ಬಾಲಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ನಡೆದಿದೆ.

ಬಿಟಿಎಂ ಲೇಔಟ್‌ನ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಲ್ಲಿ ಮೋಟಾರ್‌ನಿಂದ ಮಳೆಯ ನೀರು ಹೊರ ಹಾಕಲು ಹೋಗಿ ಕರೆಂಟ್ ಶಾಕ್ ತಗುಲಿ ದುರಂತ ನಡೆದಿದೆ. ಮೃತರನ್ನು ಮನಮೋಹನ್ ಕಾಮತ್(63) ಹಾಗೂ ದಿನೇಶ್ (12) ಎಂಬುದಾಗಿ ಗುರುತಿಸಲಾಗಿದೆ. ಇವರು ಬಿಟಿಎಂ ಲೇಔಟ್ ನ 2ನೇ ಹಂತದಲ್ಲಿರುವಂತ ಎನ್. ಎಸ್. ಪಾಳ್ಯದಲ್ಲಿನ ಮಧುವನ ಅಪಾರ್ಮೆಂಟ್‌ನ ನಿವಾಸಿಗಳಾಗಿದ್ದಾರೆ.

ಇಂದು ಸಂಜೆ 6.15ರ ಸುಮಾರಿಗೆ ಅಪಾರ್ಮೆಂಟ್‌ನ ಬೇಸ್‌ಮೆಂಟ್‌ನಲ್ಲಿ ತುಂಬಿದ್ದ ನೀರನ್ನು ಮೋಟರ್ ಮೂಲಕ ಹೊರ ಹಾಕಲು ಪ್ರಯತ್ನಿಸಿದ ವೇಳೆ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ನೀರು ಹೊರಹಾಕುತ್ತಿದ್ದ ನೇಪಾಳ ಮೂಲದ ಬಾಲಕ ಭರತ್ ಎಂಬುವರ ಪುತ್ರ ದಿನೇಶ್ ಸಾವನ್ನಪ್ಪಿದ್ದಾನೆ.

ಈ ಸುದ್ದಿಯನ್ನೂ ಓದಿ | Bengaluru Rain: ಧಾರಾಕಾರ ಮಳೆಗೆ ರಾಜಧಾನಿಯಲ್ಲಿ ಮೊದಲ ಬಲಿ, ಗೋಡೆ ಕುಸಿದು ಮಹಿಳೆ ಸಾವು

ಗೋಡೆ ಕುಸಿದು ಮೃತಪಟ್ಟ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ

Bengaluru Rain news

ಬೆಂಗಳೂರು: ರಾಜಧಾನಿಯಲ್ಲಿ ಭಾರಿ ಮಳೆಯಿಂದಾಗಿ (Bengaluru Rains) ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಈ ನಡುವೆ ವೈಟ್ ಫೀಲ್ಡ್​​ನ ಚನ್ನಸಂದ್ರದ ಸಮೀಪ ಕಟ್ಟಡದ ಗೋಡೆ ಕುಸಿದು ಮೃತಪಟ್ಟಿದ್ದ ಶಶಿಕಲಾ (35) ಅವರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಅವರು ಇದೀಗ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಬಿಬಿಎಂಪಿಯಿಂದ ಮೃತ ಮಹಿಳೆಗೆ ಪರಿಹಾರ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಳೆ ಹಾನಿ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಬೇಕಿತ್ತು. ಆದರೆ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿಟಿ ರೌಂಡ್ ರದ್ದುಗೊಳಿಸಿದ ಬಳಿಕ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಕಂಟ್ರೋಲ್ ರೂಮ್‌ಗೆ ತೆರಳಿ, ಮಳೆ ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಭಾರಿ ಮಳೆಯಿಂದ ಸಂಚಾರ ದಟ್ಟಣೆ ಆಗುತ್ತದೆ ಎಂದು ಸಿಟಿ ರೌಂಡ್ಸ್ ರದ್ದು ಮಾಡಿದ್ದೇವೆ. ಬೆಂಗಳೂರಿನಲ್ಲಿ ತಗ್ಗು ಪ್ರದೇಶಗಳನ್ನು ಗುರುತಿಸಿದ್ದೇವೆ, ರಾಜಕಾಲುವೆ ಕೆಲಸ ಪ್ರಗತಿಯಲ್ಲಿದೆ. 166 ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕೆಲಸ ನಡೆಯುತ್ತಿದೆ. ನಾಡಿದ್ದು ಇಡೀ ದಿನ ಬೆಂಗಳೂರು ನಗರ ಪ್ರದಕ್ಷಿಣೆ ಮಾಡುತ್ತೇವೆ. ಎಲ್ಲೆಲ್ಲಿ ಅನಾಹುತ ಆಗಿದೆ ಅಲ್ಲೆಲ್ಲ ನಾವು ಭೇಟಿ ನೀಡುತ್ತೇವೆ. ಜನರಿಂದ ಸಮಸ್ಯೆ ಆಲಿಸಿ ಪರಿಹಾರಕ್ಕೆ ಸೂಚನೆ ಕೊಡುತ್ತೇವೆ.

ಈ ಸುದ್ದಿಯನ್ನೂ ಓದಿ | Bengaluru Rains: ಭಾರಿ ಮಳೆಗೆ ಬೆಂಗಳೂರಿನ ಹಲವು ಬಡಾವಣೆಗಳಿಗೆ ಜಲ ದಿಗ್ಬಂಧನ; ಬೋಟ್‌ಗಳಲ್ಲಿ ಜನರ ಸ್ಥಳಾಂತರ

ವೈಟ್ ಫೀಲ್ಡ್‌ನಲ್ಲಿ ಗೋಡೆ ಕುಸಿದು ಮಹಿಳೆ ಮೃತಪಟ್ಟಿದ್ದಾರೆ. ಬಿಬಿಎಂಪಿಯಿಂದ ಮಹಿಳೆಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಇಂದು ಡಿಕೆ ಶಿವಕುಮಾರ್ ಕೆಲ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ನಾಡಿದ್ದು ನಾನು ಮತ್ತು ಸಚಿವರು ಇಡೀ ದಿನ ಬೆಂಗಳೂರು ನಗರ ಪ್ರದಕ್ಷಿಣೆ ಹಾಕುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.