Actor Vishal: ಸಾಯಿ ಧನ್ಶಿಕಾ ಜತೆ ಶೀಘ್ರದಲ್ಲೇ ಹಸೆಮಣೆಗೇರಲಿದ್ದಾರೆ ಕಾಲಿವುಡ್ ನಟ ವಿಶಾಲ್
Sai Dhanshika: ತಮಿಳು ಚಿತ್ರರಂಗದ ಜನಪ್ರಿಯ ನಟ ವಿಶಾಲ್ ಸದ್ಯದಲ್ಲೇ ಹಸೆಮಣೆಗೇರಲಿದ್ದಾರೆ. ಹೌದು, ಈ ಬಗ್ಗೆ ಸ್ವತಃ ಅವರೇ ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಕಾಲಿವುಡ್‌ನ ಜನಪ್ರಿಯ ನಟಿ ಸಾಯಿ ಧನ್ಶಿಕಾ ಅವರನ್ನು ವಿಶಾಲ್ ವರಿಸಲಿದ್ದಾರೆ.

ವಿಶಾಲ್ ಮತ್ತು ಸಾಯಿ ದನ್ಶಿಕಾ.

ಚೆನ್ನೈ: ತಮಿಳು ಚಿತ್ರರಂಗದ ಜನಪ್ರಿಯ ನಟ ವಿಶಾಲ್ (Actor Vishal) ಸದ್ಯದಲ್ಲೇ ಹಸೆಮಣೆಗೇರಲಿದ್ದಾರೆ. ಹೌದು, ಈ ಬಗ್ಗೆ ಸ್ವತಃ ಅವರೇ ಬಾಯ್ಬಿಟ್ಟಿದ್ದಾರೆ. ಇತ್ತೀಚೆಗೆ ವಿಶಾಲ್ ಅನಾರೋಗ್ಯಕ್ಕೀಡಾಗಿದ್ದ ಸುದ್ದಿ ಹೊರಬಂದು ಅಭಿಮಾನಿಗಳು ಆತಂಕಕ್ಕೀಡಾಗಿದ್ದರು. ಸದ್ಯ ವಿಶಾಲ್ ಗುಡ್‌ನ್ಯೂಸ್ ಹಂಚಿಕೊಂಡಿದ್ದು, ಫ್ಯಾನ್ಸ್ ನಿರಾಳವಾಗಿದ್ದಾರೆ. ವಿಶಾಲ್ ಮದುವೆಯಾಗುವ ಸುದ್ದಿಯನ್ನು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಕಾಲಿವುಡ್‌ನ ಜನಪ್ರಿಯ ನಟಿ ಸಾಯಿ ಧನ್ಶಿಕಾ (Sai Dhanshika) ಅವರನ್ನು ವಿಶಾಲ್ ವರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 47 ವರ್ಷದ ವಿಶಾಲ್ ಆಗಸ್ಟ್‌ನಲ್ಲಿ ಮದುವೆಯಾಗುವ ಸಾಧ್ಯತೆ ಇದೆ.
ಕಲಾವಿದರ ಸಂಘ ನಡಿಗರ್ ಸಂಗಂ ಕಟ್ಟಡ ನಿರ್ಮಾಣದ ಉಸ್ತುವಾರಿಯನ್ನು ವಿಶಾಲ್ ವಹಿಸಿಕೊಂಡಿದ್ದು, ಅದು ಪೂರ್ಣಗೊಂಡ ಬಳಿಕ ಮದುವೆಯಾಗುವುದಾಗಿ ತಿಳಿಸಿದ್ದರು. ಸದ್ಯ ಈ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇತ್ತೀಚೆಗೆ ವಿಶಾಲ್ ‘ʼಹೌದು, ನನಗೆ ವ್ಯಕ್ತಿಯೊಬ್ಬರು ಸಿಕ್ಕಿದ್ದಾರೆ. ನಮ್ಮದು ಲವ್ ಮ್ಯಾರೇಜ್ ಆಗಿರಲಿದೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡುತ್ತೇನೆʼʼ ಎಂದು ಹೇಳಿದ್ದು, ಅಧಿಕೃತ ಘೋಷಣೆಗೆ ಫ್ಯಾನ್ಸ್ ಕಾಯುತ್ತಿದ್ದಾರೆ. ಅದಾಗ್ಯೂ ಈ ವೇಳೆ ಅವರು ವಧು ಯಾರೆಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಮಾಧ್ಯಮಗಳೆಲ್ಲ ವಿಶಾಲ್ ನಟಿ ಸಾಯಿ ಧನ್ಶಿಕಾ ಕೈಹಿಡಿಯಲಿದ್ದಾರೆ ಎಂದು ವರದಿ ಮಾಡಿವೆ.
ಈ ಸುದ್ದಿಯನ್ನೂ ಓದಿ: Actor Vishal: ಅನಾರೋಗ್ಯದ ಹಿನ್ನೆಲೆ ತುಳುನಾಡಿನ ದೈವದ ಮೊರೆ ಹೋದ ತಮಿಳು ನಟ ವಿಶಾಲ್
ಸಾಯಿ ಧನ್ಶಿಕಾ ನಟಿಸಿರುವ ಹೊಸ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ವಿಶಾಲ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಈ ವೇಳೆ ಅವರು ತಮ್ಮ ಪ್ರೀತಿ ಮತ್ತು ಮದುವೆ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಆಗಸ್ಟ್‌ನಲ್ಲಿ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಗಾಳಿಸುದ್ದಿಯೂ ಹರಡಿದೆ.
ಕೆಲವು ದಿನಗಳ ಹಿಂದೆ ವಿಶಾಲ್ ಮತ್ತು ಸಾಯಿ ದನ್ಶಿಕಾ ಭೇಟಿಯಾಗಿದ್ದು, ಬಳಿಕ ಈ ಪರಿಚಯ ಪ್ರೀತಿಯಾಗಿ ಬದಲಾಗಿದೆ. ಇವರ ನಿಶ್ಚಿತಾರ್ಥ ಶೀಘ್ರದಲ್ಲಿಯೇ ಅದ್ಧೂರಿಯಾಗಿ ನೆರವೇರಲಿದೆ.
12 ವರ್ಷಗಳ ಅಂತರ
ಹಾಗೆ ನೋಡಿದರೆ ಈ ಜೋಡಿಯ ಮಧ್ಯೆ 12 ವರ್ಷಗಳ ಅಂತರವಿದೆ. ವಿಶಾಲ್‌ಗೆ ಈಗ 47 ವರ್ಷಾದರೆ ಸಾಯಿ ದನ್ಶಿಕಾಗೆ 35 ವರ್ಷ ವಯಸ್ಸು. ಕೆಲವು ದಿನಗಳ ಹಿಂದೆ ʼಮದ ಗಜ ರಾಜʼ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದ ವೇಳೆ ವಿಶಾಲ್ ತೀವ್ರ ಅಸ್ವಸ್ಥರಾಗಿದ್ದುದು ಕಂಡು ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದರು. ಅವರ ಆರೋಗ್ಯ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದೀಗ ಅವರು ಮದುವೆಯಾಗುತ್ತಿರುವ ಸುದ್ದಿ ಕೇಳಿ ಫ್ಯಾನ್ ಖುಷಿಯಾಗಿದ್ದಾರೆ.
ಕನ್ನಡ ಚಿತ್ರದಲ್ಲೂ ನಟನೆ
ತಮಿಳುನಾಡು ಮೂಲದ ಸಾಯಿ ದನ್ಶಿಕಾ ತಮಿಳು ಜತೆಗೆ ಕನ್ನಡ, ತೆಲುಗು, ಮಲಯಾಳಂ ಚಿತ್ರದಲ್ಲಿಯೂ ನಟಿಸಿದ್ದಾರೆ. 2009ರಲ್ಲಿ ತೆರೆಕಂಡ ʼಕೆಂಪʼ ಮತ್ತು 2019ರಲ್ಲಿ ರಿಲೀಸ್ ಆದ ʼಉದ್ಘರ್ಷʼ ಕನ್ನಡ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
ಇತ್ತ ವಿಶಾಲ್ ಸದ್ಯ ʼತುಪ್ಪರಿವಾಲನ್ 2ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟಿಸುವ ಜತೆಗೆ ನಿರ್ದೇಶನದ ಜವಾಬ್ದಾರಿಯೂ ಇವರದ್ದೇ. ಈ ಮೂಲಕ ನಿರ್ದೇಶಕರಾಗಿಯೂ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.