ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rohit Sharma: ಕೊಟ್ಟ ಮಾತಿನಂತೆ ಡ್ರೀಮ್‌ 11 ವಿಜೇತನಿಗೆ ತನ್ನ ನೆಚ್ಚಿನ ಲ್ಯಾಂಬೋರ್ಗಿನಿ ಕಾರು ನೀಡಿದ ರೋಹಿತ್‌!

ರೋಹಿತ್‌ ಶರ್ಮ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಕಳೆದ ವರ್ಷ ವಿಶ್ವಕಪ್‌ ಗೆದ್ದ ಬಳಿಕ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಸದ್ಯ ಅವರು ಭಾರತ ಏಕದಿನ ಕ್ರಿಕೆಟ್‌ನಲ್ಲಿ ಮತ್ತು ಐಪಿಎಲ್‌ನಲ್ಲಿ ಮಾತ್ರ ತಮ್ಮ ಆಟ ಮುಂದುವರಿಸಲಿದ್ದಾರೆ.

ಡ್ರೀಮ್‌ 11 ವಿಜೇತನಿಗೆ ತನ್ನ ಲ್ಯಾಂಬೋರ್ಗಿನಿ ಕಾರು ಕೊಟ್ಟ ರೋಹಿತ್‌

Profile Abhilash BC May 19, 2025 7:30 PM

ಮುಂಬಯಿ: ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅವರು ಕೊಟ್ಟ ಮಾತಿನಂತೆ ತಮ್ಮ ಭಾವನಾತ್ಮಕ ಲ್ಯಾಂಬೋರ್ಗಿನಿ ಉರುಸ್ ಕಾರನ್ನು(Rohit Sharma blue Lamborghini) ಡ್ರೀಮ್‌ 11(Dream11 Winner) ಫ್ಯಾಂಟಸಿ ಕ್ರಿಕೆಟ್ ಸ್ಪರ್ಧೆಯ ವಿಜೇತರಿಗೆ ನೀಡಿದ್ದಾರೆ. ಅದೃಷ್ಟಶಾಲಿ ವಿಜೇತರಿಗೆ ರೋಹಿತ್‌ ಕಾರಿನ ಕೀಲಿಯನ್ನು ಹಸ್ತಾಂತರಿಸುತ್ತಿರುವ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

2025ರ ಐಪಿಎಲ್‌ ಟೂರ್ನಿ ಆರಂಭಕ್ಕೂ ಮುನ್ನವೇ ರೋಹಿತ್, Dream11 ಜಾಹೀರಾತು ಅಭಿಯಾನದಲ್ಲಿ ಸ್ಪರ್ಧೆಯ ವಿಜೇತರಿಗೆ ತನ್ನ ನೆಚ್ಚಿನ ಕಾರನ್ನು ನೀಡುವುದಾಗಿ ಭಾವನಾತ್ಮವಾಗಿ ಭರವಸೆ ನೀಡಿದ್ದರು. ಈ ಜಾಹೀರಾತು ಭಾರೀ ವೈರಲ್ ಆಗಿತ್ತು. ಸ್ಪರ್ಧೆಯ ವಿಜೇತರು ರೋಹಿತ್ ಅವರ ನಿಖರವಾದ ಕಾರನ್ನು ಪಡೆಯುತ್ತಾರೋ ಅಥವಾ ಇನ್ನೊಂದು ಲ್ಯಾಂಬೋರ್ಗಿನಿ ಉರುಸ್ ಅನ್ನು ಪಡೆಯುತ್ತಾರೋ ಎಂಬ ಕುತೂಹಲ ಮೂಡಿತ್ತು. ಆದರೆ ರೋಹಿತ್‌ ತಮ್ಮ ಕಾರನ್ನೇ ನೀಡಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರಿನ ಬೆಲೆ ಪ್ರಸ್ತುತ 4 ಕೋಟಿ ರೂ.ಗಿಂತಲೂ ಅಧಿಕವಾಗಿದೆ.

'264' ನೋಂದಣಿ ಸಂಖ್ಯೆಯನ್ನು ಹೊಂದಿರುವ ರೋಹಿತ್ ಅವರ ಲ್ಯಾಂಬೋರ್ಗಿನಿ ಕಾರು, ಬಹಳ ಹಿಂದಿನಿಂದಲೂ ಅವರಿಗೆ ಭಾವನಾತ್ಮಕ ಮೌಲ್ಯವನ್ನು ಹೊಂದಿದೆ. ಇದು ಅವು ಏಕದಿನ ಪಂದ್ಯಗಳಲ್ಲಿ ಬಾರಿಸಿದ 264 ರನ್‌ಗಳ ವಿಶ್ವ ದಾಖಲೆಯ ನೆನಪಿಗಾಗಿ ಈ ನಂಬರನ್ನು ತಮ್ಮ ಕಾರಿಗೆ ನೋಂದಣಿ ಮಾಡಿಸಿಕೊಂಡಿದ್ದರು. ಹಲವು ಬಾರಿ ರೋಹಿತ್‌ ಈ ಕಾರಿನಲ್ಲಿ ಮುಂಬೈನ ಹಲವು ಬೀದಿಗಳಲ್ಲಿ ಸುತ್ತಾಡಿದ ವಿಡಿಯೊಗಳು ಕೂಡ ವೈರಲ್‌ ಆಗಿತ್ತು. ಇದೇ ಕಾರಿನಲ್ಲಿ ಅತಿ ವೇಗದ ಚಾಲನೆ ಮಾಡಿ ಮೂರು ಬಾರಿ ದಂಡ ಕೂಡ ಕಟ್ಟಿಸಿಕೊಂಡಿದ್ದರು. ಇದೀಗ ತಮ್ಮ ನೆಚ್ಚಿನ ಕಾರು ಫ್ಯಾಂಟಸಿ ಕ್ರಿಕೆಟ್ ಸ್ಪರ್ಧೆಯ ವಿಜೇತನ ಪಾಲಾಗಿದೆ.

ಇದನ್ನೂ ಓದಿ IPL 2025: ಪ್ಲೇ ಆಫ್‌ ಪಂದ್ಯಕ್ಕೆ ಆರ್‌ಸಿಬಿ ಸೇರಿದ ಜಿಂಬಾಬ್ವೆಯ ಘಾತಕ ವೇಗಿ

ರೋಹಿತ್‌ ಶರ್ಮ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಕಳೆದ ವರ್ಷ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಸದ್ಯ ಅವರು ಭಾರತ ಏಕದಿನ ಕ್ರಿಕೆಟ್‌ನಲ್ಲಿ ಮತ್ತು ಐಪಿಎಲ್‌ನಲ್ಲಿ ಮಾತ್ರ ಆಟ ಮುಂದುವರಿಸಲಿದ್ದಾರೆ.