ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharma Keerthiraj: ರಾಗಿಣಿ ಜೊತೆ ಹೊಸ ಸಿನಿಮಾ ಒಪ್ಪಿಕೊಂಡ ಧರ್ಮ ಕೀರ್ತಿರಾಜ್: ಯಾವುದು?

ಈಗಾಗಲೇ ಧರ್ಮಾ ಅವರು ತಮ್ಮ ಮುಂಬರುವ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆಇದರ ಜೊತೆಗೆ ತುಪ್ಪದ ಬೆಡಗಿ ರಾಗಿಣಿ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಧರ್ಮ ಕೀರ್ತಿರಾಜ್ ಮತ್ತು ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹೊಸ ಸಿನಿಮಾಗೆ ಮುಹೂರ್ತ ಮಾಡಲಾಗಿದೆ.

ರಾಗಿಣಿ ಜೊತೆ ಹೊಸ ಸಿನಿಮಾ ಒಪ್ಪಿಕೊಂಡ ಧರ್ಮ ಕೀರ್ತಿರಾಜ್: ಯಾವುದು?

Dharma Keerthiraj And Ragini Dwivedi

Profile Vinay Bhat May 2, 2025 7:25 AM

ಬಿಗ್ ಬಾಸ್ ಕನ್ನಡ ಸೀಸನ್ 11 ಧರ್ಮ ಕೀರ್ತಿರಾಜ್​ (Dharma Keerthiraj) ದೊಡ್ಡ ಬ್ರೇಕ್​ಗಾಗಿ ಕಾಯುತ್ತಿದ್ದಾರೆ. ಕನ್ನಡ ಚಿತ್ರರಂಗದ ಪ್ರಸಿದ್ಧ ಖಳನಟ ಕೀರ್ತಿರಾಜ್ ಮಗನಾದ ಧರ್ಮ ಕೀರ್ತಿರಾಜ್ ನವಗ್ರಹ ಸಿನಿಮಾ ಮೂಲಕ ಗಮನ ಸೆಳೆದರು. ನಂತರ ಒಲವೇ ವಿಸ್ಮಯ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಬಳಿಕ ಹಲವಾರು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಅವು ಹಿಟ್ ಆಗಲಿಲ್ಲ. ಈಗ ಬಿಗ್ ಬಾಸ್​ಗೆ ಹೋಗಿ ಬಂದ ಬಳಿಕ ಇವರಿಗೆ ಸಾಲು ಸಾಲು ಆಫರ್​ಗಳು ಬರುತ್ತಿವೆ.

ಈಗಾಗಲೇ ಧರ್ಮಾ ಅವರು ತಮ್ಮ ಮುಂಬರುವ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಟಾಲಿವುಡ್​ಗೆ ಗ್ರ್ಯಾಂಡ್ ಆಗಿ ಕಾಲಿಟ್ಟಿರುವ ಧರ್ಮ ಅವರ ಹೊಸ ಚಿತ್ರದ ಹೆಸರು ಬ್ಲಡ್ ರೋಸಸ್ ಸದ್ಯದಲ್ಲೇ ರಿಲೀಸ್ ಆಗಲಿದೆ. ಇದರ ಜೊತೆಗೆ ತುಪ್ಪದ ಬೆಡಗಿ ರಾಗಿಣಿ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಧರ್ಮ ಕೀರ್ತಿರಾಜ್ ಮತ್ತು ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹೊಸ ಸಿನಿಮಾಗೆ ಮುಹೂರ್ತ ಮಾಡಲಾಗಿದೆ.

ಈ ಸಿನಿಮಾಗೆ ಸಿಂಧೂರಿ ಎಂದು ಶೀರ್ಷಿಕೆ ಇಡಲಾಗಿದೆ. ಎಸ್. ರಮೇಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಶಂಕರ್ ಕೋನಮಾನಹಳ್ಳಿ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಮೇ 1ರಿಂದ 45 ದಿನಗಳ ಕಾಲ ಸಕಲೇಶಪುರ ಸೇರಿದಂತೆ ಹಲವೆಡೆ ಚಿತ್ರದ ಶೂಟಿಂಗ್ ನಡೆಯಲಿದೆ. ಸಿಂಧೂರಿ ಚಿತ್ರ ಕಾಲ್ಪನಿಕ ಕಥೆಯಾಗಿದ್ದು, ಮರ್ಡರ್ ಮಿಸ್ಟ್ರಿಯಿಂದ ಕೂಡಿರಲಿದೆ. ಇದರಲ್ಲಿ ಧರ್ಮಗೆ ವಿಭಿನ್ನವಾಗಿರೋ ಪಾತ್ರ ಸಿಕ್ಕಿದೆ. ಈ ಚಿತ್ರದಲ್ಲಿ ಧರ್ಮಗೆ ಜೋಡಿಯಾಗಿ ರಾಗಿಣಿ ನಟಿಸುತ್ತಿಲ್ಲ. ಬದಲಾಗಿ ಧರ್ಮಗೆ ಠಕ್ಕರ್ ಕೊಡೋ ಪಾತ್ರದಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ತಿರುವು ಕೊಡುವ ಪವರ್‌ಫುರ್‌ ಪಾತ್ರದಲ್ಲಿ ರಾಗಿಣಿ ನಟಿಸಲಿದ್ದಾರೆ.

Lawyer Jagadish: 93 ದಿನಗಳ ಬಳಿಕ ಜೈಲಿನಿಂದ ಹೊರಬಂದು ಹೊಸ ಪೋಸ್ಟ್ ಹಂಚಿಕೊಂಡು ಲಾಯರ್ ಜಗದೀಶ್

ನಿರ್ಮಾಪಕ ಎಸ್. ರಮೇಶ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಒಂದಷ್ಟು ವರ್ಷಗಳ ಮೊದಲು ವಿಕ್ಕಿ ಎಂಬ ಸಿನಿಮಾ ಮಾಡಿದ್ದೆ. ಆ ಚಿತ್ರದ ನಿರ್ದೇಶಕರು ಮೋಸ ಮಾಡಿದರು. ಮುಂದೆ ಸಿನಿಮಾ ಮಾಡಬಾರದು ಅಂತ ನಿರ್ಧರಿಸಿದ್ದೆ. ಆದರೆ ಶಂಕರ್ ಬಂದು ಸಿಂಧೂರಿ ಕಥೆ ಹೇಳಿದರು. ದೇವರ ಆಶೀರ್ವಾದದಿಂದ ಇಂದು ಸಿನಿಮಾ ಆರಂಭಿಸಿದ್ದೇವೆ’ ಎಂದು ಅವರು ಹೇಳಿದರು.