Roopesh Shetty: ನಿಜ ಜೀವನದಲ್ಲಿ ಹೀರೋ ಆದ ರೂಪೇಶ್ ಶೆಟ್ಟಿ: ನುಡಿದಂತೆ ನಡೆದ ಬಿಗ್ ಬಾಸ್ ವಿನ್ನರ್
ರೂಪೇಶ್ ಶೆಟ್ಟಿ ಅವರ ಕಳೆದ ಜನ್ಮದಿನದಂದು ಒಂದು ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ಕಷ್ಟದಲ್ಲಿದ್ದ ಬಡ ಕುಟುಂಬವೊಂದಕ್ಕೆ ರೂಪೇಶ್ ಶೆಟ್ಟಿ ಮನೆ ಕೊಟ್ಟಿದ್ದಾರೆ. ಈ ಮನೆಯ ಗೃಹಪ್ರವೇಶ ಕೂಡ ಆಗಿದ್ದು, ಮನೆಗೆ ‘ಪ್ರೇಮ ನಿಲಯ’ ಎಂದು ಹೆಸರಿಟ್ಟಿದ್ದಾರೆ.

Roopesh Shetty

ಕನ್ನಡ ಚಿತ್ರರಂಗದ ಭರವಸೆಯ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ಇದೀಗ ಎಲ್ಲರೂ ಮೆಚ್ಚುವ ಕೆಲಸ ಮಾಡಿ ಸುದ್ದಿಯಲ್ಲಿದ್ದಾರೆ. ತುಂಬ ಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ನೆರವಾಗಿರುವ ರೂಪೇಶ್, ನಿಜ ಜೀವನದಲ್ಲಿಯೂ ಹೀರೋ ಆಗಿದ್ದಾರೆ. ಈ ಹಿಂದಿನ ಜನ್ಮದಿನದಂದು ಅವರು ಒಂದು ಬಡಕುಟುಂಬಕ್ಕೆ ಮನೆ ಕಟ್ಟಿ ಕೊಡೋದಾಗಿ ಮಾತು ಕೊಟ್ಟಿದ್ದರು. ಅದರಂತೆ ಈಗ ಅವರು ಮನೆ ಕಟ್ಟಿಕೊಟ್ಟಿದ್ದು, ಗೃಹ ಪ್ರವೇಶ ಕೂಡ ಆಗಿದೆ.
ರೂಪೇಶ್ ಶೆಟ್ಟಿ ಅವರ ಕಳೆದ ಜನ್ಮದಿನದಂದು ಒಂದು ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ಕಷ್ಟದಲ್ಲಿದ್ದ ಬಡ ಕುಟುಂಬವೊಂದಕ್ಕೆ ರೂಪೇಶ್ ಶೆಟ್ಟಿ ಮನೆ ಕೊಟ್ಟಿದ್ದಾರೆ. ಈ ಮನೆಯ ಗೃಹಪ್ರವೇಶ ಕೂಡ ಆಗಿದ್ದು, ಮನೆಗೆ ‘ಪ್ರೇಮ ನಿಲಯ’ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ರಿಯಲ್ ಲೈಫ್‌ನಲ್ಲಿಯೂ ರೂಪೇಶ್ ಶೆಟ್ಟಿ ಹೀರೋ ಆಗಿದ್ದಾರೆ.
ರೂಪೇಶ್ ಶೆಟ್ಟಿ "ನೆಮ್ಮದಿ" ಅನ್ನುವ ಒಂದು ಚಾರಿಟೇಬಲ್ ಟ್ರಸ್ಟ್ ಹುಟ್ಟುಹಾಕಿದ್ದಾರೆ. ಈ ನೆಮ್ಮದಿ ಸಂಸ್ಥೆ ಮೂಲಕ ಮತ್ತಷ್ಟು ಒಳ್ಳೆ ಕೆಲಸ ಮಾಡೋ ಉದ್ದೇಶ ಇದೆ ಎಂದು ಹೇಳಿದ್ದಾರೆ. ಈ ಒಂದು ಸಂಸ್ಥೆಯನ್ನ ಹೊಸ ಮನೆಯ ಗೃಹಪ್ರವೇಶದ ದಿನವೇ ಉದ್ಘಾಟಿಸಿದ್ದಾರೆ. ಹಾಗೆ ಹೊಸ ಮನೆಯ ಅಂಗಳದಲ್ಲಿಯೇ ನಿಂತುಕೊಂಡು ಈ ವಿಷಯ ಹೇಳಿಕೊಂಡಿದ್ದಾರೆ.
ರೂಪೇಶ್ ಶೆಟ್ಟಿ ಹೇಳಿದ್ದೇನು?:
‘‘ತುಂಬ ಕಷ್ಟದಲ್ಲಿರುವ ಕುಟುಂಬಕ್ಕೆ ಮನೆ ಕಟ್ಟಿಕೊಡ್ತಿದೀನಿ ಅಂತ ನಾನು ಒಂದು ಮಾತು ಕೊಟ್ಟಿದ್ದೆ. ಈಗ ಆ ಮನೆಯ ಕೆಲಸ ಮುಗಿದಿದ್ದು, ಗೃಹ ಪ್ರವೇಶ ನಡೆಯುತ್ತಿದೆ’’ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಇನ್ನು ನೆಮ್ಮದಿ ಎನ್ನುವ ಚಾರಿಟೇಬಲ್ ಟ್ರಸ್ಟ್ ಕೂಡ ಶುರು ಮಾಡಿದ್ದಾರೆ. ಈ ಬಗ್ಗೆ ಅವರು ಹೊಸ ಮನೆಯ ವಿಡಿಯೋ ಮಾಡಿದ್ದಾರೆ. ಆ ಮನೆಯವರು ರೂಪೇಶ್ ಶೆಟ್ಟಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಈ ವಿಡಿಯೋಗೆ, ‘‘ಒಂದು ಬಡ ಕುಟುಂಬಕ್ಕೆ ನಮ್ಮ ತಂಡದಿಂದ ಮನೆ ಕಟ್ಟಿ ಕೊಡುವುದಾಗಿ ಹೇಳಿದ್ದೆ, ಈಗ ಆ ಕೆಲಸ ಪೂರ್ಣಗೊಂಡಿದೆ. ಗೃಹ ಪ್ರವೇಶವೂ ನೆರವೇರಿದೆ. ಇನ್ನಷ್ಟು ಇಂತಹ ಕೆಲಸಗಳನ್ನು ಮಾಡುವ ಉದ್ದೇಶದಿಂದ ನೆಮ್ಮದಿ ಎಂಬ ಚಾರಿಟಬಲ್ ಟ್ರಸ್ಟ್ ಕೂಡ ಶುರು ಮಾಡುತ್ತಿದ್ದೇವೆ. ನಮ್ಮ ಈ ಕೆಲಸದಲ್ಲಿ ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ಸದಾ ಇರಲಿ’’ ಎಂದು ರೂಪೇಶ್ ಶೆಟ್ಟಿ ಕ್ಯಾಪ್ಶನ್ ಕೊಟ್ಟಿದ್ದಾರೆ.
ಅಂದಹಾಗೆ ಮಂಗಳೂರು ಭಾಗದಲ್ಲಿ ಈ ಮನೆ ನಿರ್ಮಾಣ ಆಗಿದೆ. ಅಡುಗೆ ಮನೆ, ಹಾಲ್, ರೂಮ್ ಎಂದು ಈ ಮನೆ ಸಾಕಷ್ಟು ಭವ್ಯವಾಗಿದೆ. ಮನೆಯ ಸಂಪೂರ್ಣ ಕೆಲಸ ಮುಗಿದಿದ್ದು, ಪೇಂಟಿಂಗ್ ಕೂಡ ಆಗಿದೆ. ಇದಕ್ಕೆ ಹಲವರು, ನಿಮ್ಮ ಫ್ಯಾನ್ ಆಗಿರುವುದಕ್ಕೆ ಹೆಮ್ಮೆ ಆಗುತ್ತಿದೆ. ಇರುವುದೊಂದು ಹೃದಯವ ಅದೆಷ್ಟು ಬಾರಿ ಗೆಲ್ಲುವಿರಿ? ಸಿನಿಮಾದಲ್ಲಿ ಕಲಾವಿದನಾಗಿ, ನಿಜಜೀವನದಿ ಹೀರೋ ಆಗೋದು ಹೀಗೆ. ನೀವು ನಿಜವಾದ ಹೀರೋ ಎಂದು ಕಾಮೆಂಟ್‌ಗಳ ಮೂಲಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Bhagya Lakshmi Serial: ಇನ್ನೂ ಸಿಕ್ಕಿಲ್ಲ ಕೆಲಸ: ಬೀದಿಯಲ್ಲೇ ಕೂಗಾಡಿದ ತಾಂಡವ್