BSF Soldier: ಆಕಸ್ಮಿಕ ಗಡಿ ದಾಟಿದ ಬಿಎಸ್‌ಎಫ್ ಯೋಧನ ಬಿಡುಗಡೆ ಮಾಡಿದ ಪಾಕ್
ಬುಧವಾರ(ಮೇ 14) ಸುಮಾರು 10.30 ಗಂಟೆಗೆ ಅಮೃತಸರದ ಅಟ್ಟಾರಿ ಚೆಕ್ ಪೋಸ್ಟ್ ಮೂಲಕ ಪಿ.ಕೆ. ಸಿಂಗ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. ಹಸ್ತಾಂತರವನ್ನು ಶಾಂತಿಯುತವಾಗಿ ಮತ್ತು ಸ್ಥಾಪಿತ ಪ್ರೋಟೋಕಾಲ್‌ಗಳಿಗೆ ಅನುಸಾರವಾಗಿ ನಡೆಸಲಾಯಿತು ಎಂದು ಗಡಿ ಭದ್ರತಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.


ನವದೆಹಲಿ: ಕಳೆದ ತಿಂಗಳು ಪಂಜಾಬ್ ಬಳಿ ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನದ ಸೇನೆ ಸೆರೆ ಹಿಡಿದಿದ್ದ ಭಾರತದ ಗಡಿ ಭದ್ರತಾ ಪಡೆಯ (BSF Soldier) ಯೋಧ ಪೂರ್ಣಮ್ ಕುಮಾರ್ ಶಾ(Purnam Kumar Shaw) ಅವರನ್ನು ಬುಧವಾರ ಅಟ್ಟಾರಿಯ ಚೆಕ್ ಪೋಸ್ಟ್‌ನಲ್ಲಿ(Attari–Wagah border) ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಯೋಧನ ಬಿಡುಗಡೆಗೆ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ನಡುವೆ ಕಳೆದೊಂದು ವಾರದಿಂದ ಮಾತುಕತೆ ನಡೆಯುತ್ತಿತ್ತು. ಇದೀಗ ಪಾಕ್ ಸೇನೆ ಅವರನ್ನು ಬಿಡಿಗಡೆ ಮಾಡಿದೆ.
‘182ನೇ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಪಿ.ಕೆ. ಸಿಂಗ್ ರೈತರ ಜತೆಗೆ ವಿಶ್ರಾಂತಿಗಾಗಿ ನೆರಳನ್ನು ಅರಸಿ ಹೊರಟಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ್ದರು. ಅವರನ್ನು ಪಾಕ್ ಸೇನೆ ಫಿರೋಜ್‌ಪುರ ಬಳಿ ವಶಕ್ಕೆ ಪಡೆದಿತ್ತು. ಏಪ್ರಿಲ್ 23ರಂದು ಅವರ ಬಂಧನವಾಗಿತ್ತು. ಮೂರು ವಾರಗಳ ಕಾಲ ಅವರು ಪಾಕ್ ಬಂಧನದಲ್ಲಿದ್ದರು.
Today BSF Jawan Purnam Kumar Shaw, who had been in the custody of Pakistan Rangers since 23 April 2025, was handed over to India: BSF
— ANI (@ANI) May 14, 2025
(Pic Source: BSF) pic.twitter.com/TVzagO0AhK
ಬುಧವಾರ(ಮೇ 14) ಬೆಳಗ್ಗೆ10.30ರ ವೇಳೆ ಅಮೃತಸರದ ಅಟ್ಟಾರಿ ಚೆಕ್ ಪೋಸ್ಟ್ ಮೂಲಕ ಪಿ.ಕೆ. ಸಿಂಗ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. ಹಸ್ತಾಂತರವನ್ನು ಶಾಂತಿಯುತವಾಗಿ ಮತ್ತು ಸ್ಥಾಪಿತ ಪ್ರೋಟೋಕಾಲ್‌ಗಳಿಗೆ ಅನುಸಾರವಾಗಿ ನಡೆಸಲಾಯಿತು ಎಂದು ಗಡಿ ಭದ್ರತಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.
3 ಲಷ್ಕರ್ ಉಗ್ರರ ಹತ್ಯೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆಗಳು ಮಂಗಳವಾರದಂದು ಮೂವರನ್ನು ಉಗ್ರರನ್ನು ಹತ್ಯೆಗೈ ಮಾಡಿತ್ತು. ಹತ್ಯೆಯಾದವರ ಪೈಕಿ ಲಷ್ಕರ್ ಎ ತೊಯ್ಬಾ ಕಮಾಂಡರ್ ಶಾಹಿದ್ ಕುಟ್ಟಾಯ್ ಕೂಡಾ ಸೇರಿದ್ದಾನೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ಉಗ್ರರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಆರಂಭಿಸಿದ್ದವು. ಆ ವೇಳೆ ಉಗ್ರರು ಸೇನಾ ಪಡೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿಗೆ ಯತ್ನಿಸಿದ್ದರು. ಆಗ ಸೇನೆ ನಡೆಸಿದ ಪ್ರತಿದಾಳಿ ವೇಳೆ ಮೂವರು ಉಗ್ರರು ಹತರಾಗಿದ್ದರು.