ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Golden Temple: ಪಾಕ್ ದಾಳಿಯಿಂದ ಅಮೃತಸರದ ಸ್ವರ್ಣ ಮಂದಿರವನ್ನು ಭಾರತೀಯ ಸೇನೆ ರಕ್ಷಿಸಿದ್ದು ಹೇಗೆ?

ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಮೇ 7-8ರ ರಾತ್ರಿ ಪಾಕಿಸ್ತಾನವು ಅಮೃತಸರದ ಗೋಲ್ಡನ್‌ ಟೆಂಪಲ್‌ ಅನ್ನು ಗುರಿಯಾಗಿಸಿ ದಾಳಿ ನಡೆಸಲು ಯತ್ನಿಸಿತು. ಇದಕ್ಕೂ ಮುನ್ನ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳನ್ನು ನಿಖರವಾದ ದಾಳಿಗಳ ಮೂಲಕ ನಾಶಪಡಿಸಿತ್ತು.

ಪಾಕ್ ಕೆಂಗಣಿನಿಂದ ಗೋಲ್ಡನ್ ಟೆಂಪಲ್ ರಕ್ಷಿಸಿದ ಸೇನೆ

ಗೋಲ್ಡನ್‌ ಟೆಂಪಲ್‌

Profile Sushmitha Jain May 20, 2025 6:04 PM

ಚಂಡೀಗಢ: ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದಂತೆ ಮೇ 7-8ರ ರಾತ್ರಿ ಪಾಕಿಸ್ತಾನವು (Pakistan) ಅಮೃತಸರದ (Amritsar) ಗೋಲ್ಡನ್‌ ಟೆಂಪಲ್‌ (Golden Temple) ಗುರಿಯಾಗಿಸಿ ದಾಳಿ ನಡೆಸಲು ಯತ್ನಿಸಿತು. ಇದಕ್ಕೂ ಮುನ್ನ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (PoK) ಭಯೋತ್ಪಾದಕ ಶಿಬಿರಗಳನ್ನು ನಿಖರವಾದ ದಾಳಿಗಳ ಮೂಲಕ ನಾಶಪಡಿಸಿತ್ತು. ಪಾಕಿಸ್ತಾನ ಡ್ರೋನ್‌ (Drones) ಮತ್ತು ಕ್ಷಿಪಣಿಗಳ ಮೂಲಕ ದಾಳಿಗೆ ಯತ್ನಿಸಿದ್ದು, ಭಾರತೀಯ ಸೇನೆಯ (Indian Military) ಸಂಘಟಿತ ವಾಯು ರಕ್ಷಣಾ ವ್ಯವಸ್ಥೆಯು ಆ ದಾಳಿಯನ್ನು ತಡೆಗಟ್ಟಿತ್ತು.

ಪಾಕಿಸ್ತಾನದ ದಾಳಿಯ ಗುರಿ ಏನಾಗಿತ್ತು?

ಸೇನೆಯ ಪ್ರಕಾರ, ಮೇ 8ರ ತಡರಾತ್ರಿ ಪಾಕಿಸ್ತಾನ ದೊಡ್ಡ ಪ್ರಮಾಣದಲ್ಲಿ ದಾಳಿಯನ್ನು ಪ್ರಾರಂಭಿಸಿತು. ಇದರಲ್ಲಿ ಗೋಲ್ಡನ್ ಟೆಂಪಲ್ ಪ್ರಮುಖ ಗುರಿಯಾಗಿತ್ತು. "ಪಾಕಿಸ್ತಾನ ಸೇನೆಗೆ ಯಾವುದೇ ಕಾನೂನುಬದ್ಧ ಗುರಿಗಳಿಲ್ಲ ಎಂದು ತಿಳಿದಿದ್ದರಿಂದ, ಅವರು ಭಾರತೀಯ ಸೇನಾ ನೆಲೆಗಳು, ಸಾರ್ವಜನಿಕ ಸ್ಥಳಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಬಹುದು ಎಂದು ನಾವು ಊಹಿಸಿದ್ದೆವು. ಇವುಗಳಲ್ಲಿ ಗೋಲ್ಡನ್ ಟೆಂಪಲ್ ಅತ್ಯಂತ ಪ್ರಮುಖ ಗುರಿ ಎಂದು ಕಂಡುಬಂದಿತ್ತು. ವಿಶ್ವಾಸಾರ್ಹ ಗುಪ್ತಚರ ಮಾಹಿತಿಯೂ ನಮಗೆ ಸಿಕ್ಕಿತು, ಇದನ್ನು ನಾವು ಮೊದಲೇ ಯೋಜಿಸಿದ್ದೆವು" ಎಂದು ಅಮೃತಸರದಲ್ಲಿ ಇನ್‌ಫೆಂಟ್ರಿ ಡಿವಿಷನ್‌ನ ಕಮಾಂಡಿಂಗ್ ಮಾಡುತ್ತಿರುವ ಮೇಜರ್ ಜನರಲ್ ಕಾರ್ತಿಕ್ ಸಿ ಶೇಷಾದ್ರಿ ತಿಳಿಸಿದ್ದಾರೆ.

ಭಾರತೀಯ ಸೇನೆಯು ಬಳಸಿದ ಶಸ್ತ್ರಾಸ್ತ್ರ

ಭಾರತೀಯ ಸೇನೆಯ ವಾಯು ರಕ್ಷಣಾ ವ್ಯವಸ್ಥೆಗಳು ಪಾಕಿಸ್ತಾನದ ದಾಳಿಯನ್ನು ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವು. ಆಕಾಶ್ ಕ್ಷಿಪಣಿ ವ್ಯವಸ್ಥೆ ಮತ್ತು ಎಲ್-70 ವಾಯು ರಕ್ಷಣಾ ಕ್ಷಿಪಣಿಗಳು ಸೇರಿದಂತೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಅಮೃತಸರದ ಸ್ವರ್ಣ ಮಂದಿರವನ್ನು ಮತ್ತು ಪಂಜಾಬ್‌ನ ಇತರ ನಗರಗಳನ್ನು ಪಾಕಿಸ್ತಾನದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ಹೇಗೆ ರಕ್ಷಿಸಿದವು ಎಂಬುದನ್ನು ಸೇನೆ ತಿಳಿಸಿತು.

ಆಕಾಶ್ ಕ್ಷಿಪಣಿ ವ್ಯವಸ್ಥೆ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಪ್ರಕಾರ, ಆಕಾಶ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯು ಮಧ್ಯಮ-ದೂರದ, ಭೂಮಿಯಿಂದ ಗಗನಕ್ಕೆ ಹಾರುವ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಸ್ಥಿರ ಗುರಿಗಳಿನ್ನು ಭೇದಿಸಿ ರಕ್ಷಣೆ ನೀಡಬಲ್ಲದು. ಈ ವ್ಯವಸ್ಥೆಯು ಚಲನಶೀಲತೆಯೊಂದಿಗೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ನೈಜ-ಸಮಯದಲ್ಲಿ ಬಹು-ಸಂವೇದಕ ದತ್ತಾಂಶ ಸಂಸ್ಕರಣೆ ಮಾಡಿ ಯಾವುದೇ ದಿಕ್ಕಿನಿಂದ ಬರುವ ಮಿಸೈಲ್‌ಗಳನ್ನು ಹೊಡೆದುರುಳಿಸಬಲ್ಲದು. ಭಾರತೀಯ ಸೇನೆಯು ಗೋಲ್ಡನ್ ಟೆಂಪಲ್ ಸುತ್ತಲೂ L-70 ವಾಯು ರಕ್ಷಣಾ ಬಂದೂಕುಗಳನ್ನು ನಿಯೋಜಿಸಿತ್ತು.

ಈ ಸುದ್ದಿಯನ್ನು ಓದಿ: Operation Sindoor: ಇಡೀ ಪಾಕಿಸ್ತಾನ ಭಾರತದ ವ್ಯಾಪ್ತಿಯಲ್ಲಿದೆ; ಉನ್ನತ ಸೇನಾಧಿಕಾರಿ

ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಯಾವ ಶಸ್ತ್ರಾಸ್ತ್ರ ಹೊಂದಿದೆ?

ಪಾಕಿಸ್ತಾನವು ಮೇ 7ರಂದು ಅವಂತಿಪೋರಾ, ಶ್ರೀನಗರ, ಜಮ್ಮು, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ್, ಬಟಿಂಡಾ, ಚಂಡೀಗಢ, ಪಠಾಣ್‌ಕೋಟ್, ಫಲೋಡಿ, ಉತ್ತರಲೈ, ನಲ್ ಮತ್ತು ಭುಜ್ ಸೇರಿದಂತೆ ಭಾರತದ ಅನೇಕ ಪಟ್ಟಣಗಳು ಮತ್ತು ನಗರಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ವೈಮಾನಿಕ ದಾಳಿ ನಡೆಸಿತು.

ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು, ವಾಯುಸೇನೆ, ಭೂಸೇನೆ ಮತ್ತು ನೌಕಾಪಡೆಯ ಸಂಯೋಜಿತ ಸಾಮರ್ಥ್ಯದೊಂದಿಗೆ ಎಲ್ಲ ದಾಳಿಗಳನ್ನು ಯಶಸ್ವಿಯಾಗಿ ತಡೆಗಟ್ಟಿತು. ಭಾರತದ ವಾಯು ರಕ್ಷಣಾ ಗ್ರಿಡ್‌ನಲ್ಲಿ ಎಸ್-400 ವ್ಯವಸ್ಥೆ, ಬರಾಕ್ 8, ಪೆಕೋರಾ, ಸ್ಪೈಡರ್ ತ್ವರಿತ-ಪ್ರತಿಕ್ರಿಯೆ ಕ್ಷಿಪಣಿಗಳು, ಮತ್ತು ನವೀಕರಿಸಿದ ಎಲ್-70 ಮತ್ತು Zu-23-2B ಫಿರಂಗಿಗಳು ಸೇರಿವೆ.