Rashmika Mandanna: ಹುಟ್ಟುಹಬ್ಬದ ಶುಭಾಶಯಗಳು ವಿಜ್ಜು; ವಿಜಯ್ ದೇವರಕೊಂಡಗೆ ಪ್ರೀತಿಯಿಂದ ಬರ್ತ್ಡೇ ವಿಶ್ ತಿಳಿಸಿದ ರಶ್ಮಿಕಾ ಮಂದಣ್ಣ
Rashmika Mandanna: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ರೀಲೇಷನ್ಶಿಪ್ ಬಗ್ಗೆ ಅಭಿಮಾನಿಗಳಲ್ಲಿ ಗುಸುಗುಸು ಮುಂದುವರಿಯುತ್ತಿವೆ. ಶುಕ್ರವಾರ ಮೇ 9 ರಂದು ವಿಜಯ್ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿದ ಸಂದರ್ಭದಲ್ಲಿ, ರಶ್ಮಿಕಾ ತಮ್ಮ ರೂಮರ್ಡ್ ಗೆಳೆಯನಿಗೆ ಇನ್ಸ್ಟಾಗ್ರಾಮ್ನಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ


ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ರೀಲೇಷನ್ಶಿಪ್ ಬಗ್ಗೆ ಅಭಿಮಾನಿಗಳಲ್ಲಿ ಗುಸುಗುಸು ಮುಂದುವರಿಯುತ್ತಿವೆ. ಶುಕ್ರವಾರ ಮೇ 9 ರಂದು ವಿಜಯ್ ತಮ್ಮ 36ನೇ ಹುಟ್ಟುಹಬ್ಬವನ್ನು (Birthday) ಆಚರಿಸಿದ ಸಂದರ್ಭದಲ್ಲಿ, ರಶ್ಮಿಕಾ ತಮ್ಮ ರೂಮರ್ಡ್ ಗೆಳೆಯನಿಗೆ ಇನ್ಸ್ಟಾಗ್ರಾಮ್ನಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಇದು ರೊಮ್ಯಾಂಟಿಕೆ ಜೋಡಿ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.

ರಶ್ಮಿಕಾ, ವಿಜಯ್ರ ಫೋಟೋವನ್ನು ಹಂಚಿಕೊಂಡು, “ನಾನು ತುಂಬಾ ತಡವಾಗಿಯೇ ಶುಭಾಶಯ ಕೋರುತ್ತಿದ್ದೇನೆ, ಆದರೆ ವಿಜ್ಜುಗೆ ತುಂಬಾ ಸಂತೋಷದ ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದಿದ್ದಾರೆ. ನಿನ್ನ ಜೀವನದ ಪ್ರತಿ ದಿನಗಳು ಆಶೀರ್ವಾದ, ಪ್ರೀತಿ, ಆನಂದ, ಆರೋಗ್ಯ, ಸಂಪತ್ತು, ಶಾಂತಿ ಮತ್ತು ಎಲ್ಲವೂ ತುಂಬಿರಲಿ” ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ವಿಜಯ್ ರಶ್ಮಿಕಾ ಅವರ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ರಿಪೋಸ್ಟ್ ಮಾಡಿ, “ಕ್ಯೂಟೆಸ್ಟ್! ನಿನ್ನ ಎಲ್ಲಾ ಶುಭಾಶಯಗಳು ಮತ್ತು ಆಶೀರ್ವಾದಗಳು ನನಸಾಗಲಿ” ಎಂದು ಬರೆದಿದ್ದಾರೆ.

ಈ ಜೋಡಿ ತಮ್ಮ ಸಂಬಂಧವನ್ನು ಎಂದಿಗೂ ಸಾರ್ವಜನಿಕವಾಗಿ ದೃಢಪಡಿಸಿಲ್ಲವಾದರೂ, ಅವರ ಆನ್ಲೈನ್ ಸಂವಾದಗಳು ಮತ್ತು ಆಫ್-ಸ್ಕ್ರೀನ್ ಬಾಂಧವ್ಯವು ಡೇಟಿಂಗ್ ಊಹಾಪೋಹಗಳಿಗೆ ಕಾರಣವಾಗುತ್ತಿದೆ. ಅಭಿಮಾನಿಗಳು ಗಮನಿಸಿರುವಂತೆ, ಇಬ್ಬರೂ ಒಂದೇ ರೀತಿಯ ಸ್ಥಳಗಳಿಂದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ, ಒಟ್ಟಿಗೆ ರಜೆ ಕಳೆಯುತ್ತಿರಬಹುದೆಂಬ ಸುಳಿವು ನೀಡುತ್ತಾರೆ, ಆದರೆ ಒಟ್ಟಿಗೆ ಫೋಟೋಗಳನ್ನು ಪೋಸ್ಟ್ ಮಾಡುವುದಿಲ್ಲ. ಕಳೆದ ತಿಂಗಳು, ರಶ್ಮಿಕಾ ತಮ್ಮ ಹುಟ್ಟುಹಬ್ಬವನ್ನು ಬೀಚ್ನಲ್ಲಿ ಆಚರಿಸಿದ ಫೋಟೋಗಳನ್ನು ಹಂಚಿಕೊಂಡಿದ್ದರು, ಇದೇ ಸಮಯದಲ್ಲಿ ವಿಜಯ್ ಕೂಡ ಬೀಚ್ ಫೋಟೋಗಳನ್ನು ಪೋಸ್ಟ್ ಮಾಡಿದ್ದರು, ಇದು ಮತ್ತಷ್ಟು ರೂಮರ್ಗಳಿಗೆ ಕಾರಣವಾಗಿತ್ತು.

ತಮ್ಮ ಹುಟ್ಟುಹಬ್ಬದಂದು, ವಿಜಯ್ ತಮ್ಮ ಮುಂಬರುವ ಯೋಜನೆಗಳ ಕುರಿತು ಅಭಿಮಾನಿಗಳಿಗೆ ಸುದ್ದಿಗಳನ್ನು ನೀಡಿದರು. ತಮ್ಮ ಮುಂಬರುವ ಚಿತ್ರಗಳಾದ ಕಿಂಗ್ಡಮ್, ವಿಡಿ14, ಮತ್ತು ಎಸ್ವಿಸಿ 59ರ ಪೋಸ್ಟರ್ಗಳನ್ನು “ನೆಕ್ಸ್ಟ್” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಚಿತ್ರರಂಗದ ಸುದ್ದಿಗಳ ಜೊತೆಗೆ, ವಿಜಯ್ ತಮ್ಮ ಉದಾರವಾದ ಕೆಲಸದಿಂದಲೂ ಸುದ್ದಿಯಾಗಿದ್ದು, ತಮ್ಮ ಉಡುಪಿನ ಬ್ರ್ಯಾಂಡ್ ಆರ್ಡಬ್ಲ್ಯೂಡಿವೈನ ಆದಾಯದ ಒಂದು ಭಾಗವನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದರು. ಅಭಿಮಾನಿಗಳು ವಿಜಯ್ ದೇವರಕೊಂಡಾ ಅವರ ನಡೆಯನ್ನು ಮೆಚ್ಚಿಕೊಂಡಿದ್ದಾರೆ.