ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amarnath Yatra 2025: ಯಾತ್ರೆ ಆರಂಭಕ್ಕೂ ಮುನ್ನ ಬಹಿರಂಗವಾದ ಅಮರನಾಥ ಶಿವಲಿಂಗದ ಚಿತ್ರ

ಅಮರನಾಥ ಯಾತ್ರೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ದೇಶವಿದೇಶಗಳ ಸಾಕಷ್ಟು ಭಕ್ತರು ಐತಿಹಾಸಿಕ ಮಹತ್ವವುಳ್ಳ ಮಂಜುಗಡ್ಡೆಯ ಶಿವಲಿಂಗವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಜುಲೈ ತಿಂಗಳ ಆರಂಭದಿಂದಲೇ ಯಾತ್ರೆ ಪ್ರಾರಂಭವಾಗಲಿದೆ. ಆದರೆ ಇದರ ಆರಂಭಕ್ಕೆ ಎರಡು ತಿಂಗಳ ಮೊದಲೇ ಅಮರನಾಥ ಶಿವಲಿಂಗದ ಮೊದಲ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮರನಾಥ ಯಾತ್ರೆ ಪ್ರಾರಂಭಕ್ಕೂ ಮುನ್ನ ಶಿವನ ದರ್ಶನ

ಶ್ರೀನಗರ: ಹಿಂದೂಗಳ ಪವಿತ್ರ ಯಾತ್ರಾಸ್ಥಳವಾದ ಅಮರನಾಥ ಯಾತ್ರೆ (Amarnath Yatra 2025) ಪ್ರಾರಂಭವಾಗುವ ಮುನ್ನವೇ ಅಮರನಾಥ ಶಿವಲಿಂಗದ (Amarnath Shivling) ಮೊದಲ ಚಿತ್ರಗಳು ಬಹಿರಂಗವಾಗಿವೆ. 2025ರ ವಾರ್ಷಿಕ ಅಮರನಾಥ ಯಾತ್ರೆ ಜುಲೈ 3 ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನವೇ ಪಂಜಾಬ್‌ನ ( Punjab) ಕೆಲವು ಭಕ್ತರು ಈಗಾಗಲೇ ಪವಿತ್ರ ಗುಹೆಗೆ ಭೇಟಿ ನೀಡಿ ಪೂಜ್ಯ ಶಿವಲಿಂಗದ ಚಿತ್ರಗಳನ್ನು ಸೆರೆಹಿಡಿದಿದು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಇದು ಈಗ ಯಾತ್ರೆಗಾಗಿ ಕಾತರದಿಂದ ಕಾಯುತ್ತಿರುವ ಭಕ್ತರ ಉತ್ಸಾಹವನ್ನು ಹೆಚ್ಚುವಂತೆ ಮಾಡಿದೆ.

ಈ ವರ್ಷ ಅಮರನಾಥ ಯಾತ್ರೆ ಅತ್ಯಂತ ಕಷ್ಟಕರವಾಗಿರಲಿದೆ. ಯಾಕೆಂದರೆ ಭಾರಿ ಹಿಮಪಾತದಿಂದಾಗಿ ಅಮರನಾಥ ಯಾತ್ರಿಕರಿಗಾಗಿ ಮಾಡಲಾಗುವ ಸಿದ್ಧತೆಗಳು ಸವಾಲಾಗಿ ಪರಿಣಮಿಸಿದೆ. ಕೆಲವು ಪ್ರದೇಶಗಳಲ್ಲಿ ಸುಮಾರು 10 ರಿಂದ 20 ಅಡಿಗಳಷ್ಟು ಆಳದವರೆಗೆ ಹಿಮಪಾತಗಳು ಉಂಟಾಗಿವೆ ಎನ್ನಲಾಗಿದೆ. ಈ ವರ್ಷದ ಅಮರನಾಥ ಯಾತ್ರೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ದೇಶವಿದೇಶಗಳ ಸಾಕಷ್ಟು ಭಕ್ತರು ಐತಿಹಾಸಿಕ ಮಹತ್ವವುಳ್ಳ ಮಂಜುಗಡ್ಡೆಯ ಶಿವಲಿಂಗವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಜುಲೈ ತಿಂಗಳ ಆರಂಭದಿಂದಲೇ ಯಾತ್ರೆ ಪ್ರಾರಂಭವಾಗಲಿದೆ. ಆದರೆ ಇದರ ಆರಂಭಕ್ಕೆ ಎರಡು ತಿಂಗಳ ಮೊದಲೇ ಅಮರನಾಥ ಶಿವಲಿಂಗದ ಮೊದಲ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮರನಾಥ ದೇವಾಲಯ ಮಂಡಳಿಯ ಪ್ರಕಾರ 2025 ರ ಅಮರನಾಥ ಯಾತ್ರೆ ಜುಲೈ 3ರಂದು ಪ್ರಾರಂಭವಾಗಲಿದ್ದು, ರಕ್ಷಾ ಬಂಧನ ಹಬ್ಬದೊಂದಿಗೆ ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ.ದೇಶದ ಮೂಲೆಮೂಲೆಗಳಿಂದ ಭಕ್ತರು ಅಮರನಾಥ ಗುಹೆಗೆ ಆಗಮಿಸಲು ಸಜ್ಜಾಗುತ್ತಿದ್ದಾರೆ. ಇಲ್ಲಿ ಅವರು ಬಾಬಾ ಬರ್ಫಾನಿ, ಶಿವನ ದರ್ಶನ ಮಾಡಲಿದ್ದಾರೆ.

ಈಗಾಗಲೇ ಇಲ್ಲಿಗೆ ಭೇಟಿ ನೀಡಿರುವ ಪಂಜಾಬ್‌ನ ಕೆಲವು ಭಕ್ತರು ಪವಿತ್ರ ಗುಹೆಗೆ ಭೇಟಿ ನೀಡಿ ಪೂಜ್ಯ ಶಿವಲಿಂಗದ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಇದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಯಾತ್ರೆ ಆರಂಭವಾಗುವವರೆಗೆ ಕಾತರದಿಂದ ಕಾಯುತ್ತಿರುವ ಭಕ್ತರ ಉತ್ಸಾಹ ಹೆಚ್ಚಿಸಿದೆ.

ಜುಲೈ ತಿಂಗಳಲ್ಲಿ ಆರಂಭವಾಗುವ ಅಮರನಾಥ ಯಾತ್ರೆಗಾಗಿ ಹಿಮದಿಂದ ಆವೃತವಾದ ಮಾರ್ಗಗಳನ್ನು ತೆರವುಗೊಳಿಸಲು ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಬಾಲ್ಟಾಲ್ ಮತ್ತು ಚಂದನ್ವಾರಿ ಎರಡೂ ಪ್ರಮುಖ ಮಾರ್ಗಗಳಲ್ಲಿ ಹಿಮ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ ಯಾತ್ರೆ ಆರಂಭವಾಗುವ ಮೊದಲೇ ಯಾತ್ರಿಕರು ನಡೆಯಲು ರಸ್ತೆ ಈ ಹಿಂದಿನಂತೆ ಆಗಬಹುದು ಎನ್ನುವ ನಿರೀಕ್ಷೆ ಇದೆ.

ಇದನ್ನೂ ಓದಿ: Balvinder Singh: 844 ಕೋಟಿ ರೂ. ಮೊತ್ತದ ಮನೆ, 85ಕೋಟಿ ನಂಬರ್‌ ಪ್ಲೇಟ್‌... ಬಲ್ವಿಂದರ್‌ ಸಿಂಗ್‌ ಐಷಾರಾಮಿ ಬದುಕು ಹೇಗಿತ್ತು ಗೊತ್ತಾ?

ಭಾರೀ ಹಿಮಪಾತವಾಗುತ್ತಿರುವುದರಿಂದ ಈ ವರ್ಷದ ಸಿದ್ಧತೆಗಳು ಸವಾಲಿನದ್ದಾಗಿವೆ. ಕೆಲವು ಪ್ರದೇಶಗಳಲ್ಲಿ 10 ರಿಂದ 20 ಅಡಿ ಎತ್ತರದ ಹಿಮಪಾತಗಳು ಕಂಡು ಬಂದಿವೆ. ಯಾತ್ರೆ ಪ್ರಾರಂಭವಾಗುವ ಮೊದಲು ರಸ್ತೆ ಸುರಕ್ಷಿತ ಮತ್ತು ಯಾತ್ರಿಕರು ನಡೆಯಲು ಯೋಗ್ಯವಾಗಿವೆ ಎಂದು ಖಚಿತಪಡಿಸಿಕೊಳ್ಳುವ ಸಲುವಾಗಿ ದಾರಿಯಲ್ಲಿ ಬಿದ್ದಿರುವ ಹಿಮ ತೆರವು ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಯಾತ್ರೆಗೆ ನಡೆಯುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸೋಮವಾರ ಶ್ರೀನಗರದ ಪಂಥ ಚೌಕ್‌ನಲ್ಲಿರುವ ಅಮರನಾಥ ಯಾತ್ರಾ ಸಾರಿಗೆ ಶಿಬಿರಕ್ಕೆ ಭೇಟಿ ನೀಡಿದರು. ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಹೊರತಾಗಿಯೂ ಸಾವಿರಾರು ಭಕ್ತರು ಧೈರ್ಯದಿಂದ ಅಮರನಾಥ ಯಾತ್ರೆ ನಡೆಸಲು ಕಾಯುತ್ತಿದ್ದಾರೆ. ಈಗಾಗಲೇ 3,60,000 ಕ್ಕೂ ಹೆಚ್ಚು ಮಂದಿ ಅಮರನಾಥ ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಅಧಿಕೃತ ಪ್ರಾರಂಭ ದಿನಾಂಕ ಸಮೀಪಿಸುತ್ತಿದ್ದಂತೆ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.