ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashid Khan: ಐಪಿಎಲ್‌ನಲ್ಲಿ ಅನಗತ್ಯ ದಾಖಲೆ ಬರೆದ ರಶೀದ್‌ ಖಾನ್‌

IPL 2025: ಮುಂಬೈ ವಿರುದ್ಧ 2 ಸಿಕ್ಸರ್‌ ಹೊಡೆಸಿಕೊಳ್ಳುವ ಮೂಲಕ ರಶೀದ್‌ ಖಾನ್‌ ಹಾಲಿ ಆವೃತ್ತಿಯಲ್ಲಿ ಒಟ್ಟು 33 ಸಿಕ್ಸರ್‌ ಚಚ್ಚಿಸಿಕೊಂಡರು. ಈ ಮೂಲಕ ಐಪಿಎಲ್‌ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸರ್‌ ಹೊಡೆಸಿಕೊಂಡ ಬೌಲರ್‌ ಎಂಬ ಕೆಟ್ಟ ದಾಖಲೆ ಬರೆದರು.

ಐಪಿಎಲ್‌ನಲ್ಲಿ ಅನಗತ್ಯ ದಾಖಲೆ ಬರೆದ ರಶೀದ್‌ ಖಾನ್‌

Profile Abhilash BC May 31, 2025 10:34 AM

ಮುಲ್ಲಾನ್‌ಪುರ್‌(ಚಂಡೀಗಢ): ಶುಕ್ರವಾರ ನಡೆದಿದ್ದ ಮುಂಬೈ ಇಂಡಿಯನ್ಸ್‌ ಮತ್ತು ಗುಜರಾತ್‌ ಟೈಟಾನ್ಸ್‌(GT vs MI) ನಡುವಣ ಐಪಿಎಲ್‌ ಎಲಿಮಿನೇಟರ್‌( IPL Eliminator ) ಪಂದ್ಯದಲ್ಲಿ ರಶೀದ್‌ ಖಾನ್‌(Rashid Khan) ಅನಗತ್ಯ ದಾಖಲೆ ಬರೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸರ್‌ ಹೊಡೆಸಿಕೊಂಡ ಬೌಲರ್‌ ಎನಿಸಿಕೊಂಡಿದ್ದಾರೆ.

ಮುಂಬೈ ವಿರುದ್ಧದ ಪಂದ್ಯದಲ್ಲಿ 4 ಓವರ್‌ ಬೌಲಿಂಗ್‌ ನಡೆಸಿ 31 ರನ್‌ ಹೊಡೆಸಿಕೊಂಡರು. ಟೂರ್ನಿಯುದ್ದಕ್ಕೂ ಅವರು ಅತ್ಯಂತ ದುಬಾರಿ ಬೌಲಿಂಗ್‌ ಪ್ರದರ್ಶನ ತೋರಿದರು. ಈ ಬಾರಿ ಅವರು ಕಿತ್ತದ್ದು ಕೇವಲ 3 ವಿಕೆಟ್‌ ಮಾತ್ರ. ಮುಂಬೈ ವಿರುದ್ಧ 2 ಸಿಕ್ಸರ್‌ ಹೊಡೆಸಿಕೊಳ್ಳುವ ಮೂಲಕ ರಶೀದ್‌ ಖಾನ್‌ ಹಾಲಿ ಆವೃತ್ತಿಯಲ್ಲಿ ಒಟ್ಟು 33 ಸಿಕ್ಸರ್‌ ಚಚ್ಚಿಸಿಕೊಂಡರು. ಈ ಮೂಲಕ ಐಪಿಎಲ್‌ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸರ್‌ ಹೊಡೆಸಿಕೊಂಡ ಬೌಲರ್‌ ಎಂಬ ಕೆಟ್ಟ ದಾಖಲೆ ಬರೆದರು. ಇದಕ್ಕೂ ಮುನ್ನ ಈ ಅನಗತ್ಯ ದಾಖಲೆ ಮೊಹಮ್ಮದ್‌ ಸಿರಾಜ್‌ ಹೆಸರಿನಲ್ಲಿತ್ತು. 2022ರಲ್ಲಿ ಆರ್‌ಸಿಬಿ ಪರ ಆಡುವ ವೇಳೆ 31 ಸಿಕ್ಸರ್‌ ಬಿಟ್ಟುಕೊಟ್ಟಿದ್ದರು.

ಐಪಿಎಲ್‌ ಅತ್ಯಧಿಕ ಸಿಕ್ಸರ್‌ ಹೊಡೆಸಿಕೊಂಡ ಬೌಲರ್‌

ರಶೀದ್ ಖಾನ್-33 ಸಿಕ್ಸರ್‌

ಮೊಹಮ್ಮದ್ ಸಿರಾಜ್- 31 ಸಿಕ್ಸರ್‌

ವನಿಂದು ಹಸರಂಗ- 30 ಸಿಕ್ಸರ್‌

ಯುಜ್ವೇಂದ್ರ ಚಹಾಲ್- 30 ಸಿಕ್ಸರ್‌

ಡ್ವೇನ್ ಬ್ರಾವೋ- 29 ಸಿಕ್ಸರ್‌

ಇದನ್ನೂ ಓದಿ IPL 2025: ಸಿಕ್ಸರ್‌ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌

ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದಕ್ಕೆ ತಕ್ಕಂತೆ ಆರಂಭಿಕ ಜೋಡಿ ರೋಹಿತ್ (81) ಮತ್ತು ಜಾನಿ ಬೆಸ್ಟೊ (47) ಮೊದಲ ವಿಕೆಟ್‌ ಜತೆಯಾಟದಲ್ಲಿ 84 ರನ್ ಸೇರಿಸಿದರು. ಈ ಜತೆಯಾಟದಿಂದ ಮುಂಬೈ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 228 ರನ್ ಗಳಿಸಿತು. ಗುರಿ ಬೆನ್ನಟ್ಟಿದ್ದ ಗುಜರಾತ್ ತಂಡಕ್ಕೆ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 208 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.