Viral Video: ಪ್ರೀತಿಯ ತಾತನನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದ ಪೈಲಟ್- ಈ ಹೃದಯಸ್ಪರ್ಶಿ ವಿಡಿಯೊ ವೈರಲ್!
ವ್ಯಕ್ತಿಯೊಬ್ಬರು ಮೊದಲ ಬಾರಿಗೆ ತಮ್ಮ ಅಜ್ಜ-ಅಜ್ಜಿ ಹಾಗೂ ತಾಯಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ ವಿಡಿಯೊವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಮೊಮ್ಮಗನೇ ಈ ವಿಮಾನದ ಪೈಲಟ್ ಆಗಿದ್ದು, ತನ್ನ ಕುಟುಂಬ ಸದಸ್ಯರನ್ನು ತಾನು ಪೈಲಟ್ ಆಗಿರುವ ವಿಮಾನದಲ್ಲಿ ವಿಶೇಷವಾಗಿ ಸ್ವಾಗತಿಸಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ನವದೆಹಲಿ: ಪ್ರತಿಯೊಬ್ಬರಿಗೂ ಒಂದೊಳ್ಳೆ ಉದ್ಯೋಗ ಗಿಟ್ಟಿಸಿ ತನ್ನ ತಂದೆ ತಾಯಿಯ ಋಣ ತಿರಿಸಬೇಕೆಂಬ ಆಸೆ ಇರುತ್ತದೆ. ಅದರಲ್ಲೂ ಕುಟುಂಬ ಸದಸ್ಯರನ್ನು ಜೊತೆಗೂಡಿಸಿ ಟ್ರಿಪ್ ಹೋಗಬೇಕು, ಪ್ರಯಾಣ ಮಾಡಬೇಕು ಇತ್ಯಾದಿ ಕನಸು ಬಹುತೇಕರಿಗೆ ಇರುತ್ತದೆ. ಅದರಲ್ಲೂ ತನ್ನ ಜೀವನದಲ್ಲಿ ತಂದೆ-ತಾಯಿ ನಂತರ ಅಜ್ಜ-ಅಜ್ಜಿಯ ನೆನಪು, ಅವರೊಂದಿಗೆ ಕಳೆದ ನೆನಪುಗಳು ಬಹುತೇಕರಿಗೆ ವಿಶೇಷವಾಗಿರುತ್ತವೆ. ಇದೀಗ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ತಮ್ಮ ಅಜ್ಜ-ಅಜ್ಜಿ ಹಾಗೂ ತಾಯಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ ವಿಡಿಯೊ ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಮೊಮ್ಮಗನೇ ಈ ವಿಮಾನದ ಪೈಲಟ್ ಆಗಿದ್ದು, ತನ್ನ ಕುಟುಂಬ ಸದಸ್ಯರನ್ನು ತಾನು ಪೈಲಟ್ ಆಗಿರುವ ವಿಮಾನದಲ್ಲಿ ವಿಶೇಷವಾಗಿ ಸ್ವಾಗತಿಸಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ತಾನು ಪೈಲಟ್ ಆಗಿರುವ ವಿಮಾನದಲ್ಲಿ ತಮ್ಮ ಕುಟುಂಬವನ್ನು ಹೃದಯಸ್ಪರ್ಶಿ ಮಾತುಗಳ ಮೂಲಕ ಸ್ವಾಗತಿಸಿರುವ ವ್ಯಕ್ತಿ ಬೇರೆ ಯಾರು ಅಲ್ಲ. ಇಂಡಿಗೊದ ಪೈಲಟ್ ಪ್ರದೀಪ್ ಕೃಷ್ಣನ್, ಇನ್‌ಸ್ಟಾಗ್ರಾಂನಲ್ಲಿ ಆಗಾಗ್ಗೆ ತಮ್ಮ ವಿಮಾನ ಪ್ರಯಾಣದ ವಿಡಿಯೊಗಳನ್ನು ಶೇರ್ ಮಾಡುವ ಇವರು, ಇದೀಗ ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡಿದ್ದು, ಈ ವಿಡಿಯೊಗೆ ನೆಟ್ಟಿಗರು ಮೆಚ್ಚುಗೆ ನೀಡಿದ್ದಾರೆ. ವಿಮಾನವು ಚೆನ್ನೈಯಿಂದ ಕೊಯಮತ್ತೂರಿಗೆ ಹೊರಟಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ತನ್ನ ಅಜ್ಜಿ ಮತ್ತು ತಾಯಿ ಕೂಡ ಇದ್ದಾರೆ ಎಂದು ಹೇಳಿಕೊಂಡಿದ್ದಾರೆ.
ವಿಮಾನ ಟೇಕ್‌ಆಫ್ ಆಗುವ ಮುನ್ನ, ಕೃಷ್ಣನ್ ಅಜ್ಜ-ಅಜ್ಜಿ ಹಾಗೂ ತಾಯಿ ಇದೇ ವಿಮಾನದಲ್ಲಿದ್ದಾರೆ ಎಂದು ಘೋಷಣೆ ಮಾಡುತ್ತಾರೆ. ನನ್ನ ಕುಟುಂಬ ನನ್ನೊಂದಿಗೆ ಪ್ರಯಾಣ ಮಾಡುತ್ತಿದೆ ಎಂದು ಹೇಳಿಕೊಳ್ಳಲು ತುಂಬಾ ಸಂತೋಷವಾಗಿದೆ. ನನ್ನ ತಾತ, ಅಜ್ಜಿ, ಅಮ್ಮ 29 ನೇ ಸಾಲಿನಲ್ಲಿ ಕುಳಿತಿದ್ದಾರೆ. ನನ್ನ ಅಜ್ಜ ಇಂದು ನನ್ನೊಂದಿಗೆ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. ನಾನು ಅಜ್ಜನ TVS50 ಕಾರಿನ ಹಿಂದಿನ ಸೀಟಿನಲ್ಲಿ ಹಲವು ಬಾರಿ ಪ್ರಯಾಣ ಬೆಳೆಸಿದ್ದೇನೆ. ಈಗ ನಾನು ಸವಾರಿ ನೀಡಬೇಕಿದೆ ಈ ಸರದಿ ನನ್ನದು’ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.
ಪ್ರದೀಪ್ ಕೃಷ್ಣನ್ ಅವರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ಈ ಹೃದಯಸ್ಪರ್ಶಿ ವಿಡಿ ಯೊಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಮಗ ಮಾತನಾಡುತ್ತಿದ್ದಂತೆ ಕೇಳಿ ಭಾವುಕವಾಗಿ ತಾಯಿ ಕಣ್ಣೀರಿಟ್ಟರೆ, ಅಜ್ಜ ಅಜ್ಜಿ ಕೂಡ ಭಾವುಕರಾಗಿದ್ದಾರೆ.ಈ ವೇಳೆಯಲ್ಲಿ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಜೋರಾಗಿ ಚಪ್ಪಾಳೆ ತಟ್ಟಿದ್ದು ಪ್ರದೀಪ್ ಕೃಷ್ಣನ್ ಅವರ ಅಜ್ಜ ಎದ್ದು ಸಹಪ್ರಯಾಣಿಕರಿಗೆ ನಮಸ್ಕರಿಸಿದ್ದಾರೆ.
ಇದನ್ನು ಓದಿ: Viral Video: ಕಣ್ಣೀರು ಹಾಕಿದ ಕೆನಡಾ ಎನ್‌ಡಿಪಿ ನಾಯಕ ಖಲಿಸ್ತಾನಿ ಜಗಮೀತ್ ಸಿಂಗ್; ಕಾರಣವೇನು?
ಈ ವಿಡಿಯೊವನ್ನು ಪ್ರದೀಪ್ ಕೃಷ್ಣನ್ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ವಿಮಾನದಲ್ಲಿ ಕರೆದೊಯ್ಯುವುದು ಪ್ರತಿಯೊಬ್ಬ ಪೈಲಟ್‌ನ ಕನಸಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ. ವೀಡಿಯೊ ಲಕ್ಷಕ್ಕೂ ಅಧಿಕ ಹೆಚ್ಚು ವ್ಯೂವ್ಸ್ ಗಳಿಸಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಕೃಷ್ಣನ್ ಅವರನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ನಿಮ್ಮ ತಂದೆ ತಾಯಿಯ ಸಾರ್ಥಕ ಬದುಕು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಕ್ಷಣ ಅದ್ಬುತ ವಾಗಿದೆ ಎಂದು ಬರೆದುಕೊಂಡಿದ್ದಾರೆ.