ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shah Rukh Khan: ಮೆಟ್ ಗಾಲಾದಲ್ಲಿ ಶಾರುಖ್ ಭಾಗಿಯಾಗಲು ಅಸಲಿ ಕಾರಣ ಏನು ಗೊತ್ತಾ?

Shah Rukh Khan in Met Gala: ಬಾಲಿವುಡ್ ನಟ ಶಾರುಖ್ ಖಾನ್  ಇದೇ ಮೊದಲ ಬಾರಿ ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ  ಭಾಗವಹಿಸಿದ್ದು ಅಭಿಮಾನಿಗಳು ಇವರ ನ್ಯೂ ಲುಕ್ ಕಂಡು ಫಿದಾ ಆಗಿದ್ದಾರೆ. ಪ್ರಸಿದ್ಧ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಕಪ್ಪು ಬಣ್ಣದ ಬೆಸ್ಪೋಕ್ ಡ್ರೆಸ್ ನಿಂದ ಶಾರುಖ್ ಲುಕ್ ಸಂಪೂರ್ಣ ಭಿನ್ನವಾಗಿತ್ತು. ಇದೀಗ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾರುಖ್ ತಾನು ಯಾರಿಗಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ ಎಂಬ ವಿಚಾರವನ್ನು ಮಾಧ್ಯಮದ ಮುಂದೆ ಬಹಿರಂಗ ಪಡಿಸಿದ್ದಾರೆ.

ಮೆಟ್ ಗಾಲಾ ಫ್ಯಾಷನ್ ಶೋನಲ್ಲಿ  ಶಾರುಖ್ ಖಾನ್ ಪಾಲ್ಗೊಳ್ಳಲು ಇವರೇ ಕಾರಣ!..

Profile Pushpa Kumari May 6, 2025 3:49 PM

ನವದೆಹಲಿ: ವಿಶ್ವದ ಅತ್ಯಂತ ಪ್ರತಿಷ್ಠಿತ ಫ್ಯಾಷನ್ ಶೋ 2025ರ ಮೆಟ್ ಗಾಲಾ ಅದ್ಧೂರಿಯಾಗಿ ನಡೆಯುತ್ತಿದೆ. ಪ್ರತಿವರ್ಷ ಸೆಲೆಬ್ರಿಟಿಗಳು ಈ ಶೋ ನಲ್ಲಿ ಭಾಗವಹಿಸಿ ರೆಡ್ ಕಾರ್ಪೆಟ್ ಮೇಲೆ ರ‍್ಯಾಂಪ್‌ ವಾಕ್ ಮಾಡಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸುತ್ತಾರೆ. ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಇದೇ ಮೊದಲ ಬಾರಿ ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ಭಾಗವಹಿಸಿದ್ದು ಅಭಿಮಾನಿಗಳು ಇವರ ನ್ಯೂ ಲುಕ್ ಕಂಡು ಫಿದಾ ಆಗಿದ್ದಾರೆ. ಪ್ರಸಿದ್ಧ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಕಪ್ಪು ಬಣ್ಣದ ಬೆಸ್ಪೋಕ್ ಡ್ರೆಸ್ ನಿಂದ ಶಾರುಖ್ ಲುಕ್ ಸಂಪೂರ್ಣ ಭಿನ್ನವಾಗಿತ್ತು.ಇದೀಗ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾರುಖ್ ತಾನು ಯಾರಿಗಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ ಎಂಬ ವಿಚಾರವನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದಾರೆ.

ನ್ಯೂಯಾರ್ಕ್‌ ಮೆಟ್ರೋಪಾಲಿಟನ್ ಮ್ಯೂಜಿಯಂ ಆಫ್ ಆರ್ಟ್‌ನಲ್ಲಿ ಈ ವರ್ಷವೂ ಮೆಟ್‌ ಗಾಲಾ ಕಾರ್ಯಕ್ರಮ ಆರಂಭವಾಗಿದೆ. ಹಾಲಿವುಡ್, ಬಾಲಿವುಡ್ ತಾರೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅಂತೆಯೇ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಸ್ಟೈಲಿಶ್ ಲುಕ್‌ನಲ್ಲಿ ಅನೇಕರ ಗಮ‌ನ ಸೆಳೆದಿದ್ದಾರೆ. ಶಾರುಖ್ ಸಂಪೂರ್ಣ ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿದ್ದು ಟ್ರೆಂಚ್ ಕೋಟ್ ಹಾಕಿಕೊಂಡಿದ್ದಾರೆ. ಅವರು ನೆಕ್‌ಗೆ ಕಿಂಗ್ K ಹಾಗೂ SRK ಎಂದು ಡಿಸೈನ್ ಹೊಂದಿದ್ದ ಚೈನ್ ಧರಿಸಿದ್ದಾರೆ. ಅದರಂತೆ ಇತರ ಪೆಂಡೆಂಟ್‌ಗಳು ಮತ್ತು ಧರಿಸಿದ್ದ ಉಂಗುರಗಳು ಇವರ ಲುಕ್ ನ ಅಂದ ಮತ್ತಷ್ಟು ಹೆಚ್ಚಿಸಿದೆ. ಇದೀಗ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತನ್ನ ಮಕ್ಕಳು ಮುಖ್ಯ ಕಾರಣ ಎಂಬುದನ್ನು ತಿಳಿಸಿದ್ದಾರೆ.



ಇದನ್ನು ಓದಿ: Shah Rukh Khan: ಬಾಲಿವುಡ್ ಪ್ರವೇಶ ಮಾಡುವ ಮುನ್ನ ಶಾರುಖ್ ಹೇಗಿದ್ರು ಗೊತ್ತಾ? ಇಲ್ಲಿವೆ ಹಳೆಯ ಫೋಟೋಸ್!..

ನಾನು ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಬಗ್ಗೆ ಬಹಳ ನರ್ವಸ್ ಆಗಿದ್ದೆ. ಆದರೆ ನನ್ನ ಮಕ್ಕಳಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊ ಳ್ಳುವ ಬಗ್ಗೆ ಬಹಳ ಖುಷಿ ಇತ್ತು. ಮಕ್ಕಳಾದ ಸುಹಾನಾ, ಆರ್ಯನ್ ಹಾಗೂ ಅಬ್ರಾಮ್ ಮೂವರು ಕೂಡ ನನ್ನನ್ನು ಬಹಳ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಹುರಿ ದುಂಬಿಸಿದ್ದಾರೆ. ತಂದೆಯಾಗಿ ಮಕ್ಕಳ ಆಸೆ ಈಡೇರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ರಂಜಿಸಿದ್ದೇನೆ. ಮಕ್ಕಳು ಕೂಡ ಈ ಬಗ್ಗೆ ಹೆಮ್ಮೆಪಟ್ಟಿದ್ದಾರೆ ಎಂದು ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಹೇಳಿದ್ದಾರೆ.

ಬಳಿಕ ತನ್ನ ಔಟ್ ಫಿಟ್ ಬಗ್ಗೆ ಮಾತ‌ನಾಡಿ, ಸಬ್ಯಸಾಚಿ ಬಳಿ ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಔಟ್ ಫಿಟ್ ಇರಲಿ ಎಂದು ಮನವಿ ಮಾಡಿದ್ದೆ. ಐಷಾರಾಮಿ ಔಟ್‌ಫಿಟ್ ನಲ್ಲಿ ತಾನು ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿದ್ದಕ್ಕೆ ಖುಷಿಯನ್ನು ಹಂಚಿ ಕೊಂಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಶಾರುಖ್ ಅವರನ್ನು ಪತ್ರಕರ್ತರೊಬ್ಬರು ಯಾರು ನೀವು ಎಂದು ಪ್ರಶ್ನಿಸಿದ್ದು, ಇದಕ್ಕೆ ಶಾರುಖ್ ಖಾನ್ ಕೋಪಗೊಳ್ಳದೆ ಕೂಲ್ ಆಗಿಯೇ ಉತ್ತರಿಸಿದ್ದಾರೆ. ಹಾಯ್, ನಾನು ಶಾರುಖ್ ಎಂದು ಪರಿಚಯಿಸಿಕೊಂಡಿದ್ದರು. ಈ ದೃಶ್ಯ ಕೆಲ ಅಭಿಮಾನಿಗಳಿಗೆ ಅಚ್ಚರಿ ಎನಿಸಿತ್ತು. ಆದರೆ ಶಾರುಖ್ ಅವರ ಸರಳತೆ ಅಭಿಮಾನಿಗಳ ಹೃದಯ ಗೆದ್ದಿದೆ.