ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LET Terrorist: ಲಷ್ಕರ್ ಸಹ-ಸಂಸ್ಥಾಪಕ ಅಮೀರ್ ಹಮ್ಜಾಗೆ ಗಾಯ; ಆಸ್ಪತ್ರೆಗೆ ದಾಖಲು

ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಲಾಹೋರ್‌ನಲ್ಲಿರುವ ತನ್ನ ನಿವಾಸದಲ್ಲಿ ಬಿದ್ದು ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ. ಆತನ ಮೂಲಗಳು ಮನೆಯಲ್ಲಿಯೇ ಆತ ಅವಘಡದಲ್ಲಿ ಆತ ಗಾಯಗೊಂಡಿದ್ದಾನೆ ಎಂದು ತಿಳಿಸಿವೆ.

ಲಷ್ಕರ್ ಸಹ-ಸಂಸ್ಥಾಪಕ ಅಮೀರ್ ಹಮ್ಜಾಗೆ ಗಾಯ

Profile Vishakha Bhat May 21, 2025 10:08 AM

ಇಸ್ಲಾಮಾಬಾದ್‌: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಸಹ-ಸಂಸ್ಥಾಪಕ ಅಮೀರ್ ಹಮ್ಜಾ (LET Terrorist) ಲಾಹೋರ್‌ನಲ್ಲಿರುವ ತನ್ನ ನಿವಾಸದಲ್ಲಿ ಬಿದ್ದು ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ. ಎಲ್‌ಇಟಿಯ 17 ಸ್ಥಾಪಕ ಸದಸ್ಯರಲ್ಲಿ ಒಬ್ಬನಾದ ಹಮ್ಜಾ ಗಾಯಗೊಂಡಿದ್ದಾನೆ ಎಂದು ಆತನ ಮೂಲಗಳು ತಿಳಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ವರದಿಗಳು ಅವರು ಗುಂಡೇಟಿನಿಂದ ಗಾಯಗೊಂಡಿದ್ದಾನೆ ಎಂದು ವರದಿ ಮಾಡಿದ್ದವು. ಆದರೆ ಆತನ ಮೂಲಗಳು ಮನೆಯಲ್ಲಿಯೇ ಆತ ಅವಘಡದಲ್ಲಿ ಆತ ಗಾಯಗೊಂಡಿದ್ದಾನೆ ಎಂದು ತಿಳಿಸಿವೆ.

ಅಮೀರ್ ಹಮ್ಜಾ ಅಫ್ಘಾನ್ ಮುಜಾಹಿದ್ದೀನ್‌ನ ಲಷ್ಕರ್-ಎ-ತೊಯ್ಬಾದ ಪ್ರಮುಖ ನಾಯಕನಾಗಿದ್ದಾನೆ. ಈತ ಭಯೋತ್ಪಾದಕ ಲೇಖಕ ಕೂಡ ಆಗಿದ್ದಾನೆ. 2002 ರಲ್ಲಿ ಖಾಫಿಲಾ ದ'ವತ್ ಔರ್ ಶಹಾದತ್ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾನೆ. ಅಮೆರಿಕದ ಖಜಾನೆ ಇಲಾಖೆಯು ಲಷ್ಕರ್-ಎ-ತೊಯ್ಬಾವನ್ನು ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿದೆ ಮತ್ತು ಅಮೀರ್ ಹಮ್ಜಾನನ್ನು ನಿಷೇಧಿತ ಭಯೋತ್ಪಾದಕ ಎಂದು ಘೋಷಿಸಿದೆ.

ಪಹಲ್ಗಾಮ್​ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಬೇಕಾಗಿರುವ ಪ್ರಮುಖ ಉಗ್ರ ಮಸೂದ್​ ಅಜರ್​ ಭಾರೀ ನಷ್ಟ ಅನುಭವಿಸಿದ್ದಾನೆ. ಆತನ ಕುಟುಂಬದ 10 ಮಂದಿ, ನಾಲ್ವರು ಆಪ್ತರು ಸೇರಿ 14 ಮಂದಿ ಕ್ಷಿಪಣಿ ದಾಳಿಯಲ್ಲಿ ಹತರಾಗಿದ್ದಾರೆ. ಹವಾಲ್​​ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಪ್ರಧಾನ ಕಚೇರಿಯೂ ಭಾರತ ನಡೆಸಿದ ಕ್ಷಿಪಣಿ ದಾಳಿಗೆ ಧ್ವಂಸವಾಗಿದೆ. ಈ ವೇಳೆ ಅದರಲ್ಲಿ ಅಡಗಿದ್ದ ಉಗ್ರನ ಕುಟುಂಬದ 10 ಮಂದಿ ಸಾವನ್ನಪ್ಪಿದ್ದಾರೆ. ಇದನ್ನು ಸ್ವತಃ ಮಸೂದ್ ಅಜರ್ ಒಪ್ಪಿಕೊಂಡಿದ್ದಾನೆ.

ಈ ಸುದ್ದಿಯನ್ನೂ ಓದಿ: Operation Keller: ಆಪರೇಶನ್‌ ಸಿಂದೂರ್‌ ಬಳಿಕ ಈಗ ಆಪರೇಶನ್‌ ಕೆಲ್ಲರ್!‌

ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಉಗ್ರನ ಅಕ್ಕ, ಭಾವ, ಸೋದರಳಿಯ, ಆತನ ಪತ್ನಿ, ಮತ್ತೊಬ್ಬ ಸೊಸೆ ಮತ್ತು ಐವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಇದರ ಜೊತೆಗೆ, ಅಜರ್‌ನ ಆಪ್ತ ಸಹಚರ, ಆತನ ತಾಯಿ ಮತ್ತು ಇನ್ನಿಬ್ಬರು ಆಪ್ತರು ಸಾವನ್ನಪ್ಪಿದ್ದಾರೆ. ಭಾರತ ನಡೆಸಿದ ದಾಳಿಯಲ್ಲಿ ಜೈಶ್-ಎ-ಮೊಹಮದ್​ ಸಂಘಟನೆಯ ಪ್ರಧಾನ ಕಚೇರಿಯೂ ನೆಲಸಮವಾಗಿದೆ. ಅಂತಾರಾಷ್ಟ್ರೀಯ ಗಡಿಯಿಂದ 100 ಕಿಲೋಮೀಟರ್ ದೂರದಲ್ಲಿರುವ ಬಹಾವಪ್​​ಪುರದಲ್ಲಿರುವ ಮರ್ಕಜ್ ಸುಭಾನ್ ಅಲ್ಲಾದ ಮೇಲೆ ಭಾರತೀಯ ಸೇನೆ ದಾಳಿ ಮಾಡಿತು. ಇದು ಜೈಶ್-ಎ-ಮೊಹಮ್ಮದ್‌ನ ಕಾರ್ಯಾಚರಣೆಯ ಪ್ರಧಾನ ಕಚೇರಿ ಎಂದು ಗುರುತಿಸಲಾಗಿದೆ.