ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Reality Show: ರಿಯಾಲಿಟಿ ಶೋನಲ್ಲಿ ಅಶ್ಲೀಲ ಟಾಸ್ಕ್‌; ಛೀ.. ಥೂ ಎಂದ ಪ್ರೇಕ್ಷಕರು- ವಿಡಿಯೊ ಇದೆ

ಒಟಿಟಿಯ ರಿಯಾಲಿಟಿ ಶೋವೊಂದರಲ್ಲಿ ಅಶ್ಲೀಲ ವಿಷಯವನ್ನು ಪ್ರಸಾರ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದೆ ಪ್ರಿಯಾಂಕಾ ಚತುರ್ವೇದಿ, ಇದರ ಪ್ರಸಾರವನ್ನು ಇನ್ನೂ ಏಕೆ ನಿಷೇಧ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಾರ್ಯಕ್ರಮದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ರಿಯಾಲಿಟಿ ಶೋನಲ್ಲಿ ಅಶ್ಲೀಲ ಟಾಸ್ಕ್‌; ಛೀ.. ಥೂ ಎಂದ ಪ್ರೇಕ್ಷಕರು

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ( Ministry of Information & Broadcasting ) ಅಶ್ಲೀಲ ವಿಷಯಗಳ ಪ್ರಸಾರಕ್ಕೆ ನಿರ್ಬಂಧ ಹೇರಿದ್ದರೂ ಕೆಲವೊಂದು ಕಾರ್ಯಕ್ರಮಗಳಲ್ಲಿ ಈ ಕುರಿತು ಪ್ರಸಾರ ನಡೆಸಲಾಗುತ್ತದೆ. ಇದೀಗ ಒಟಿಟಿಯ ( OTT ) ರಿಯಾಲಿಟಿ ಶೋ (reality show )ವೊಂದರಲ್ಲಿ ಅಶ್ಲೀಲ ವಿಷಯವನ್ನು ಪ್ರಸಾರ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆ (Shiv Sena- Uddhav Balasaheb Thackeray ) ಸಂಸದೆ ಪ್ರಿಯಾಂಕಾ ಚತುರ್ವೇದಿ (MP Priyanka Chaturvedi), ಇದರ ಪ್ರಸಾರವನ್ನು ಇನ್ನೂ ಏಕೆ ನಿಷೇಧ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಾರ್ಯಕ್ರಮದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 2024ರ ಮಾರ್ಚ್ 14 ರಂದು ಅಶ್ಲೀಲ ವಿಷಯಗಳ ಪ್ರಸಾರಕ್ಕಾಗಿ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಿತ್ತು. ಆದರೂ ಕೆಲವೊಂದು ವೇದಿಕೆಗಳಲ್ಲಿ ಅಶ್ಲೀಲ ವಿಷಯಗಳ ಪ್ರಸಾರ ನಡೆಯುತ್ತಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ಅಜಾಜ್ ಖಾನ್ ನಿರೂಪಿಸುವ 'ಉಲ್ಲು' ಆಪ್ ನ ರಿಯಾಲಿಟಿ ಶೋ 'ಹೌಸ್ ಅರೆಸ್ಟ್' ಒಟಿಟಿ ವೆಬ್ ಸರಣಿಯಲ್ಲಿ ಸುಮಾರು ಎರಡು ನಿಮಿಷಗಳ ಅಶ್ಲೀಲ ಕ್ಲಿಪ್ ಅನ್ನು ಗುರುವಾರ ಎಕ್ಸ್‌ನಲ್ಲಿ ಹಂಚಿಕೊಂಡ ಸಂಸದೆ ಚತುರ್ವೇದಿ, ಇಂತಹ ಅಪ್ಲಿಕೇಶನ್‌ಗಳಲ್ಲಿನ ಅಶ್ಲೀಲ ವಿಷಯದ ಕುರಿತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಏನಿದೆ?



ಉಲ್ಲು ಮತ್ತು ಆಲ್ಟ್ ಬಾಲಾಜಿಯಂತಹ ಆಪ್‌ಗಳು ಅಶ್ಲೀಲ ವಿಷಯಗಳ ಕುರಿತು ಪ್ರಸಾರ ಮಾಡುತ್ತಿದೆ. ಇವುಗಳು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಷೇಧದಿಂದ ತಪ್ಪಿಸಿಕೊಂಡಿವೆ ಎಂದು ಈಗಾಗಲೇ ಸ್ಥಾಯಿ ಸಮಿತಿಯಲ್ಲಿ ತಿಳಿಸಿದ್ದೇನೆ. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಕೇಂದ್ರವು ನಿಷೇಧಿಸಿದ 18 ಆಪ್‌ಗಳನ್ನು ಪಟ್ಟಿ ಮಾಡಿರುವ ಅವರು ಸರ್ಕಾರವು ನಿರ್ಬಂಧಿಸಿದ ಆಪ್‌ಗಳು ಪ್ರಾಥಮಿಕವಾಗಿ ಸ್ಪಷ್ಟ ವಿಷಯವನ್ನು ವಿತರಿಸುವ ಪ್ಲಾಟ್‌ಫಾರ್ಮ್‌ಗಳಾಗಿದ್ದವು. ಈ ಕೆಳಗಿನ 18 ಆಪ್‌ಗಳನ್ನು ನಿಷೇಧಿಸಲಾಗಿದೆ. ಆಶ್ಚರ್ಯಕರವೆಂದರೆ ಈ ಎರಡು ದೊಡ್ಡ ಆಪ್‌ಗಳನ್ನು ಹೊರಗಿಡಲಾಗಿದೆ. ಉಲ್ಲು ಮತ್ತು ಆಲ್ಟ್ ಬಾಲಾಜಿ ಆಪ್ ಅನ್ನು ಈ ನಿಷೇಧದಿಂದ ಏಕೆ ಹೊರಗಿಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕ್ಲಿಪ್‌ನಲ್ಲಿ ಖಾನ್ ತಮ್ಮ ರಿಯಾಲಿಟಿ ಶೋನಲ್ಲಿ ಕಾಮಸೂತ್ರದಲ್ಲಿ ಲೈಂಗಿಕ ಸ್ಥಾನಗಳ ಬಗ್ಗೆ ಸ್ಪರ್ಧಿಯೊಬ್ಬರನ್ನು ಕೇಳುತ್ತಿರುವುದು ಕಂಡುಬರುತ್ತದೆ. ಅನಂತರ ಅವರು ಇತರ ಸ್ಪರ್ಧಿಗಳಿಂದ ಇದನ್ನು ಪ್ರದರ್ಶಿಸಲು ಹೇಳಿದ್ದಾರೆ. ಅಶ್ಲೀಲ ವಿಷಯದ ಪ್ರಸಾರವನ್ನು ನಿಷೇಧಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಕುರಿತು ಸುಪ್ರೀಂ ಕೋರ್ಟ್ ಏಪ್ರಿಲ್ 28 ರಂದು ಕೇಂದ್ರ, ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನೊಟೀಸ್ ನೀಡಿದ ಕೆಲವು ದಿನಗಳ ಬಳಿಕ ಚತುರ್ವೇದಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಎ.ಜಿ. ಮಸಿಹ್ ಅವರ ಪೀಠವು ಇದು ಅತ್ಯಂತ ಕಳವಳಕಾರಿ ವಿಷಯ. ಒಟಿಟಿ ಪ್ಲಾಟ್‌ಫಾರ್ಮ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ವಿಷಯವನ್ನು ನಿಯಂತ್ರಿಸಲು ಕೋರಿ ಸಲ್ಲಿಸಲಾದ ಪಿಐಎಲ್‌ನಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಆಲ್ಟ್ ಬಾಲಾಜಿ, ಉಲ್ಲು, ಎಕ್ಸ್, ಮೆಟಾ ಇಂಕ್, ಗೂಗಲ್, ಮುಬಿ, ಆಪಲ್ ಮತ್ತು ಇತರರಿಂದ ಅದು ಪ್ರತಿಕ್ರಿಯೆಯನ್ನು ಕೇಳಿ ನೊಟೀಸ್ ಜಾರಿ ಮಾಡಿದೆ.



ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ದುಬೆ, ಇಂತಹ ವಿಷಯಗಳಿಗೆ ಅನುಮತಿಸಲಾಗುವುದಿಲ್ಲ. ಈ ಬಗ್ಗೆ ಸಮಿತಿಯು ಖಂಡಿತಾ ಕ್ರಮ ಕೈಗೊಳ್ಳುತ್ತದೆ ಎಂದು ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಹಾರದ ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥ ಬರುಣ್ ರಾಜ್ ಸಿಂಗ್ ಅವರು ಕೂಡ ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.



ಇದನ್ನೂ ಓದಿ: Bomb Threat: 3 ಗಂಟೆಯೊಳಗೆ ಬ್ಲಾಸ್ಟ್‌! ಚಾಮರಾಜನಗರ ಡಿಸಿ ಕಚೇರಿಗೆ ಬಾಂಬ್‌ ಬೆದರಿಕೆ

ಖಾನ್ ತಮ್ಮ ರಿಯಾಲಿಟಿ ಶೋನಲ್ಲಿ ಲೈಂಗಿಕ ಸ್ಥಾನದ ಬಗ್ಗೆ ಮಾತನಾಡುತ್ತಾರೆ. ಇದೆಲ್ಲವನ್ನೂ ಟಿವಿಯಲ್ಲಿ ತೋರಿಸಲಾಗುತ್ತದೆ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಣ್ಣು ಮುಚ್ಚಿ ಮಲಗುತ್ತದೆ ಎಂದು ಅವರು ಎಕ್ಸ್ ನಲ್ಲಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗೆ ಗುರಿಯಾಗಿರುವ ಈ ಕಾರ್ಯಕ್ರಮಕ್ಕೆ ಕೆಲವರು ಪ್ರತಿಕ್ರಿಯಿಸಿ ಛೀ ಟಿವಿ ಕಾರ್ಯಕ್ರಮಗಳು ಎಷ್ಟು ಕೆಳಮಟ್ಟಕ್ಕೆ ತಂದು ನಿಲ್ಲಿಸಿವೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಇಂತಹ ಟಿವಿ ಕಾರ್ಯಕ್ರಮಗಳನ್ನು ಹೇಗೆ ಅನುಮೋದಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.